Advertisement

Judicial Custody; ಡಾಲಿ ನಿರ್ಮಾಣದಲ್ಲಿ ಜೆಸಿ

02:35 PM Feb 15, 2024 | Team Udayavani |

ನಟ ಧನಂಜಯ್‌ ತಮ್ಮ ಡಾಲಿ ಪಿಕ್ಚರ್ಸ್‌ನಲ್ಲಿ ಹೊಸ ಸಿನಿಮಾವೊಂದನ್ನು ಆರಂಭಿಸಿದ್ದಾರೆ. ಚಿತ್ರಕ್ಕೆ “ಜೆ.ಸಿ’ ಎಂದು ಟೈಟಲ್‌ ಇಡಲಾಗಿದೆ. “ಜೆ.ಸಿ’ ಎಂದರೆ “ಜಯಣ್ಣ ಕಂಬೈನ್ಸ್‌’ ಎಂದರ್ಥವಲ್ಲ, ಬದಲಾಗಿ ಇಲ್ಲಿ ಚಿತ್ರತಂಡ ಜುಡಿಶಿಯಲ್‌ ಕಸ್ಟಡಿ ಎಂಬ ಅರ್ಥ ನೀಡಿದೆ. ಜೈಲಿಂದ ಹೊರ ಬಂದ ಯುವಕನ ಕಥೆ ಇದಾಗಿದೆ. “ನಡುವೆ ಅಂತರವಿರಲಿ’ ಸಿನಿಮಾ ಮೂಲಕ ನಾಯಕ ನಟನಾದ ಪ್ರಖ್ಯಾತ್‌ ಈ ಚಿತ್ರದ ನಾಯಕ.

Advertisement

ಜೆಸಿ ಸಿನಿಮಾದ ಮುಹೂರ್ತ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಬುಧವಾರ ನಡೆದಿದೆ. ಡಾಲಿ ಧನಂಜಯ ನಿರ್ಮಾಣದ 5ನೇ ಸಿನಿಮಾವಿದು. ಜೆಸಿ ಫ‌ಸ್ಟ್‌ ಲುಕ್‌ನಲ್ಲಿ ಬೆಂಗಳೂರು ಕಾರಾಗೃಹ, ಜೈಲು ಕಂಬಿಗಳನ್ನು ನೋಡಬಹುದು. ಸದ್ಯ ಟೈಟಲ್‌ ಪೋಸ್ಟರ್‌ ರಿಲೀಸ್‌ ಮಾಡಿರುವ ಚಿತ್ರತಂಡ ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ.

ಅಂದಹಾಗೆ “ಜೆಸಿ’ ಸಿನಿಮಾಗೆ ಚೇತನ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ನಿರ್ದೇಶಕ ಚೇತನ್‌ ಜೈರಾಮ್‌ ಅವರಿಗೂ ಇದು ಮೊದಲ ಸಿನಿಮಾ. ಪಕ್ಕಾ ಮಾಸ್‌ ಸಿನಿಮಾ ಇದಾಗಿದ್ದು ಚಿತ್ರಕ್ಕೆ ಮಾಸ್ತಿ ಅವರ ಖಡಕ್‌ ಡೈಲಾಗ್‌ ಇರಲಿದೆ. ಕಾರ್ತಿಕ್‌ ಅವರ ಛಾಯಾಗ್ರಹಣ, ರೋಹಿತ್‌ ಸೋವರ್‌ ಅವರ ಸಂಗೀತ ಜೆಸಿ ಸಿನಿಮಾಗೆ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next