Advertisement
ಬಿಳಿನೆಲೆ ಕೈಕಂಬ ಶಾಲೆಯಿಂದ ಸುಮಾರು 33 ಮಕ್ಕಳು ಶಾಲಾ ಪ್ರವಾಸಕ್ಕಾಗಿ ಶಿಕ್ಷಕರೊಂದಿಗೆ ತೆರಳಿದ್ದರು. ಬೆಳಗಾವಿ ಸುವರ್ಣಸೌಧಕ್ಕೆ ಭೇಟಿ ನೀಡಿದ್ದ ಅವರು ಮೊದಲಿಗೆ ಸಭಾಪತಿ ಯು.ಟಿ. ಖಾದರ್ ಅವರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಶಾಲಾ ಮಕ್ಕಳು ನೋಡದೇ (ಬಾಯಿ ಪಾಠ) ಸಂವಿಧಾನ ಪೀಠಿಕೆಯನ್ನು ಯು.ಟಿ.ಖಾದರ್ ಎದುರು ವಾಚಿಸಿದರು. ಇದಕ್ಕೆ ಮೆಚ್ಚುಗೆ ಸೂಚಿಸಿದ ಖಾದರ್ ಅವರು ಮಕ್ಕಳನ್ನು ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆದರೂ ಮಕ್ಕಳು ನೋಡದೆ ಸಂವಿಧಾನ ಪೀಠಿಕೆ ವಾಚಿಸಿದರು. ಇದಕ್ಕೆ ಸಿಎಂ ಮೆಚ್ಚುಗೆ ಸೂಚಿಸಿ ಮಕ್ಕಳು, ಶಿಕ್ಷಕರನ್ನು ಶ್ಲಾಘಿಸಿದರು. ಆ ಬಳಿಕ ಸಿದ್ದರಾಮಯ್ಯ ಅವರು ಮಕ್ಕಳು ಸೇರಿದಂತೆ ಶಾಲಾ ಪ್ರವಾಸಕ್ಕೆ ಅಲ್ಲಿಗೆ ಆಗಮಿಸಿದ್ದ ವಿದ್ಯಾರ್ಥಿಗಳಿಗೆ 12ನೇಯ ಶತಮಾನದಲ್ಲಿಯೇ ಪ್ರಜಾಪ್ರಭುತ್ವ ಪರಿಕಲ್ಪನೆಯ ಮೇಲೆ ರೂಪುಗೊಂಡಿದ್ದ ಅನುಭವ ಮಂಟಪದ ಬಗ್ಗೆ ವಿವರಿಸಿದರು. ಶಾಲಾ ಮುಖ್ಯ ಶಿಕ್ಷಕಿ ಪವಿತ್ರಾ, ಎಸ್ಡಿಎಂಸಿ ಅಧ್ಯಕ್ಷ ನವೀನ್, ಶಿಕ್ಷಕಿ ವನಿತಾ ಮತ್ತಿತರರು ಜತೆಗಿದ್ದರು.