Advertisement
ಆಸ್ಪತ್ರೆಯ ಆವರಣದಲ್ಲಿ ಸಿಲಿಂಡರ್ ಸ್ಫೋಟಗೊಂಡದ್ದೇ ಬೆಂಕಿ ಹತ್ತಿಕೊಳ್ಳಲು ಕಾರಣ ಎಂದು ಹೇಳಲಾಗಿದೆ. ಆದರೆ ಜಿಲ್ಲಾಧಿಕಾರಿ ಅವಿನಾಶ್ ಕುಮಾರ್ ಘಟನೆಗೆ ಶಾರ್ಟ್ ಸರ್ಕಿಟ್ ಕಾರಣ ಎಂದು ಹೇಳಿದ್ದಾರೆ.
ಬೆಂಕಿ ಕಾಣಿಸಿಕೊಂಡ ತಕ್ಷಣವೇ ವಾರ್ಡ್‌ನಲ್ಲಿದ್ದ ಎಲ್ಲರಲ್ಲಿಯೂ ಭೀತಿ ಆವರಿಸಿಕೊಂಡಿತು. ಸಿಬ್ಬಂದಿ, ಮಕ್ಕಳ ಕುಟುಂಬ ವರ್ಗದವರು ಗಾಬರಿಯಿಂದ ಓಡಾಡಲು ಆರಂಭಿಸಿದರು. ಹೀಗಾಗಿ, ಅಲ್ಲಿ ಕಾಲ್ತುಳಿತ ಮಾದರಿಯ ಸ್ಥಿತಿ ನಿರ್ಮಾಣವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಆಘಾತಕಾರಿ ಅಂಶವೆಂದರೆ ಅಪಾಯವನ್ನು ಸೂಚಿಸುವ ಸೈರನ್ ಕಾರ್ಯವೆಸುತ್ತಿರಲಿಲ್ಲ ಎಂಬ ಅಂಶವೂ ಬೆಳಕಿಗೆ ಬಂದಿದೆ. ಇದರಿಂದಾಗಿ ತಕ್ಷಣಕ್ಕೆ ವಾರ್ಡ್‌ನಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳಲು ಸಾಧ್ಯವಾಗಲಿಲ್ಲ
Related Articles
ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳ 6 ವಾಹನಗಳು ಮತ್ತು ಸ್ಥಳೀಯ ಸೇನಾ ಘಟಕಕ್ಕೆ ಸೇರಿದ ಮತ್ತೂಂದು ಅಗ್ನಿಶಾಮಕದಳದ ವಾಹನ ಮೆಡಿಕಲ್ ಕಾಲೇಜಿಗೆ ತೆರಳಿ ಬೆಂಕಿಯನ್ನು ನಂದಿಸಿದವು. ಕೂಡಲೇ ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿ 40 ಶಿಶುಗಳನ್ನು ರಕ್ಷಿಸಿದ್ದಾರೆ.
Advertisement
ಸಿಎಂ ಆಘಾತ:ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಮತ್ತು ಇತರ ಹಿರಿಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸುವಂತೆ ಆದೇಶ ನೀಡಿದ್ದಾರೆ. ಡಿಸಿಎಂ ಬೃಜೇಶ್ ಪಾಠಕ್ ಅವರನ್ನು ಸ್ಥಳಕ್ಕೆ ತೆರಳುವಂತೆ ಸಿಎಂ ಸೂಚಿಸಿದ್ದಾರೆ. ಮೆಡಿಕಲ್ ಕಾಲೇಜಿನ ಸಿಬ್ಬಂದಿಗೆ ಹೆಚ್ಚಿನ ನೆರವು ನೀಡುವ ನಿಟ್ಟಿನಲ್ಲಿ ಕಾನ್ಪುರದಿಂದ ವಿಶೇಷ ತಜ್ಞರನ್ನೂ ಕಳುಹಿಸಿ ಕೊಡಲಾಗಿದೆ.