Advertisement

Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ

04:56 PM Jan 02, 2025 | Team Udayavani |

ಬೀದರ್ : ಟೆಂಡರ್ ವಂಚನೆಯಿಂದ ನೋಂದು ಆತ್ಮಹತ್ಯೆ ಮಾಡಿ ಕೊಂಡಿರುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಡಿದ್ದು, ಆತ್ಮಹತ್ಯೆಗೂ ಎರಡು ದಿನ‌ದ ಮೊದಲು ಸಚಿನ್‌ ಹೊಟೇಲ್ ನಲ್ಲಿ ಓಡಾಡಿರುವುದು ಸಿಸಿ ಟಿವಿ ದೃಶ್ಯದಲ್ಲಿ ಸೆರೆಯಾಗಿದೆ.

Advertisement

ಡಿ. 24 ರಂದು ಸಂಜೆ 6:27 ಕ್ಕೆ ಬೀದರ ನಗರದ ರಾಯಲ್ ಹೆರಿಟೇಜ್ ಹೋಟಲ್ ಗೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಆಗಮಿಸಿದ್ದ ಸಚಿನ್ ಪಾಂಚಾಳ, ಬಿಯರ್ ಕುಡಿದು, ಊಟ ಮಾಡಿ ರಾತ್ರಿ 8.46ಕ್ಕೆ ಬಾರ್ ನಿಂದ ವಾಪಸ್ ಹೋಗಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹೋಟೆಲ್ ನಲ್ಲಿ ವೇಟರ್ ಕೃಷ್ಣ ನ ಬಳಿ ಇದ್ದ ಮೊಬೈಲ್ ನಿಂದ ಸಹೋದರಿಯರಿಗೆ ಕಾಲ್ ಮಾಡಿದ್ದ. ಇದು ಕುಟುಂಬಸ್ಥರಿಗೆ ಆತ ಮಾಡಿದ ಕೊನೆಯ ಕಾಲ್ ಆಗಿತ್ತು. ಅಷ್ಟೇ ಅಲ್ಲ ತನ್ನ ಭಾವನಿಂದ‌‌ ಈ ನಂಬರ್ ಗೆ 1500 ರೂ. ಹಾಕಿಸಿಕೊಂಡಿದ್ದ. 650 ರೂ. ಬಾರ್ ಬಿಲ್ ಪೇ ಮಾಡಿ , ಉಳಿದ ಹಣ ವೇಟರ್ ಕೃಷ್ಣನಿಂದ ಪಡೆದಿದ್ದ ವಾಪಸ ಹೋಗುವಾಗ ಕೃಷ್ಣಗೆ ಯಾರದೇ ಫೋನ್ ಕಾಲ್ ಎತ್ತಬೇಡಾ ಎಂದು ಹೇಳಿದ್ದ ಎಂದು ತನಿಖೆಯಿಂದ‌‌ ಗೊತ್ತಾಗಿದೆ.

ಮರು ದಿನ ಡಿ.25ಕ್ಕೆ ಸಚಿನ್ ಡೆತ್ ನೋಟ್ ನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದ . ಇದನ್ನು ಗಮನಿಸಿದ್ದ ಸಹೋದರಿಯರು ಅಂದು ವೇಟರ್ ಕೃಷ್ಣ ಮೊಬೈಲ್ ಗೆ ಸಚಿನ ಸಹೋದರಿಯರು‌. ಡಿ.26ರಂದು ರೈಲ್ವೆ ಹಳಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಚಿನ್.

ಇದನ್ನೂ ಓದಿ: Raichur: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಮುಸ್ಲಿಂ ವ್ಯಕ್ತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next