Advertisement

Delhi: ಕೇಜ್ರಿವಾಲ್‌ ಚುನಾವಣೆಯಲ್ಲಿ ನೀಡಿದ್ದ ಒಂದೂ ಭರವಸೆ ಈಡೇರಿಸಿಲ್ಲ: ಬಿಜೆಪಿ ವಾಗ್ದಾಳಿ

03:39 PM Jan 01, 2025 | Team Udayavani |

ನವದೆಹಲಿ: ಹಿಂದಿನ ಚುನಾವಣೆಯಲ್ಲಿ ನೀಡಿದ್ದ ಭರವಸೆ ಈಡೇರಿಸುವಲ್ಲಿ ಆಮ್‌ ಆದ್ಮಿ ಪಕ್ಷ ಮತ್ತು ಪಕ್ಷದ ವರಿಷ್ಠ ಅರವಿಂದ್‌ ಕೇಜ್ರಿವಾಲ್‌ ವಿಫಲರಾಗಿರುವುದಾಗಿ ಭಾರತೀಯ ಜನತಾ ಪಕ್ಷ ಬುಧವಾರ (ಜ.01) ಆರೋಪಿಸಿದೆ.

Advertisement

ದಶಕಗಳಿಂದ ಆಮ್‌ ಆದ್ಮಿ ಪಕ್ಷ ಅಧಿಕಾರದಲ್ಲಿದ್ದರೂ ಕೂಡಾ ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ ಎಂದು ಕೇಜ್ರಿವಾಲ್‌ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ವಿದ್ಯುತ್‌ ದರ ಇಳಿಕೆ, ಶುದ್ಧ ಕುಡಿಯುವ ನೀರು ಪೂರೈಕೆ, ಶಿಕ್ಷಣ ವ್ಯವಸ್ಥೆಯ ಅಭಿವೃದ್ಧಿ, ಉತ್ತಮ ಆರೋಗ್ಯ ಕೇಂದ್ರ, ಮಹಿಳಾ ರಕ್ಷಣೆಗೆ ಆದ್ಯತೆ, ಕೊಳಗೇರಿ ನಿವಾಸಿಗಳಿಗೆ ನಿವಾಸ, ಯಮುನಾ ಸ್ಚಚ್ಛತೆ ಬಗ್ಗೆ ಆಮ್‌ ಆದ್ಮಿ ಪಕ್ಷ ಚುನಾವಣೆ ವೇಳೆ ಭರವಸೆ ನೀಡಿತ್ತು. ಆದರೆ ಇದರಲ್ಲಿ ಒಂದೇ ಒಂದು ಭರವಸೆಯನ್ನು ಆಪ್‌ ಈಡೇರಿಸಿಲ್ಲ ಎಂದು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಅಷ್ಟೇ ಅಲ್ಲ ಅಸುರಕ್ಷಿತ ವಿದ್ಯುತ್‌ ತಂತಿಗಳಿಂದ ಮುಕ್ತಿ ಕೊಡುವುದಾಗಿ ಆಮ್‌ ಆದ್ಮಿ ಪಕ್ಷ ಭರವಸೆ ನೀಡಿತ್ತು. ಆದರೆ ಅಧಿಕಾರದಲ್ಲಿದ್ದು 10 ವರ್ಷ ಕಳೆದರೂ ಕೂಡಾ ಭರವಸೆ ಈಡೇರಿಸಿಲ್ಲ. ಅದರ ಪರಿಣಾಮ 2024ರ ಜುಲೈನಲ್ಲಿ ಅಸುರಕ್ಷಿತ ವಿದ್ಯುತ್‌ ತಂತಿಯಿಂದಾಗಿ 26ವರ್ಷದ ಯುವಕ ಕೊನೆಯುಸಿರೆಳೆದಿದ್ದ ಎಂದು ಬಿಜೆಪಿ ದೂರಿದೆ.

ಕಸದ ಡಂಪಿಂಗ್‌ ಯಾರ್ಡ್‌ ಅನ್ನು ಸ್ವಚ್ಛಗೊಳಿಸುವುದಾಗಿ ಆಪ್‌ ಭರವಸೆ ನೀಡಿತ್ತು. ಆದರೆ ದೆಹಲಿಯಲ್ಲಿ ಈಗ ಕಸದ ರಾಶಿ 8ಮೀಟರ್‌ ಗಳಷ್ಟು ಹೆಚ್ಚಳವಾಗಿದೆ ಎಂದು ಬಿಜೆಪಿ ಟೀಕಿಸಿದೆ. ಮಹಿಳಾ ಸುರಕ್ಷತೆ ಬಗ್ಗೆ ಆಪ್‌ ಭರವಸೆ ನೀಡಿತ್ತು. ವಿಪರ್ಯಾಸವೆಂದರೆ ಸಿಎಂ ನಿವಾಸದೊಳಗೆ ಸಂಸದೆ ಮೇಲೆ ಹಲ್ಲೆ ನಡೆಸಲಾಗಿತ್ತು ಎಂದು ಬಿಜೆಪಿ ಟೀಕಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next