ಹಾವೇರಿ: ಕಟ್ಟಡದ ಸುತ್ತಮುತ್ತ ಬೆಳೆದಿರುವ ಗಿಡಗಂಟಿ, ಎಲ್ಲೆಂದರಲ್ಲಿ ಬಿದ್ದಿರುವ ತ್ಯಾಜ್ಯ, ಮಾಸುತ್ತಿರುವ ಕಟ್ಟಡದ ಬಣ್ಣ ಇದು ನಗರದಲ್ಲಿ ಸುಮಾರು 8 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಹೈಟೆಕ್ ರಂಗಮಂದಿರಕ್ಕೆ ಎದುರಾಗಿರುವ ದುಸ್ಥಿತಿ.
Advertisement
ಹೌದು, ನಗರದ ಹೃದಯ ಭಾಗದಲ್ಲಿರುವ ಗೂಗಿಕಟ್ಟಿ ಬಳಿ ವಿಶಾಲವಾದ ಜಾಗೆಯಲ್ಲಿ ನಿರ್ಮಿಸಿರುವ ಸುಸಜ್ಜಿತ ಹೈಟೆಕ್ ರಂಗಮಂದಿರ ನಗರಸಭೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನಿರ್ವಹಣೆ ಇಲ್ಲದೇ ಪಾಳು ಬಿದ್ದಿದೆ.
ಹಿಂದೆಯೇ ಹೈಟೆಕ್ ರಂಗಮಂದಿರ ನಿರ್ಮಿಸಿ ಉದ್ಘಾಟನೆಯನ್ನೂ ಮಾಡಲಾಗಿದೆ. ಆದರೆ ಕಟ್ಟಡದ ನಿರ್ವಹಣೆ ಮಾಡಲು ಟೆಂಡರ್ ನೀಡುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿರುವುದಿಂದ ಇಲ್ಲಿವರೆಗೂ ಯಾವುದೇ ಸಭೆ-ಸಮಾರಂಭ, ಸಮಾವೇಶವನ್ನು ನಡೆಸಲು ಸಾಧ್ಯವಾಗದೇ ಸದುಪಯೋಗವಾಗುತ್ತಿಲ್ಲ. ಬದಲಾಗಿ ಅಕ್ರಮ
ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಕಸ ತ್ಯಾಜ್ಯ, ಗಿಡಗಂಟಿಗಳು ಬೆಳೆದು ಭವ್ಯ ಕಟ್ಟಡದ ಸೌಂದರ್ಯಕ್ಕೆ ಧಕ್ಕೆಯುಂಟಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಶೀಘ್ರ ಸಾರ್ವಜನಿಕರಿಗೆ ಸಭೆ ಸಮಾರಂಭದಂತಹ
ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Related Articles
Advertisement
ಬಿಡ್ ಮಾಡ್ತಿಲ್ಲ: ಮಾರ್ಗಸೂಚಿಯನ್ವಯ ಹೈಟೆಕ್ ರಂಗಮಂದಿರ ಬಾಡಿಗೆ ರೂಪದಲ್ಲಿ ಹಸ್ತಾಂತರಿಸಲು ಸಾರ್ವಜನಿಕ ಗುತ್ತಿಗೆದಾರರಿಂದ ನಾಲ್ಕು ಬಾರಿ ಟೆಂಡರ್ ಕರೆದಿದ್ದೇವೆ. ಬಾಡಿಗೆ ಹೆಚ್ಚಾಗುತ್ತೋ ಅಥವಾ ಏನಾದರೂ ಸಮಸ್ಯೆಯಾಗುತ್ತೋ ಗೊತ್ತಿಲ್ಲ. ಆದರೂ ಇದುವರೆಗೆ ಯಾರೂ ಬಿಡ್ ಮಾಡುತ್ತಿಲ್ಲ. ಇದರಿಂದ ಟೆಂಡರ್‌ದಾರರಿಗೆ ರಂಗಮಂದಿರ ಹಸ್ತಾಂತರಿಸಲು ಸಮಸ್ಯೆಯಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ ನಿರ್ಮಿಸಿರುವ ಹೈಟೆಕ್ ರಂಗಮಂದಿರ ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಐದು ಬಾರಿ ಟೆಂಡರ್ ಕರೆದರೂಒಬ್ಬರೇ ಅರ್ಜಿ ಹಾಕಿದ್ದಾರೆ. ಅವರು ಐದು ವರ್ಷಕ್ಕೆ ಕರಾರು ಒಪ್ಪಂದ ಕೇಳುತ್ತಿದ್ದಾರೆ. ಈ ಕುರಿತು ಶೀಘ್ರದಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು.
*ರುದ್ರಪ್ಪ ಲಮಾಣಿ, ಶಾಸಕ, ವಿಧಾನಸಭೆ ಉಪಸಭಾಧ್ಯಕ್ಷರು ನಗರದಲ್ಲಿ ಹೈಟೆಕ್ ರಂಗಮಂದಿರ ಹೆಸರಿಗೆ ಮಾತ್ರ ಇದ್ದು, ಯಾವುದೇ ಸಾರ್ವಜನಿಕ ಸಭೆ, ಸಮಾರಂಭಗಳು ನಡೆಯುತ್ತಿಲ್ಲ. ಕಟ್ಟಡ ಸಾರ್ವಜನಿಕರ ಉಪಯೋಗಕ್ಕಿಲ್ಲದೇ ಧೂಳು ತಿನ್ನುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಿಕೊಡಬೇಕು.
*ವೀರೇಶ ಹತ್ತಿಮತ್ತೂರ, ಹಾವೇರಿ ರಂಗಮಂದಿರದಲ್ಲಿರುವ ಸೌಲಭ್ಯ
ಹೈಟೆಕ್ ರಂಗಮಂದಿರ ಸುಸಜ್ಜಿತ ಜಿ-ಪ್ಲಸ್1 ಮಾದರಿ ಕಟ್ಟಡ ಒಳಗೊಂಡಿದೆ. ವಿಶಾಲವಾದ ಫಂಕ್ಷನ್ ಹಾಲ್, ಊಟದ ಹಾಲ್ ಇದೆ. ಕಾರ್ಯಕ್ರಮ ಆಯೋಜನೆಗೆ ಉತ್ತಮ ವೇದಿಕೆ ಸೌಲಭ್ಯ ಇದ್ದು, ಅಡುಗೆ ಹಾಲ್ ಇದೆ. ಪ್ರತ್ಯೇಕವಾಗಿ ಡ್ರೆಸ್ಸಿಂಗ್ ರೂಮ್‌ಗಳು ಇವೆ. 6-7 ಕೊಠಡಿಗಳಿವೆ. ಜತೆಗೆ ಶೌಚಾಲಯ, ಕುಡಿಯುವ ನೀರು, ಉತ್ತಮ ಬೆಳಕಿನ ವ್ಯವಸ್ಥೆ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳು ಇವೆ. ಆದರೆ ಈ ಎಲ್ಲ ಸೌಲಭ್ಯಗಳಿದ್ದರೂ ಸಾರ್ವಜನಿಕರಿಗೆ
ಸದ್ಬಳಕೆಯಾಗದೇ ಹಾಳಾಗುತ್ತಿವೆ. ಸಾಮಾನ್ಯ ಸಭೆಯಲ್ಲೂ ಚರ್ಚೆ
ಇತ್ತೀಚೆಗೆ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪಾಳು ಬಿದ್ದಿರುವ ರಂಗಮಂದಿರದ ಬಗ್ಗೆ ಸದಸ್ಯ ಬಸವರಾಜ ಬೆಳವಡಿ ಗಮನ ಸೆಳೆದರು. ಸುಮಾರು 8 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ನಿರ್ವಹಣೆ ಇಲ್ಲದೇ 3 ವರ್ಷದಿಂದ ಖಾಲಿ ಬಿದ್ದಿದೆ. ಅಲ್ಲಿ ಯಾರೊ ಶೆಡ್ ಹಾಕಿಕೊಂಡಿದ್ದಾರೆ. ಕೂಡಲೇ ಈ ಶೇಡ್ ತೆರವುಗೊಳಿಸಿ, ರಂಗ ಮಂದಿರ ಬಾಡಿಗೆಗೆ ಕೊಡಿ ಒಂದು ಒತ್ತಾಯಿಸಿದ್ದಾರೆ. ■ ವೀರೇಶ ಮಡ್ಲೂರ