Advertisement

ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸಿ

12:14 PM May 05, 2017 | |

ಪಿರಿಯಾಪಟ್ಟಣ: ಕೇಂದ್ರ ಸರಕಾರದ ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು ಈ ಮೂಲಕ ಜನರನ್ನು ಆರ್ಥಿಕವಾಗಿ ಶೈಕ್ಷಣಿಕವಾಗಿ ಮೇಲೆತ್ತಬೇಕು ಎಂದು ಸಂಸದ ಪ್ರತಾಪ್‌ಸಿಂಹ ಹೇಳಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಕುಟುಂಬ ಭದ್ರತಾ ಯೋಜನೆಯ ಫ‌ಲಾನುಭವಿಗಳಿಗೆ ಪರಿಹಾರ ಚೆಕ್‌ ವಿತರಣೆ ಮಾಡಿ ಮಾತನಾಡಿ,  ಕೇಂದ್ರ ಸರಕಾರದ ಈ ಯೋಜನೆಯು ಅಕಾಲಿಕ ಮರಣ ಹೊಂದಿದ್ದ ಕುಟುಂಬಗಳಿಗೆ ಕುಟುಂಬ ಭದ್ರತಾ ಯೋಜನೆಯಡಿ ತಲಾ 20 ಸಾವಿರ ರೂಗಳನ್ನು ನೀಡಲಾಗುತ್ತಿದೆ ಎಂದರು.

ತಾಲೂಕಿನಾದ್ಯಂತ 120 ಜನರನ್ನು ಗುರುತಿಸಲಾಗಿದೆ. ಈ ರೀತಿ ನೋವಿನಲ್ಲಿ ಇರುವ ಕುಟುಂಬಗಳಿಗೆ ಬಿಜೆಪಿ ಕಾರ್ಯ ಕರ್ತರು ಸೇರಿದಂತೆ ಎಲ್ಲರೂ ಕೇಂದ್ರ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಅವರಿಗೆ ಸೌಲಭ್ಯ ಸಿಗುವಂತೆ ಮಾಡಬೇಕು. ಈ ಮೂಲಕ ಸಮಾಜದ ದುರ್ಬಲವರ್ಗದ ಜನರಿಗೆ ಸಹಾಯ ಮಾಡಬೇಕು ಎಂದರು.

ತಾಲೂಕಿನಲ್ಲಿ ತಂಬಾಕು ರೈತರಿಗೆ ಏಕ ಕಾಲದಲ್ಲಿ ಎಲ್ಲಾ ರೀತಿಯ ಗೊಬ್ಬರಗಳನ್ನು ನೀಡುವ ಕ್ರಮ ಕೈಗೊಳ್ಳಲಾಗುತ್ತಿದ್ದು. ಗೊಬ್ಬರ ಔಷಧಿಗಳಿಗಾಗಿ ಮಂಡಳಿಯ ಫ್ಲಾಟ್‌ ಫಾರಂಗಳಿಗೆ ರೈತರು ಅಲೆಯುವುದನ್ನು ತಪ್ಪಿಸಲು ಮತ್ತು ಅವರಿಗೆ ಇದರಿಂದ ಆಗುತ್ತಿದ್ದ ಸಾಗಾಣಿಕೆಯ ವೆಚ್ಚವನ್ನು ಉಳಿಸಲು ಕಳೆದ ವರ್ಷದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದ್ದು ಈ ಬಾರಿಯೂ ರೈತರಿಗೆ ಸಕಾಲಕ್ಕೆ ರಸಗೊಬ್ಬರವನ್ನು ವಿತರಿಸಲಾಗುವುದು ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ವೇಣುಗೋಪಾಲ್‌, ತಾಪಂ ಇಒ ಕೆ.ಬಸವರಾಜು, ತಹಶೀಲ್ದಾರ್‌ ಮಹೇಶ್‌, ಬಿಇಒ ಆರ್‌.ಕರೀಗೌಡ, ಶಿರಸ್ತೇದಾರ್‌ ಪ್ರಕಾಶ್‌, ತಾಲೂಕು ಬಿಜೆಪಿ ಅಧ್ಯಕ್ಷ ಪಿ.ಜೆ ರವಿ, ಮಾಜಿ ಅಧ್ಯಕ್ಷ ಆರ್‌.ಟಿ.ಸತೀಶ್‌, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹದೇವಪ್ಪ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next