ಕಲಾದಗಿ: ಈರುಳ್ಳಿ ಬೆಳೆ ಕೊಳೆರೋಗಕ್ಕೆ ಹಳದಿ ಬಣ್ಣಕ್ಕೆ ಬಾಡಿ ಹೊಲದಲ್ಲಿಯೇ ಕೊಳೆಯುತ್ತಿರುವ ಬೆಳೆಯನ್ನು ರೈತ ನೇಗಿಲು ಹೊಡೆದು ಮಣ್ಣಲ್ಲಿ ಮುಚ್ಚುತ್ತಿದ್ದು ಈ ವೇಳೆ ಬೆಳೆಯೊಂದಿಗೆ ರೈತನ ಕಣ್ಣೀರದಾರೆಯೂ ಮಣ್ಣಲ್ಲಿ ಸೇರಿ ಮಣ್ಣಾಗುತ್ತಿದೆ..!
ಹೌದು ಕಲಾದಗಿ ಹೊಬಳಿ ವ್ಯಾಪ್ತಿಯಲ್ಲಿ ರೈತರು ಹೆಚ್ಚಾಗಿ ಈರುಳ್ಳಿ ಬೆಳೆಯನ್ನು ಬೆಳೆದು ಕೃಷಿ ಜೀವನ ನಡೆಸುತ್ತಾರೆ, ಮೇ ತಿಂಗಳಕೊನೆ ವಾರ ಇಲ್ಲವೇ ಜೂನ್ ತಿಂಗಳ ಮೊದಲೆರಡು ವಾರದಲ್ಲಿ ಬಿತ್ತನೆ ಮಾಡಿ ಹುಲುಸು ಬೆಳೆಗೆ ಹಗಲು ರಾತ್ರಿ ಶ್ರಮ ಕಾಳಜಿ ವಹಿಸಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತನಿಗೆ ಬೆಳೆಗೆ ಕೊಳೆರೋಗ ಕಾಟ ಕಾಡಲಾರಂಭಿಸಿ ಬೆಳೆ ಹೊಲದಲ್ಲಿ ಕೊಳೆಯುವುದನ್ನು ಕಂಡು ಕಣ್ಣೀರು ಸುರಿಸುತ್ತಿದ್ದಾನೆ, ಕೆಲವು ರೈತರಂತೂ ಕಣ್ಣಿಲೆ ನೋಡಲಾಗದ ತಾನೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಗಲು ರಾತ್ರಿ ಶ್ರಮವಹಿಸಿ ಬೆಳೆ ಬೆಳೆದಿದ್ದ ಬೆಳೆಯನ್ನು ನೇಗಿಲು ಹೊಡೆದು ಮಣ್ಣಲ್ಲಿ ಮುಚ್ಚುತ್ತಿರುವ ವೇಳೆ ಆತನ ಸಂಕಟ ನೋವು ವೇದನೆಗೆ ಕಣ್ಣೀರ ದಾರೆಯೂ ಆತನ ಮೈಮೇಲೆ ಹರಿದು ಬಂದು ಬೆಳೆಯೊಂದಿಗೆ ಭೂಮಿಗೆ ಸೇರಿ ಮಣ್ಣಲ್ಲಿ ಮಣ್ಣಾಗುತ್ತಿದೆ ಅನ್ನದಾತನ ಕಣ್ಣೀರು.
ಸದ್ಯ ಕೆಲವು ರೈತರ ಈರುಳ್ಳಿ ಬೆಳೆ ಈ ಕೊಳೆರೋಗ ಕಾಟಕ್ಕೆ ಕೊಳೆಯುತ್ತಿದ್ದು, ಇನ್ನೂ ಕೆಲವರು ರೈತರ ಈರುಳ್ಳಿ ರೋಗ ತಗುಲುವ ಪ್ರಾರಂಭ ಹಂತದಲ್ಲಿದೆ, ಈ ರೈತರು ತಮ್ಮ ಬೆಳೆಯನ್ನು ಉಳಿಸಿಕೊಳ್ಳಲು ತೋಟಗಾರಿಕಾ ಇಲಾಖಾ ಅಧಿಕಾರಿಗಳ ಮಾರ್ಗದರ್ಶನ, ಸೂಕ್ತ ಔಷದೋಪಾಚಾರದ ತಿಳುವಳಿಕೆ ನೀಡಿದಲ್ಲಿ ಕೆಲವು ರೈತರು ತಮ್ಮ ಬೆಳೆಯನ್ನು ಉಳಿಸಿಕೊಂಡು ಮಮ್ಮಲ ಮರಗಿ ಕಣ್ಣೀರ ದಾರೆ ಹರಿವುದು ಕಡಿಮೆ ಆಗಬಹುದು.ಕೆಲವು ರೈತರ ಆಶಯ.
ಕಲಾದಗಿ ಹೊಬಳಿಯಲ್ಲಿ 2800 ಹೆಕ್ಟೇರ್ ಪ್ರದೇಶ ಈರುಳ್ಳಿಯಲ್ಲಿ 750 ಹೆಕ್ಟೇರ್ ಪ್ರದೇಶ ಈರುಳ್ಳಿ ಬೆಳೆ ಈಗಾಗಲೇ ಕೊಳೆರೋಗದಿಂದ ಹಾನಿಯಾಗಿದೆ, ಇನ್ನಷ್ಟ ಬೆಳೆಯೂ ಕೂಡಾ ಕೊಳೆ ರೋಗಕ್ಕೆ ಹಾನಿಯಾಗುವ ಸಾದ್ಯತೆ ಇದ್ದು ಅಧಿಕಾರಿಗಳು ಕೂಡಲೇ ರೈತ ಸಮುದಾಯಕ್ಕೆ ಔಷದೋಪಚಾರದ ಅಗತ್ಯ ಮಾಹಿತಿ ನೀಡಬೇಕಾಗಿ ಉದಗಟ್ಟಿ, ಶಾರದಾಳ, ಅಂಕಲಗಿ ಸೇರಿದಂತೆ ಹಲವು ಹಳ್ಳಿಗಳ ರೈತರು ಮನವಿ ಮಾಡಿದ್ದಾರೆ.
4 ಎಕರೆ ಪ್ರದೇಶದಲ್ಲಿ ಬೆಳದ ಈರುಳ್ಳಿ ಬೆಳೆ ಕೊಳೆ ರೋಗಕ್ಕೆ ಬಾಡಿ ಬರ್ಬಾದ್ ಆಗಿದೆ, ಎಷ್ಟೇ ಔಷಧೋಪಚಾರ ಮಾಡಿದರೂ ರೋಗ ಹತೋಟಿಗೆ ಬಾರದೆ ಬೆಳೆಯನ್ನು ಟ್ಯಾಕ್ಟರ್ ನೇಗಿಲು ಹೊಡೆದು ಮಣ್ಣಲ್ಲಿ ಮುಚ್ಚಿದ್ದೇನೆ ಎಂದು ಶಾರದಾಳ ಗ್ರಾಮದ ಯುವರೈತ ಪ್ರವೀಣ ಅರಕೇರಿ ಹೇಳಿದರು.
ಇನ್ನು ಕೊಳೆರೋಗಕ್ಕೆ ಬಾದಿತವಾಗುತ್ತಿರುವ ಈರುಳ್ಳಿಗೆ ಎರಡು ಹಂತದಲ್ಲಿ ಔಷಧ ಸಿಂಫರಣೆ ಮಾಡಿ ಬೆಳೆಯನ್ನು ರೋಗದಿಂದ ರಕ್ಷಿಸಿಕೊಳ್ಳಬಹಸು, ಈ ಬಗ್ಗೆ ರೈತರಿಗೆ ಇಲಾಖೆಯಿಂದ ಮಾಹಿತಿ ನೀಡಲಾಗುವುದು ಎಂದು ತೋಟಗಾರಿಕಾ ಇಲಾಖಾ ಹಿರಿಯ ಸಹಾಯಕ ನಿರ್ದೇಶಕ ಸಚಿನ್ ಮಾಚಕನೂರು ತಿಳಿಸಿದರು.
-ಚಂದ್ರಶೇಖರ ಹಡಪದ