Advertisement
ಸ್ವಸ್ತಿಶ್ರೀಗಳವರು ಐವತ್ಮೂರು ವರ್ಷಗಳ ಕಾಲ ಭಟ್ಟಾರಕ ಪೀಠಾಧಿಕಾರಿಯಾಗಿ, ನಿಜ ಅರ್ಥದಲ್ಲಿ ಪಂಡಿತಾಚಾರ್ಯವರ್ಯ ಎಂದೇ ಗೌರವಾದರಗಳಿಗೆ ಪಾತ್ರರಾಗಿದ್ದರು. ಜೈನಧರ್ಮಶಾಸ್ತ್ರ ಗ್ರಂಥಗಳ ಸ್ವಾದ್ಯಾಯ, ಸಂಶೋಧನೆಯಿಂದ ಗುರು ಗಳಾಗಿದ್ದರು. ಅವರು ಕರ್ನಾಟಕದ ಎಲ್ಲ ಜಿನಮಂದಿರಗಳ ದರ್ಶನ ಮಾಡಿದ್ದರಲ್ಲದೇ ಶಿಥಿಲಾ ವಸ್ಥೆಯ ಜೈನ ಬಸದಿಗಳ ಸಂರಕ್ಷಣೆಗೆ ಪ್ರೇರಣೆ ನೀಡಿದ್ದರು. 1981ನೇ ಇಸವಿಯಲ್ಲಿ ಶ್ರವಣಬೆಳಗೊಳದ ಗೊಮ್ಮಟೇಶ್ವರ ಶ್ರೀ ಬಾಹುಬಲಿ ಸ್ವಾಮಿಯ ಏಕಶಿಲಾ ವಿಗ್ರಹದ ಸಹಸ್ರಾಬ್ದ ಪ್ರತಿಷ್ಠಾ ಮಹೋತ್ಸವ ಮಹಾಮಸ್ತಕಾಭಿಷೇಕವನ್ನು ವಿಶ್ವವ್ಯಾಪಿ ಜೈನ ಸಿದ್ಧಾಂತ, ಬಾಹುಬಲಿಯ ತ್ಯಾಗ-ಅಹಿಂಸಾ ತಣ್ತೀ ವನ್ನು ಪಸರಿಸುವಂತೆ ಆಯೋಜಿ ಸಿದ್ದರು. ದೇಶದಾದ್ಯಂತದಿಂದ ಸರ್ವಧರ್ಮ ಸಮ ನ್ವಯ ಸಮ್ಮೇಳನಕ್ಕೆ ವಿವಿಧ ಪೀಠಾಧೀಶರನ್ನು, ಧರ್ಮ ಮಾರ್ಗ ದರ್ಶಕರನ್ನು ಆಹ್ವಾನಿಸಿದ್ದರು. ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಸ್ವಸ್ತಿಶ್ರೀಗಳವರಿಗೆ ‘ಕರ್ಮ ಯೋಗಿ’ ಉಪಾಧಿ ನೀಡಿ, ಗೌರವ ಸಲ್ಲಿಸಿದುದು ಚರಿತ್ರಾರ್ಹ. 575 ಶಿಲಾಶಾಸನ ಹೊಂದಿರುವ ಶ್ರವಣ ಬೆಳ ಗೊಳದ 60ಕ್ಕೂ ಹೆಚ್ಚು ಜಿನಾಲಯಗಳ ಸಂರಕ್ಷಣೆ ಮತ್ತು ಇತಿಹಾಸ ಪ್ರಕಟನೆಗೆ ಪೂರಕ ಯೋಜನೆ ಅನು ಷ್ಠಾನಗೊಳಿಸಿದರು. ಅಭಯದಾನ, ಔಷಧ ದಾನ, ವಿದ್ಯಾದಾನ, ಆಹಾರದಾನದ ಮಹತ್ವವನ್ನು ಸಾದರಪಡಿಸಿದರು.
Related Articles
Advertisement
ಶ್ರವಣಬೆಳಗೊಳ ಗುರುಪೀಠವು ಗಂಗಾ, ಹೊಯ್ಸಳ, ವಿಜಯನಗರ, ಮೈಸೂರು ಸಾಮ್ರಾಜ್ಯದ ಅರಸರಿಂದ ಗುರುಮನ್ನಣೆಗೆ ಪಾತ್ರ ವಾಗಿ ಬೆಳಗಿದ ಪರಂಪರೆಯನ್ನು ಹೊಂದಿದೆ. ಅಲ್ಲದೆ ಪ್ರಮುಖ ದಿಗಂಬರಾಚಾರ್ಯರು ಧರ್ಮಪೀಠ ವನ್ನು ಅಲಂಕರಿಸಿ ಧರ್ಮ ಪ್ರಭಾವನೆ, ರಕ್ಷಣೆ ಯೊಂದಿಗೆ ಆತ್ಮಕಲ್ಯಾಣದ ಹಾದಿಯಲ್ಲಿ ನಡೆದು ಶ್ರೀಪೀಠ ಪರಂಪರೆಯನ್ನು ಪ್ರಾಜ್ವಲ್ಯಮಾನಗೊಳಿಸಿದ್ದಾರೆ.
ಈ ಪರಂಪರೆಯಲ್ಲಿ ಬಂದ 33ನೇ ಭಟ್ಟಾರಕರಾಗಿ ಪಟ್ಟಾಭಿಷಿಕ್ತರಾಗಿ 20-21ನೇ ಶತಮಾನದಲ್ಲಿ ಶ್ರವಣಬೆಳಗೊಳದ ಕೀರ್ತಿ ಪತಾಕೆಯನ್ನು ವಿಶ್ವದೆತ್ತರಕ್ಕೆ ಕೊಂಡೊಯ್ದ ಭಟ್ಟಾರಕ ಗುರುಗಳೆಂದರೆ ನಮ್ಮ ದೀಕ್ಷಾ ಗುರುಗಳಾದ ಭಟ್ಟಾರಕ ಚೂಡಾಮಣಿ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು. ಜ್ಞಾನಕ್ಕೆ ಬೆಳಕಾಗಿ, ಧ್ಯಾನಕ್ಕೆ ಗುರುವಾಗಿ, ಧರ್ಮಕ್ಕೆ ಉಸಿರಾಗಿ, ತ್ಯಾಗಕ್ಕೆ ತನುವಾಗಿ, ಸತ್ಯಕ್ಕೆ ಪಥವಾಗಿ, ಮೈತ್ರಿಗೆ ಮರವಾಗಿ, ಜಿನರಿಗೆ ಸಖರಾಗಿ, ಜನರಿಗೆ ಜಿನರಾಗಿ ಜನಮನದಿ ಚಿರವಾಗಿ ಉಳಿದವರು.
ನಿಷಿಧಿ ಮಂಟಪದಲ್ಲಿ ಏನಿದೆ?ಹಾಸನ: ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಜಿನೈಕ್ಯರಾಗಿ 2 ವರ್ಷ ಸಮೀಪಿಸುತ್ತಿದೆ. ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಶ್ರವಣಬೆಳಗೊಳದ ಚಂದ್ರಗಿರಿ (ಚಿಕ್ಕಬೆಟ್ಟ) ತಪ್ಪಲಿನಲ್ಲಿ ನೆರವೇರಿದ್ದ ಸ್ಥಳ ಇದೀಗ ನಿಷಿಧಿ ಮಂಟಪವಾಗಿ ರೂಪುಗೊಂಡಿದ್ದು, ಡಿ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಷಿಧಿ ಮಂಟಪವನ್ನು ಲೋಕಾರ್ಪಣೆ ಮಾಡುವ ಕಾರ್ಯಕ್ರಮ ನಿಗದಿಯಾಗಿದೆ. ಆಂಧ್ರಪ್ರದೇಶದಿಂದ ತರಿಸಿದ ವಿಶೇಷ ಶಿಲೆಯಿಂದ ನಿಷಿಧಿ, 7 ಅಡಿ ಎತ್ತರ, 6 ಅಡಿ ಅಗಲದ ಮಂಟಪ ನಿರ್ಮಿಸಲಾಗಿದೆ. ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಬಳಸುತ್ತಿದ್ದ ಪಾದುಕೆಗಳನ್ನೂ ಮಂಟಪದ ಬಳಿ ಪ್ರತಿಷ್ಠಾಪಿಸಲಾಗಿದೆ. ಪೂರ್ವ ಜಿನೈಕ್ಯ ಭಟ್ಟಾರಕ ಸ್ವಾಮೀಜಿಗಳ ನಿಷಿಧಿ ಮಂಟಪಗಳೂ ಬೆಟ್ಟದಲ್ಲಿ ನಿರ್ಮಾಣವಾಗಿದ್ದರೂ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವ ನಿಷಿಧಿ ಮಂಟಪ ಬೃಹತ್ ಹಾಗೂ ವಿಶೇಷ ಅಕರ್ಷಣೀಯವಾಗಿದೆ. ಜತೆಗೆ ಇದೀಗ ಪೂರ್ವಭಟ್ಟಾರಕರ ನಿಷಿಧಿ ಬೆಟ್ಟಕ್ಕೆ ಇದೀಗ ಹೊಸದಾಗಿ 124 ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿದೆ. ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಯವರು ಮಾವಿನ ಹಣ್ಣಿನ ಪ್ರಿಯರು. ಹೀಗಾಗಿ, ಬೆಟ್ಟದ ಪರಿಸರದಲ್ಲಿ ಮಾವಿನ ಗಿಡಗಳನ್ನು ನೆಡಲಾಗಿದ್ದು, ಮಂಟಪ ಲೋಕಾರ್ಪಣೆಯ ದಿನ 10 ಸಾವಿರ ಮಾವಿನ ಗಿಡಗಳ ವಿತರಣೆಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ.