Advertisement
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಭಾರ ಜಿಲ್ಲಾ ಆರೋಗ್ಯಾ ಧಿಕಾರಿ ಡಾ| ಶಂಕರಪ್ಪ ಗಡೇದ ಅವರು, ಈ ವರ್ಷದ ಎಪ್ರಿಲ್‌ದಿಂದ ಅಕ್ಟೋಬರ್ ಅವ ಧಿಯಲ್ಲಿ ಈ ಸಾವುಗಳು ಸಂಭವಿಸಿವೆ. ರಕ್ತಸ್ರಾವದಿಂದ ಹೆಚ್ಚಿನ ಬಾಣಂತಿಯರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ಜಿಲ್ಲಾ ಅ ಧೀಕ್ಷಕ ಡಾ| ವಿಠuಲ ಶಿಂಧೆ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಆರು ತಿಂಗಳ ಅವ ಧಿಯಲ್ಲಿ 322 ನವಜಾತ ಶಿಶುಗಳು ಮೃತಪಟ್ಟಿದ್ದು, ಅಪೌಷ್ಟಿಕತೆ, ಕಡಿಮೆ ತೂಕ, ನ್ಯೂಮೋನಿಯಾ ಸೇರಿದಂತೆ ಸೂಕ್ತ ಚಿಕಿತ್ಸೆ ಸಿಗದಿರುವುದೂ ಕಾರಣವಾಗಿದೆ. ಬೇರೆ ಬೇರೆ ತೊಂದರೆಯಿಂದ ಹೊರಗಿನಿಂದ ತುರ್ತು ಚಿಕಿತ್ಸೆಗೆ ನಮ್ಮ ಆಸ್ಪತ್ರೆಗೆ ದಾಖಲಾದ ಶಿಶುಗಳಲ್ಲಿಯೇ ಅತಿ ಹೆಚ್ಚು ಮೃತಪಟ್ಟಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮರಣ ಪ್ರಮಾಣ ಕಡಿಮೆ ಇದೆ ಎಂದು ತಿಳಿಸಿದರು. Advertisement
Belagavi; 6 ತಿಂಗಳಲ್ಲಿ 29 ಬಾಣಂತಿಯರು, 322 ಶಿಶು ಸಾ*ವು
10:51 PM Dec 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.