Advertisement
ಅದ್ಭುತ ಸಾಂಸ್ಕೃತಿಕ ನೃತ್ಯ ಪ್ರದರ್ಶನದಿಂದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮುಖ್ಯ ಆಕರ್ಷಣೆಯಾಗಿ ಭಾರತದ ಸುಪ್ರಸಿದ್ಧ ಚಿತ್ರ ಕಲಾವಿದರಾದ ವಿಲಾಸ್ ನಾಯಕ್ ಅವರು ಪ್ರದರ್ಶನ ನೀಡಿದರು. ಐಸಿಸಿ ಈ ಮಹೋನ್ನತ ಕಾರ್ಯಕ್ರಮವನ್ನು ಭಾರತದ ಶ್ರೀಮಂತ ಪರಂಪರೆ, ಸಂಸ್ಕೃತಿ ಹಾಗೂ ಅನೇಕತೆಯಲ್ಲಿ ಏಕತೆಯನ್ನು ಆಚರಿಸಲು ಹಮ್ಮಿಕೊಂಡಿತ್ತು.ಈ ಉತ್ಸವವು ಭಾರತ ಹಾಗೂ ಕತಾರ್ ದೇಶಗಳ ನಡುವಿನ 50 ವರ್ಷಗಳ ರಾಜತಾಂತ್ರಿಕ ಸಂಬಂಧಗಳ ಮಹತ್ವವನ್ನು ಸಾರುತ್ತಿತ್ತು.
Related Articles
Advertisement
ಕಾರ್ಯಕ್ರಮದಲ್ಲಿ ಸಾವಿರಾರು ಭಾರತೀಯರು, ಕತಾರ್‌ನ ನಾಗರಿಕರು ಮತ್ತು ಇತರ ದೇಶಗಳ ಅನಿವಾಸಿ ನಾಗರೀಕರು ಆಗಮಿಸಿದ್ದರು. ಕರ್ನಾಟಕದ ಬೈಂದೂರು ಮೂಲದವರಾದ ಐ.ಸಿ.ಸಿ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಟಾಗಿಲು ಅವರು ಕಾರ್ಯಕ್ರಮದ ಆಯೋಜನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಐ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ಕುಮಾರ್ ಹಾಗೂ ಐ.ಸಿ.ಸಿ ಆಡಳಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಮಾ.8ರಂದು ಕಾರ್ಯಕ್ರಮದಲ್ಲಿ ಭಾರತೀಯ ದೂತಾವಾಸದ ಉಪಮುಖ್ಯಸ್ಥರಾದ ಸಂದೀಪ್ ಕುಮಾರ್ ಮಾತನಾಡಿ, “ಪ್ಯಾಸೇಜ್ ಟು ಇಂಡಿಯಾ’, ಇಂತಹ ಬೃಹತ್ ಗಾತ್ರದ ಭಾರತೀಯ ಸಂಭ್ರಮಾಚರಣೆಯ ಮಹತ್ವವನ್ನು ವಿಶ್ಲೇಷಿಸಿ ಆಗಮಿಸಿದ್ದ ಕತಾರ್‌ನ ವಿವಿಧ ಮಂತ್ರಾಲಯಗಳ ಗಣ್ಯರನ್ನು ಸಮ್ಮಾನಿಸಿದರು.
ಭಾರತೀಯ ದೂತಾವಾಸದ ಪ್ರಥಮ ಕಾರ್ಯದರ್ಶಿಗಳಾದ ಸಚಿನ್ ದಿನಕರ್ ಶಂಕಪಾಲ ಹಾಗೂ ಡಾ| ವೈಭವ್ ತಾಂಡಾಳೆ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎರಡನೇ ದಿನದ ಪ್ರಮುಖ ಆಕರ್ಷಣೆಗಳೆಂದರೆ ಚಿತ್ರಗಾರ ವಿಲಾಸ್ ನಾಯಕ್ ಅವರ ಅದ್ಭುತ ಆಶು ಚಿತ್ರ ಕಲೆ, ಬೃಹತ್ ತಂಡದಿಂದ ಗಾರ್ಬಾ ನೃತ್ಯ, ಕತಾರ್‌ನ ಆಂತರಿಕ ಮಂತ್ರಾಲಯದ ವತಿಯಿಂದ ಶ್ವಾನ ಪ್ರದರ್ಶನ ಮತ್ತು ಭಾರತದಿಂದ ಆಗಮಿಸಿದ್ದ ಕಲಾವಿದರಿಂದ ಕವ್ವಾಲಿ ಹಾಡುಗಾರಿಕೆ. ಸಂಜೆಯ ಕಾರ್ಯಕ್ರಮವು ಐ.ಸಿ.ಸಿ ಕಾರ್ಯದರ್ಶಿ ಅಬ್ರಹಾಂ ಜೋಸೆಫ್ ಅವರ ವಂದನಾರ್ಪಣೆಯೊಂದಿಗೆ ಸಂಪನ್ನವಾಯಿತು.
ಮಾ.10ರಂದು ಭಾರತದ ಸುಪ್ರಸಿದ್ಧ ಚಿತ್ರಕಾರ ವಿಲಾಸ್ ನಾಯಕ ಅವರ ಮೂರನೇ ಆವೃತ್ತಿಯ ಚಿತ್ರಣದೊಂದಿಗೆ ಪ್ರಾರಂಭಿಸಿ, ಭಾರತದಿಂದ ಆಗಮಿಸಿದ್ದ ತಂಡದಿಂದ ತಿರುವಿತರ ನೃತ್ಯ ಪ್ರದರ್ಶನ, ಮಹಾರಾಷ್ಟ್ರ ಮೂಲದ ನೃತ್ಯ ಪ್ರದರ್ಶನ, ಕವಾಲಿ ಗಾಯನ ಮತ್ತು ಇತರ ನೃತ್ಯ ಪ್ರದರ್ಶನ ಸಭಿಕರ ಮನರಂಜಿಸಿತು. ಅಂತಿಮ ದಿನದ ಕಾರ್ಯಕ್ರಮಕ್ಕೆ ಐಸಿಸಿ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ವಂದನಾರ್ಪಣೆ ಸಲ್ಲಿಸಿದರು.