Advertisement

ಚೀಲಗಾನಹಳ್ಳಿ: ನೆರೆಸಂತ್ರಸ್ತರಿಗೆ ರಾಮಕೃಷ್ಣ ಸೇವಾಶ್ರಮದಿಂದ ಪರಿಹಾರ ಸಾಮಗ್ರಿ ವಿತರಣೆ

05:32 PM Aug 11, 2022 | Team Udayavani |

ಕೊರಟಗೆರೆ: ನೆರೆ ಸಂತ್ರಸ್ತರಿಗೆ ರಾಮಕೃಷ್ಣ ಸೇವಾಶ್ರಮ ಸುಮಾರು 35 ವರ್ಷಗಳಿಂದ ಸೇವೆ ಮಾಡಿಕೊಂಡು ಬರುತ್ತಿದೆ ಎಂದು ಪಾವಗಡದ ರಾಮಕೃಷ್ಣ ಸೇವಾಶ್ರಮ ಅಧ್ಯಕ್ಷ ಶ್ರೀ ಜಪಾನಂದ ಸ್ವಾಮೀಜಿ ತಿಳಿಸಿದರು.

Advertisement

ಕೊರಟಗೆರೆ ತಾಲೂಕಿನ ಕಸಬಾ ಹೋಬಳಿಯ ಅತೀವೃಷ್ಠಿಯಿಂದ ಹಾನಿಗೊಳಗಾದ 85 ಮನೆಗಳಿಗೆ ಪರಿಹಾರ ನೀಡಿ ಮಾತನಾಡಿ, ಕೊರಟಗೆರೆ ತಾಲೂಕಿನಲ್ಲಿ ಸಹ ಅತೀಯಾದ ಮಳೆಯಿಂದ ಹಲವಾರು ಮನೆಗಳು ಬಿದ್ದುಹೋಗಿದ್ದು, ಕೆಲವು ಮನೆಗಳಿಗೆ ನೀರು ನುಗ್ಗಿದೆ. ಈ ಭಾಗದ ಜನರು ಈ ನೆರೆಹಾವಳಿ ಬಗ್ಗೆ ಊಹೆ ಮಾಡಲು ಸಾಧ್ಯವಾಗಿಲ್ಲ ಹಾಗೂ ಇದಕ್ಕಾಗಿ ಇವರು ಮುಂಜಾಗೃತೆ ಕ್ರಮ ವಹಿಸಿಲ್ಲ. ಈ ತಕ್ಷಣ ಕೆಲವು ದಿನಗಳಿಂದ ಬಂದ ಧಾರಾಕಾರ ಮಳೆಗೆ ರೈತರು ಮತ್ತು ಬಡವರು ಸಂಕಷ್ಠ ಅನುಭವಿಸಿದ್ದಾರೆ. ಅಂತಹ ಜನರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರಾಮಕೃಷ್ಣ ಸೇವಾಶ್ರಮ ಸದಾ ಸಿದ್ದವಿರುತ್ತದೆ. ನಮ್ಮ ಈ ಕಾರ್ಯಕ್ಕೆ ಸದಾ ನಮ್ಮೊಂದಿಗೆ ಇರುವ ಇನ್ಫೋಸಿಸ್ ಮತ್ತು ರೆಡ್ ಕ್ರಾಸ್ ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದರು.

ಈ ಕಾರ್ಯಕ್ರಮಕ್ಕೆ ಕೊರಟಗೆರೆ ತಹಶೀಲ್ದಾರ್ ರವರು ನಮ್ಮೊಂದಿಗೆ ಸ್ವಯಂ ಅವರೇ ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಕ್ರಮದಲ್ಲಿ ನಮ್ಮ ಜತೆಗೂಡಿರುವುದು ಅಪರೂಪದ ವಿಷಯವಾಗಿದೆ ಎಂದರು.

ತಹಶೀಲ್ದಾರ್ ನಾಹಿದಾ ಜಮ್ ಜಮ್ ಮಾತನಾಡಿ, ತಾಲೂಕಿನಲ್ಲಿ ಕೆಲವು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಹಾನಿಗೊಳಗಾದ ನೆರೆಸಂತ್ರಸ್ತರ ಮನೆಗಳಿಗೆ ಜಪಾನಂದ ಸ್ವಾಮೀಜಿಗಳು ಖುದ್ದಾಗಿ ಟರ್ಪಲ್, ಆಹಾರ ಧಾನ್ಯ, ಹೊದಿಕೆ, ಬಟ್ಟೆಗಳು ಹಾಗೂ ಔಷಧಿ ಕಿಟ್‌ಗಳನ್ನು ನೀಡುತ್ತಿದ್ದಾರೆ. ಈ ಸಮಯದಲ್ಲಿ ನೊಂದವರಿಗೆ ಇಂತಹ ಸ್ವಯಂ ಸೇವಾ ಸಂಘಗಳ ಸೇವೆಯು ಅತ್ಯಗತ್ಯವಾಗಿದೆ. ರಾಮಕೃಷ್ಣಾ ಸೇವಾಶ್ರಮದ ಶ್ರೀ ಜಪಾನಂದ ಸ್ವಾಮೀಜಿಗಳು ಸಾಮಾಜಿಕ ಸೇವೆಗಳನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದು ಅವರಿಗೆ ನಮ್ಮ ತಾಲೂಕು ಆಡಳಿತದ ಪರವಾಗಿ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಪ.ಪಂ ಮುಖ್ಯಾಧಿಕಾರಿ ಭಾಗ್ಯಮ್ಮ, ಸದಸ್ಯರಾದ ಲಕ್ಷ್ಮೀನಾರಾಯಣ್, ನಾಗರಾಜು, ನಂದೀಶ್, , ಗ್ರಾಮ ಪಂಚಾಯತಿ ಅಧ್ಯಕ್ಷ ಮಲ್ಲಣ್ಣ, ಸದಸ್ಯ ರಮೇಶ್, ನರೇಂದ್ರಬಾಬು, ಕಂದಾಯ ಇಲಾಖೆಯ ಬಸವರಾಜು, ಪವನ್‌ಕುಮಾರ್, ರಾಕೇಶ್, ಸೇರಿದಂತೆ ಇತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next