Advertisement

ರಿಷಬ್, ನಿಮ್ಮ ಬಗ್ಗೆ ನೀವು ತುಂಬಾ ಹೆಮ್ಮೆಪಡಬೇಕು..: ಕಾಂತಾರ ಮೆಚ್ಚಿದ ನಟ ಧನುಷ್

04:57 PM Oct 14, 2022 | Team Udayavani |

ಸೆ.30ರಂದು ತೆರೆಗೆ ಬಂದ ‘ಕಾಂತಾರ’ ಸಿನಿಮಾ ಇದೀಗ ದೇಶದಲ್ಲಿ ಸಂಚಲನ ಉಂಟು ಮಾಡಿದೆ. ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಹಿಟ್ ಆಗಿರುವ ರಿಷಬ್ ಶೆಟ್ಟಿಯವರ ‘ಕಾಂತಾರ’ ಇದೀಗ ಬೇರೆ ಭಾಷೆಗಳಲ್ಲೂ ಡಬ್ ಆಗಿ ಬಿಡುಗಡೆಯಾಗುತ್ತಿದೆ.

Advertisement

‘ಕಾಂತಾರ’ ಚಿತ್ರವನ್ನು ನೋಡಿದ ಸ್ಟಾರ್ ಗಳು ಹೊಗಳಿಕೆಯ ಮಾತುಗಳನ್ನಾಡುತ್ತಿದ್ದಾರೆ. ಕಿಚ್ಚ ಸುದೀಪ್ ಅವರು ಚಿತ್ರ ನೋಡಿ ನಟ, ನಿರ್ದೇಶಕ ರಿಷಬ್ ಶೆಟ್ಟಿಯವರಿಗೆ ಪ್ರೀತಿಯ ಪತ್ರ ಬರೆದಿದ್ದರು.  ಬಾಹುಬಲಿ ಸ್ಟಾರ್ ಪ್ರಭಾಸ್ ಕೂಡಾ ಚಿತ್ರ ನೋಡಿ ಸಂತಸ ವ್ಯಕ್ತ ಪಡಿಸಿದ್ದರು. ಇದೀಗ ತಮಿಳಿನ ಖ್ಯಾತ ನಟ ಧನುಷ್ ಅವರು ಚಿತ್ರವನ್ನು ಕಂಡು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ:ಕಳ್ಳ..ಕಳ್ಳ..; ಪಾಕ್ ಹಣಕಾಸು ಸಚಿವನಿಗೆ ಅಮೆರಿಕದಲ್ಲಿ ಘೇರಾವ್ !

ಈ ಬಗ್ಗೆ ಟ್ವೀಟ್ ಮಾಡಿರುವ ಧನುಷ್, “ಕಾಂತಾರ.. ಅದ್ಭುತ! ನೋಡಲೇ ಬೇಕಾದ ಸಿನಿಮಾ. ರಿಷಬ್ ಶೆಟ್ಟಿಯವರೆ ನಿಮ್ಮ ಬಗ್ಗೆ ನೀವು ತುಂಬಾ ಹೆಮ್ಮೆ ಪಡಬೇಕು. ಹೊಂಬಾಳೆ ಫಿಲಂಸ್ ಗೆ ಅಭಿನಂದನೆಗಳು. ನಿಮ್ಮ ಮಿತಿಯನ್ನು ತಳ್ಳುತ್ತಲೇ ಇರಿ. ಚಿತ್ರದ ಎಲ್ಲಾ ನಟರು ಮತ್ತು ತಂತ್ರಜ್ಞರಿಗೆ ಒಂದು ದೊಡ್ಡ ಹಗ್. ದೇವರು ಒಳ್ಳೆಯದು ಮಾಡಲಿ” ಎಂದರು.

ತೆಲುಗು ನಟ ರಾಣಾ ದಗ್ಗುಬಾಟಿ ಕೂಡಾ ‘ಕಾಂತಾರ’ ಚಿತ್ರವನ್ನು ನೋಡಿ ಮೆಚ್ಚುಕೊಂಡಿದ್ದಾರೆ. “ ಕಾಂತಾರ ಎಂತಹ ಅಸಾಧಾರಣ ಚಿತ್ರ! ಚಿತ್ರದ ಭಾಗವಾಗಿರುವ ಪ್ರತಿಯೊಬ್ಬರಿಗೂ ಅಭಿನಂದನೆಗಳು! ರಿಷಬ್ ಶೆಟ್ಟಿಯವರೇ ನೀವು ನಿಜವಾಗಿಯೂ ಸ್ಫೂರ್ತಿ!” ಎಂದು ಟ್ವೀಟ್ ಮಾಡಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next