Advertisement

ರಾಜ್ಯದ ತಾಲೂಕು ಆಸ್ಪತ್ರೆಗಳ ಅಭಿವೃದ್ಧಿಗೆ ಕ್ರಮ : ಗುಂಡೂರಾವ್‌

09:06 PM Jul 06, 2023 | Team Udayavani |

ವಿಧಾನಸಭೆ: ರಾಜ್ಯದ ಪ್ರಮುಖ ತಾಲೂಕು ಆಸ್ಪತ್ರೆಗಳನ್ನು ಸುಸಜ್ಜಿತವಾಗಿ ಅಭಿವೃದ್ದಿಪಡಿಸಿ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುವಂತೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್‌ ಹೇಳಿದರು.

Advertisement

ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಡಾ|ಅವಿನಾಶ ಜಾಧವ್‌ ಮತ್ತಿತರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಹೊಸ ತಾಲೂಕು ಆಸ್ಪತ್ರೆಗಳನ್ನು ಅಭಿವೃದ್ದಿ ಮಾಡುತ್ತಿಲ್ಲ. ಮೊದಲು ಹಳೆಯ ಪಟ್ಟಿಯಲ್ಲಿ ಆದ್ಯತೆ ಮೇಲಿರುವ ಆಸ್ಪತ್ರೆಗಳ ಮೂಲಭೂತ ಸೌಕರ್ಯ ವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.

ಆದರೆ ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಸರ್ವ ಪಕ್ಷದ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿನ ತಾಲೂಕು ಆಸ್ಪತ್ರೆಗಳ ದುಃಸ್ಥಿತಿಯನ್ನು ಬಿಚ್ಚಿಟ್ಟರು. ಇದಕ್ಕೆ ಉತ್ತರಿಸಿದ ಸಚಿವ ಗುಂಡೂರಾವ್‌, ಡಯಾಲಿಸಸ್‌, ಎಚ್‌ಐವಿ, ಹೆಪಾಟೆಟಸ್‌ ಸೇರಿದಂತೆ ಎಲ್ಲ ಮಾರಕ ಖಾಯಿಲೆಗಳಿಗೂ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಕ್ಕುವಂತಾಗಬೇಕು. ಅದಕ್ಕಾಗಿ ಇದೀಗ ಹೊಸ ಟೆಂಡರ್‌ ಕರೆಯಲಾಗಿದ್ದು, ಒಂದೂವರೆ ತಿಂಗಳಿನಲ್ಲಿ ವೈದ್ಯಕೀಯ ಸಲಕರಣೆಗಳು ಬರಲಿವೆ. ಆದ್ಯತೆ ಮೇರೆಗೆ ಎಲ್ಲಾ ಆಸ್ಪತ್ರೆಗಳಿಗೂ ಪೂರೈಕೆ ಮಾಡಿ ಉತ್ತಮ ಚಿಕಿತ್ಸೆ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next