ಒಡಿಶಾ: ಒಡಿಶಾದ ಬಾಲಸೋರ್‌ನಲ್ಲಿ ಆಘಾತಕಾರಿ ಸುದ್ದಿಯೊಂದು ಬೆಳಕಿಗೆ ಬಂದಿದ್ದು, ಬೈಕ್ ಖರೀದಿಸಲು ಪೋಷಕರು ತಮ್ಮ 9 ದಿನದ ಕಂದಮ್ಮನನ್ನೇ ಮಾರಾಟ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ದಂಪತಿಗಳು ಮಗುವನ್ನು ಮಾರಾಟ ಮಾಡಿರುವ ವಿಚಾರ ತಿಳಿದು ಗ್ರಾಮಸ್ಥರೇ ದಂಗಾಗಿದ್ದಾರೆ.
ಏನಿದು ಪ್ರಕರಣ:
ಒಡಿಶಾದ ಬಾಲಸೋರ್‌ನ ಹದಮೌಡಾ ಗ್ರಾಮದ ಧರ್ಮು ಬೆಹೆರಾ ಪತ್ನಿ ಶಾಂತಿಲತಾ ದಂಪತಿಗೆ ಡಿಸೆಂಬರ್ 19 ರಂದು ಗಂಡು ಮಗು ಜನಿಸಿದೆ ಕಡು ಬಡತನದಲ್ಲಿರುವ ಕುಟುಂಬ ಮಗುವನ್ನು ಸಾಕಲು ಕಷ್ಟವಾಗುತ್ತದೆ ಎಂದು 9 ದಿನದ ಮಗುವನ್ನು ನೆರೆಯ ಮಯೂರ್‌ಭಂಜ್ ಜಿಲ್ಲೆಯ ಮಕ್ಕಳಿಲ್ಲದ ದಂಪತಿಗೆ 60,000 ರುಪಾಯಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ಇದಾದ ಬಳಿಕ ಮಗುವನ್ನು ಮಾರಾಟ ಮಾಡಿ ಬಂದ ಹಣದಲ್ಲಿ ದಂಪತಿಗಳು ಬೈಕ್ ಖರೀಸಿದ್ದಾರೆ ಎನ್ನಲಾಗಿದ್ದು, ಇದು ಸ್ಥಳೀಯರ ಅನುಮಾನಕ್ಕೆ ಕಾರಣವಾಗಿದೆ, ಶಾಂತಿಲತಾ ಗರ್ಭಿಣಿ ಎನ್ನುವ ವಿಚಾರ ಸ್ಥಳೀಯರಿಗೆ ಮೊದಲೇ ಗೊತ್ತಿತ್ತು ಜೊತೆಗೆ ಕಳೆದ ಡಿಸೆಂಬರ್ 19 ರಂದು ಬರಿಪಾದದ ಪಂಡಿತ್ ರಘುನಾಥ್ ಮುರ್ಮು ವೈದ್ಯಕೀಯ ಆಸ್ಪತ್ರೆಗೆ ದಾಖಲಾಗಿ ಗಂಡು ಮಗುವಿಗೆ ಜನ್ಮ ನೀಡಿರುವ ವಿಚಾರವೂ ತಿಳಿದಿತ್ತು ಇದಾದ ಮೂರೂ ದಿನಕ್ಕೆ ಪತ್ನಿ ಶಾಂತಿಲತಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು ಆದರೆ ನೆರೆಹೊರೆಯವರು ಮಗುವನ್ನು ನೀಡಲು ಹೋದಾಗ ಮಗು ಕಾಣಲಿಲ್ಲ ಅಲ್ಲದೆ ಮಗುವಿನ ಬಗ್ಗೆ ವಿಚಾರಿಸಿದಾಗ ದಂಪತಿ ಬೇರೆ ಬೇರೆ ಕಾರಣಗಳನ್ನು ನೀಡಿದ್ದಾರೆ, ಇದಾದ ಬಳಿಕ ದಂಪತಿ ಬೈಕ್ ಖರೀದಿಸಿದ್ದಾರೆ ಬಡ ಕುಟುಂಬದಲ್ಲಿದ್ದರುವ ದಂಪತಿಗಳ ಬಳಿ ಬೈಕ್ ತೆಗೆದುಕೊಳ್ಳುವ ಸಾಮರ್ಥ್ಯ ಇರಲಿಲ್ಲ ಹಾಗಿರುವಾಗ ಇವರ ಬಳಿ ಬೈಕ್ ಎಲ್ಲಿಂದ ಬಂತು ಎಂದು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯರ ದೂರಿನ ಆಧಾರದ ಮೇಲೆ ಪೊಲೀಸರು ದಂಪತಿಗಳ ಬಳಿ ವಿಚಾರಣೆ ನಡೆಸಿದ ವೇಳೆ ಮಗುವನ್ನು ಸಾಕಲು ನಾವು ಆರ್ಥಿಕವಾಗಿ ಸಬಲರಾಗಿಲ್ಲದ ಕಾರಣ ನೆರೆಯ ಮಯೂರ್‌ಭಂಜ್ ಜಿಲ್ಲೆಯ ಮಕ್ಕಳಿಲ್ಲದ ದಂಪತಿಗೆ ಮಧ್ಯವರ್ತಿಯ ಮೂಲಕ ನೀಡಿರುವುದಾಗಿ ಹೇಳಿಕೊಂಡಿದ್ದಾರೆ, ಆದರೆ ಮಗುವನ್ನು ಹಣಕ್ಕೆ ಮಾರಾಟ ಮಾಡಿಲ್ಲ, ಹೀಗೆಯೇ ನೀಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸರು ಸೇರಿ ಮಗುವನ್ನು ಪೋಷಕರ ಕೈಯಿಂದ ರಕ್ಷಣೆ ಮಾಡಿದ್ದು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: INDvAUS; ಮೆಲ್ಬರ್ನ್‌ನಲ್ಲಿ ಬ್ಯಾಟಿಂಗ್ ಮರೆತ ಭಾರತ; ವರ್ಷದ ಕೊನೆಗೆ ಸೋಲಿನ ವಿದಾಯ