Advertisement

ಶಾಸಕರ ಊರಿನ ರಸ್ತೆಯೂ ಹೊಂಡಮಯ!

11:56 AM Oct 21, 2018 | |

ಉಪ್ಪಿನಂಗಡಿ: ಉಪ್ಪಿನಂಗಡಿಯ ರಾಮನಗರ ಹಿರೇಬಂಡಾಡಿ ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿದ್ದು, ಸಂಚಾರಕ್ಕೆ ಆಯೋಗ್ಯವಾದ ಸ್ಥಿತಿ ಇದೆ.

Advertisement

ಏಳು ವರ್ಷಗಳ ಹಿಂದೆ ಗ್ರಾಮೀಣ ಸಡಕ್‌ ಯೋಜನೆಯಡಿ ಒಂದು ಕೋಟಿ ರೂ.ಗೂ ಮಿಕ್ಕಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಸಲಾಗಿತ್ತು. ರಸ್ತೆಯ ಗುತ್ತಿಗೆ ವಹಿಸಿಕೊಂಡಿದ್ದ ಗುತ್ತಿಗೆದಾರ ಒಳಗುತ್ತಿಗೆ ವಹಿಸುವ ಮೂಲಕ ಆರಂಭದಲ್ಲೇ ಕಾಮಗಾರಿ ಸಂಪೂರ್ಣ ಕಳಪೆಯಾಗಲು ಕಾರಣವಾಗಿತ್ತು. ಈ ಬಗ್ಗೆ ಲೋಕಯುಕ್ತರಿಗೂ ದೂರು ಸಲ್ಲಿಕೆಯಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ಎಂಜಿನಿಯರ್‌ಗಳ ಮೂಲಕ ರಸ್ತೆಯ ಗುಣಮಟ್ಟವನ್ನು ಪರಿಶೀಲಿಸಿ ಕಳಪೆ ಯಾಗಿರುವುದನ್ನು ದೃಢಪಡಿಸಿಕೊಂಡು ಸಂಬಂಧಪಟ್ಟ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಮುಂಗಡ ಹಣವನ್ನು ಮುಟ್ಟುಗೋಲು ಹಾಕಿದ್ದರು. ಆನಂತರದ ಐದು ವರ್ಷ ನಿರ್ವಹಣೆಯನ್ನು ಬದಲಿ ಗುತ್ತಿಗೆದಾರರಿಗೆ ವಹಿಸಿದ್ದು, ಇದೀಗ ನಿರ್ವಹಣೆ ಅವಧಿ ಮುಗಿದ ಕಾರಣ ರಸ್ತೆಯಲ್ಲಿ ಹೊಂಡ – ಗುಂಡಿಗಳನ್ನು ಕಾಣುವಂತಾಗಿದೆ.

ಸಡಕ್‌ ಯೋಜನೆಯಾಗಿರುವ ಕಾರಣ ಜಿ.ಪಂ. ಹಾಗೂ ಲೋಕೋಪ ಯೋಗಿ ಇಲಾಖೆ ಈ ರಸ್ತೆ ತಮ್ಮ ಇಲಾಖೆಗೆ ಸೇರಿಕೊಂಡಿಲ್ಲ ಎಂದು ನುಣಿಚಿ ಕೊಳ್ಳುತ್ತಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರ ಮನೆಗೆ ಇದೇ ರಸ್ತೆಯ ಮೂಲಕ ಹೋಗಬೇಕು. ಅವರು ಈ ಬಗ್ಗೆ ಗಮನ ಹರಿಸಬೇಕು ಎನ್ನುವ ಆಗ್ರಹ ಕೇಳಿಬಂದಿದೆ.

ಅಧಿಕಾರಿಗಳ ನಿರ್ಲಕ್ಷ್ಯ
ಗ್ರಾಮೀಣ ಸಡಕ್‌ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿಯಾಗುತ್ತಲಿದೆ. ಸರಕಾರದ ಯೋಜನೆಗಳ ಕಾಮಗಾರಿ ನಡೆಸುವ ವೇಳೆ ಆ ಭಾಗದ ಎಂಜಿನಿಯರ್‌ಗಳು ಖುದ್ದು ಪರಿಶೀಲಿಸಬೇಕು. ಎಲ್ಲವೂ ಕಚೇರಿಯಲ್ಲೇ ಕುಳಿತು ನಿಭಾಯಿಸುವುದರಿಂದ ಇಂತಹ ದುಃಸ್ಥಿತಿ ಆಗುತ್ತಿದೆ. 
ಶೌಕತ್‌ ಅಲಿ
ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷರು

ಎಂಜಿನಿಯರ್‌ಗಳನ್ನು ಹೊಣೆ ಮಾಡಿ
ಸರಕಾರಗಳು ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ ಕಾಮಗಾರಿ ಸಮರ್ಪಕವಾಗಿ ಇದೆಯೇ ಎನ್ನುವುದಕ್ಕೆ ಎಂಜಿನಿಯರ್‌ಗಳಿಂದ ಬಿಲ್ಲು ಮಂಜೂರಾತಿಗೆ ಮುನ್ನ ಪರಿಶೀಲಿಸುವುದು ಅವರ ಕರ್ತವ್ಯವಾಗಿರುತ್ತದೆ. ಒಂದೊಮ್ಮೆ ಕಳಪೆ ಕಾಮಗಾರಿ ಎಂದು ದೃಢಪಟ್ಟರೆ ಅದಕ್ಕೆ ಎಂಜಿನಿಯರ್‌ಗನ್ನೇ ಹೊಣೆ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಶ್ರಫ್ ಬಸ್ತಿಕಾರ್
   ಸ್ಥಳೀಯರು

Advertisement
Advertisement

Udayavani is now on Telegram. Click here to join our channel and stay updated with the latest news.

Next