ಮುಂಡಗೋಡ: ವಾಯುಭಾರ ಕುಸಿತದಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ತಾಲೂಕಿನ ವಿವಿಧ ಭಾಗಗಳಲ್ಲಿ ಗೋವಿನಜೋಳ ಹಾಗೂ ಭತ್ತ ಸೇರಿ 143 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.
Advertisement
ಇತ್ತೀಚೆಗೆ ಹಿಂಗಾರು ಮಳೆಯಿಂದಾಗಿ ಗೋವಿನಜೋಳಕ್ಕೆ ಹಾನಿಯಾದರೆ ಮತ್ತೊಂದು ಕಡೆ ಶೇ.30ರಷ್ಟು ಭತ್ತದ ತೆನೆಗಳು ನೀರಿನಹೊಡೆತಕ್ಕೆ ಬಿದ್ದಿವೆ. ತಾಲೂಕಿನಲ್ಲಿ ಒಟ್ಟು 6500 ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ ಬಿತ್ತನೆ ಮಾಡಲಾಗಿತ್ತು. ಈಗಾಗಲೇ ಗೋವಿನ ಜೋಳದ ತೆನೆಗಳು ಶೇ.80-90ರಷ್ಟು ಕಟಾವು ಆಗಿದ್ದರೆ, ಕೆಲವರು ಕಾಳುಗಳನ್ನು ಬೇರ್ಪಡಿಸಿ ಖಾಲಿ ಇರುವ ಜಾಗಗಳಲ್ಲಿ ಹಾಗೂ ರಸ್ತೆಯ ಅಕ್ಕ-ಪಕ್ಕದಲ್ಲಿ ಬಿಸಿಲಿಗೆ ಹಾಕಿ ಒಣಗಿಸಲು ಹರಸಾಹಸಪಟ್ಟಿದ್ದಾರೆ. 5950 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆ ಮಾಡಲಾಗಿತ್ತು. ಶೇ.30-40ರಷ್ಟು ಈವರೆಗೆ ಕಟಾವು ಮಾಡಿದ್ದರೆ, ಮಿಕ್ಕ ಬೆಳೆ ಕಟಾವಿಗೆ ರೈತರು ಸಜ್ಜಾಗಿದ್ದಾರೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ಗೋವಿನಜೋಳಕ್ಕೆ ಅಪಾರ ಹಾನಿಯಾಗಿದೆ.
ಬೆಳೆದ ಪ್ರದೇಶದಲ್ಲಿ ಹಾನಿಯಾಗಿದೆ. ಇದರಲ್ಲಿ ಶೇ.80ರಷ್ಟು ಗೋವಿನಜೋಳ ಬೆಳೆಯೇ ಹಾನಿಯಾಗಿದೆ. ಈ ಬಾರಿ ಶೇ.90ರಷ್ಟು ಗೋವಿನ ಜೋಳ ಬೆಳೆ ಸಂಪೂರ್ಣ ಹಾನಿಯಾಗಿದೆ. ಭತ್ತ ಶೇ.30 ರಷ್ಟು ಭೂಮಿಗೆ ಬಿದ್ದು ಮೊಳಕೆ ಬಿಟ್ಟಿದೆ.
ಅಡಿಕೆ ಇಳುವರಿ ಕುಸಿತವಾಗಿದೆ. ರೈತರು ಸಾಲ ತೀರಿಸಲಾಗದೆ ಆರು ತಿಂಗಳು ಬದುಕು ನಡೆಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಬೆಳೆ
ಹಾನಿಯಾದ ಪ್ರತಿಯೊಬ್ಬ ರೈತನ ಗದ್ದೆಗೆ ತೆರಳಿ ಸರ್ವೇ ಮಾಡಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಪ್ರತಿಭಟನೆ ನಡೆಸಲಾಗುವುದು.
*ಬಸವರಾಜ ಪಾಟೀಲ, ಅಧ್ಯಕ್ಷ
ತಾಲೂಕು ಭಾರತೀಯ ಕಿಸಾನ್ ಸಂಘ
Related Articles
ಹಾನಿಯಾಗಿದೆ. ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಸರ್ವೇ ನಡೆಸಲಾಗುತ್ತಿದ್ದು, ಶೀಘ್ರವೇ ಮುಗಿಯಲಿದೆ.
*ಕೆ.ಎನ್.ಮಹಾರೆಡ್ಡಿ
ಸಹಾಯಕ ಕೃಷಿ ನಿರ್ದೇಶಕ
Advertisement
■ ಮುನೇಶ ತಳವಾರ