Advertisement

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

03:52 PM Nov 21, 2024 | Team Udayavani |

ಮುಧೋಳ: ಸಾಲಬಾಧೆಗೆ ಹೆದರಿ ರೈತನೋರ್ವ ನೇಣಿಗೆ ಶರಣಾಗಿರುವ ಘಟನೆ ಸಮೀಪದ ಕುಳಲಿ‌ ಗ್ರಾಮದ ನರನಟ್ಟಿ ತೋಟದ ವಸ್ತಿಯಲ್ಲಿ ಬುಧವಾರ (ನ.20) ಮಧ್ಯರಾತ್ರಿ ನಡೆದಿದೆ.

Advertisement

ಶಿವಲಿಂಗಪ್ಪ ಮರನೂರ (30) ನೇಣಿಗೆ ಶರಣಾಗಿರುವ ರೈತ. ಒಂದು ಎಕರೆ 38ಗುಂಟೆ ಜಮೀನು ಹೊಂದಿದ್ದ ರೈತ ಶಿವಲಿಂಗಪ್ಪ ವಿವಿಧ ಬ್ಯಾಂಕ್ ಗಳಿಂದ 4 ಲಕ್ಷಕ್ಕೂ ಹೆಚ್ಚು ಸಾಲ ಪಡೆದುಕೊಂಡಿದ್ದ.

ಕಬ್ಬು ಬೆಳೆದಿದ್ದ ರೈತ ಬೆಳೆ ಸರಿಯಾಗಿ ಬಾರದ ಕಾರಣ ಸಾಲ ತೀರಿಸುವ ಬಗೆ ಹೇಗೆಂದು ಅರಿಯದೆ ನೇಣಿಗೆ ಶರಣಾಗಿದ್ದಾನೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next