Advertisement

ನೂತನ ಸಂಸತ್ ಭವನಕ್ಕೆ ”ಅನುಭವ ಮಂಟಪ”ನಾಮಕರಣ ಮಾಡಲು ಆಗ್ರಹ

05:55 PM Aug 07, 2022 | Team Udayavani |

ಬೆಂಗಳೂರು: ದೆಹಲಿಯ ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ಎಂಬ ಹೆಸರನ್ನು ನಾಮಕರಣ ಮಾಡಬೇಕು ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮನವಿ ಮಾಡಿದೆ.

Advertisement

ಪ್ರಪ್ರಥಮವಾಗಿ ವಿಶ್ವ ಮಟ್ಟದಲ್ಲಿ ಪ್ರಜಾಪ್ರಭುತ್ವದ ಹುಟ್ಟು ಮತ್ತು ಸಂಸತ್ತು ಸ್ಥಾಪಿಸಿದ್ದು ಭಾರತದ ಬಸವಕಲ್ಯಾಣದಲ್ಲಿ ಎಂಬ ಮಹತ್ವದ ವಿಷಯವನ್ನು ಪ್ರಚಾರಪಡಿಸಿ ಇಡೀ ವಿಶ್ವದ ಗಮನ ಭಾರತದತ್ತ ಕೇಂದ್ರೀಕರಿಸುವಂತೆ ಮಾಡಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ  ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಪ್ರಶಂಸೆ ವ್ಯಕ್ತ ಪಡಿಸಿದೆ.

ಅನುಭವ ಮಂಟಪದ ಮುಖಾಂತರ ಬಸವಾದಿ ಶರಣರು 12ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ವಿಶ್ವದ ಪ್ರಪ್ರಥಮ ಸಂಸತ್ತನ್ನು ಪ್ರಾರಂಭಿಸಿ ವಿಶ್ವಕ್ಕೆ ಪ್ರಜಾಪ್ರಭುತ್ವ ಸಂಸತ್ತಿನ ಕಲ್ಪನೆ ಕೊಟ್ಟ ದೇಶ ಭಾರತ. ಆದ್ದರಿಂದ ನಮ್ಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಯವರು ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ಎಂಬ ಹೆಸರನ್ನು ನಾಮಕರಣ ಮಾಡಿ ಜಗತ್ತಿಗೆ ಪ್ರಪ್ರಥಮ ಪ್ರಜಾಪ್ರಭುತ್ವ ಸಂಸತ್ತಿನ ಕಲ್ಪನೆ ಮಾಡಿಕೊಟ್ಟಿದ್ದು ಭಾರತ ಎಂದು ತಿಳಿಯುವಂತೆ ಮಾಡಬೇಕೆಂದು ಮನವಿ ಮಾಡಲಾಗಿದೆ.

ಕರ್ನಾಟಕ ಸರ್ಕಾರವು ಈ ಬಗ್ಗೆ ಒಂದು ನಿರ್ಣಯ ಕೈಗೊಂಡು ಸಂಘಟನೆಯ ಬೇಡಿಕೆಗೆ ಒತ್ತಾಸೆಯಾಗಿ ನಿಲ್ಲುವುದರ ಜತೆಗೆ ಕೇಂದ್ರಕ್ಕೆ ಈ ಬಗ್ಗೆ ಶಿಫಾರಸು ಮಾಡುವಂತೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಲಾಗಿದೆ.

ಇದು ಕೇವಲ ಸಂಘಟನೆಯ ಕನಸು ಮಾತ್ರವಲ್ಲ, ಇಡೀ ಭಾರತ ದೇಶದ ಪ್ರತಿಯೊಬ್ಬರ ಆಸೆಯಾಗಿದ್ದು, ತಕ್ಷಣವೇ ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ಜನತೆಗೆ ಸಂತೋಷದ ವಿಷಯವನ್ನು ಕೊಡಬೇಕೆಂದು ಮನವಿ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next