ಉದಯಪುರ: ಉದಯಪುರದಲ್ಲಿ ಬಿಜೆಪಿ ಶಾಸಕ ವಿಶ್ವರಾಜ್ ಸಿಂಗ್ ಮತ್ತು ಅವರ ಬೆಂಬಲಿಗರಿಗೆ ಅವರ ಸೋದರ ಸಂಬಂಧಿ ಮತ್ತು ಚಿಕ್ಕಪ್ಪ ಶ್ರೀಜಿ ಅರವಿಂದ್ ಸಿಂಗ್ ಮೇವಾರ್ ನಿರ್ವಹಿಸುತ್ತಿರುವ ಸಿಟಿ ಪ್ಯಾಲೇಸ್ಗೆ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಉಂಟಾದ ಘರ್ಷಣೆಯಲ್ಲಿ ಕನಿಷ್ಠ ಮೂವರು ಗಾಯಗೊಂಡಿರುವ ಘಟನೆ ಸೋಮವಾರ(ನ.25) ರಾತ್ರಿ ಸಂಭವಿಸಿದೆ.
ತಿಂಗಳ ಆರಂಭದಲ್ಲಿ ವಿಶ್ವರಾಜ್ ಸಿಂಗ್ ಅವರ ತಂದೆ ಮಹೇಂದ್ರ ಸಿಂಗ್ ಮೇವಾರ್ ಅವರ ನಿಧನದ ನಂತರ ಸೋಮವಾರ ಬೆಳಿಗ್ಗೆ ಚಿತ್ತೋರಗಢ ಕೋಟೆಯಲ್ಲಿ ವಿಶ್ವರಾಜ್ ಸಿಂಗ್ ಅವರನ್ನು ಹಿಂದಿನ ರಾಜಮನೆತನದ ಮುಖ್ಯಸ್ಥರಾಗಿ ನೇಮಿಸಲಾಯಿತು.
ಅಸ್ತಿ ವಿಚಾರವಾಗಿ ರಜಪೂತ ರಾಜ ಮಹಾರಾಣಾ ಪ್ರತಾಪ್ನ ವಂಶಸ್ಥರಾದ ಮಹೇಂದ್ರ ಸಿಂಗ್ ಮೇವಾರ್ ಮತ್ತು ಅವರ ಕಿರಿಯ ಸಹೋದರ ಅರವಿಂದ್ ಸಿಂಗ್ ಮೇವಾರ್ ನಡುವೆ ಹಲವು ವರ್ಷಗಳಿಂದ ಘರ್ಷಣೆ ನಡೆಯುತ್ತಲೇ ಇತ್ತು.
ರಾಜಮನೆತನದ ವಿಧಿವಿಧಾನಗಳ ಭಾಗವಾಗಿ ಉದಯಪುರದ ಏಕಲಿಂಗನಾಥ ದೇವಾಲಯ ಮತ್ತು ನಗರದ ಅರಮನೆಗೆ ಹೊಸದಾಗಿ ನಿಯೋಜಿಸಲಾದ ರಾಜಮನೆತನದ ಮುಖ್ಯಸ್ಥರ ಯೋಜಿತ ಭೇಟಿಗೆ ಚಿಕ್ಕಪ್ಪ ಅರವಿಂದ್ ಸಿಂಗ್ ವಿರೋಧ ವ್ಯಕ್ತಪಡಿಸಿದ್ದೆ ಘರ್ಷಣೆಗೆ ಕಾರಣವಾಗಿದೆ. ವಿಶ್ವರಾಜ್ ಸಿಂಗ್ ಸಿಂಗ್ ಕುಟುಂಬ ಅರಮನೆಗೆ ಭೇಟಿ ನೀಡುವ ವಿಚಾರ ಗೊತ್ತಾಗುತ್ತಿದ್ದಂತೆ ಅರಮನೆಯ ಗೇಟ್ ಗಳಿಗೆ ಬೀಗ ಜಡಿಯಲಾಗಿತ್ತು ಇದು ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಯಿತು ಎಂದು ಹೇಳಲಾಗಿದೆ.
ಇದನ್ನೂ ಓದಿ: Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್ನ ಕೃಷ್ಣದಾಸ್ ಸೆರೆ