Advertisement

Bidar ಕಳ್ಳತನಕ್ಕೆ ಬಂದಿದ್ದ ಯುವಕನಿಗೆ ಧರ್ಮದೇಟು: ಚಿಕಿತ್ಸೆ ಫ‌ಲಿಸದೆ ಸಾವು

09:17 PM May 31, 2024 | Team Udayavani |

ಬೀದರ್:ಮನೆಗಳ್ಳತನಕ್ಕೆ ಯತ್ನಿಸಿ ಧರ್ಮದೇಟು ತಿಂದಿದ್ದ ಕಳ್ಳನೊಬ್ಬ ಚಿಕಿತ್ಸೆ ಫ‌ಲಿಸದೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

Advertisement

ನಗರದ ನೌಬಾದ್‌ನ ಸಂತೋಷ ನಾಗೂರೆ (31) ಮೃತಪಟ್ಟ ಕಳ್ಳ.

ಶುಕ್ರವಾರ ನಸುಕಿನ ಜಾವ ಇಲ್ಲಿನ ಪ್ರತಾಪನಗರದ ಗೋರಖನಾಥ್‌ ಎಂಬುವರ ಮನೆಗೆ ನಾಲ್ವರು ಕದೀಮರು ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಈ ವೇಳೆ ಮನೆಯ ಅಕ್ಕಪಕ್ಕದವರು ಸೇರಿ ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದ್ದು, ಅದರಲ್ಲಿ ಒಬ್ಬ ಸಿಕ್ಕಿ ಹಾಕಿಕೊಂಡಿದ್ದಾನೆ.

ಕಟ್ಟಿಗೆಗಳಿಂದ ಆತನ ಕಾಲು ಮತ್ತು ತಲೆಗೆ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಕಳ್ಳನನ್ನು ಬ್ರಿಮ್ಸ್‌ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಈ ವೇಳೆ ಆರೋಪಿ ನಾಲ್ವರೊಂದಿಗೆ ಕಳ್ಳತನ ಮಾಡಲು ಬಂದಿರುವ ಬಗ್ಗೆ ಒಪ್ಪಿಕೊಂಡಿದ್ದ. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಾಯಂಕಾಲ 5 ಗಂಟೆ ಸುಮಾರಿಗೆ ಮೃತಪಟ್ಟಿದ್ದಾನೆ.

ಸಿಸಿ ಟಿವಿ ದೃಶ್ಯಾವಳಿ ಆಧಾರದ ಮೇಲೆ ಅಕ್ರಮ ಗುಂಪು ಕಟ್ಟಿಕೊಂಡು ಕೊಲೆ ಮಾಡಿರುವ ಕುರಿತು ನ್ಯೂಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next