Advertisement

ದಿಲ್ಲಿ ನೀರಿನ ಶುಲ್ಕ ಶೇ.20 ಹೆಚ್ಚಳ, 20,000 ಲೀ. ನೀರು ಉಚಿತ

03:00 PM Dec 26, 2017 | udayavani editorial |

ಹೊಸದಿಲ್ಲಿ : ದಿಲ್ಲಿ ಜಲ ಮಂಡಳಿ ಇಂದು ಮಂಗಳವಾರ ನೀರಿನ ಶುಲ್ಕವನ್ನು ಶೇ.20ರಷ್ಟು ಹೆಚ್ಚಿಸಿ ಶಾಕ್‌ ನೀಡಿದೆ. ಆದರೆ ತಿಂಗಳಿಗೆ 20,000 ಲೀಟರ್‌ ವರೆಗಿನ ನೀರಿನ ಬಳಕೆಗೆ ಯಾವುದೇ ಶುಲ್ಕ ಇರುವುದಿಲ್ಲ ಎಂಬುದನ್ನು ಅಂತೆಯೇ ಮುಂದುವರಿಸಿದೆ.

Advertisement

ಇದರರ್ಥ ತಿಂಗಳಿಗೆ 20,000 ಲೀಟರ್‌ ವರೆಗೆ ಬಳಸಲ್ಪಡುವ ನೀರನ್ನು ಉಚಿತವಾಗಿ ನೀಡಬೇಕು ಎಂಬ ಆಮ್‌ ಆದ್ಮಿಯ ದಿಲ್ಲಿ  ಸರಕಾರದ ಧೋರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದು ಮುಖ್ಯವೆನಿಸಿದೆ.

ನೀರಿನ ಶುಲ್ಕವನ್ನು ಶೇ.20ರಷ್ಟು ಹೆಚ್ಚಿಸುವ ಜಲ ಮಂಡಳಿ ಸಭೆಯ ನೇತೃತ್ವವನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರೇ ವಹಿಸಿದ್ದರು ಎನ್ನಲಾಗಿದೆ. ಈ ಹೊಸ ಶುಲ್ಕವನ್ನು 2018ರ ಜನವರಿ 1ರಿಂದ ಜಾರಿಗೆ ಬರಲಿದೆ.

ತಿಂಗಳಿಗೆ 20,000 ಲೀಟರ್‌ ಮೀರಿ ಬಳಸುವ ಎಲ್ಲ ಗ್ರಾಹಕರು ತಾವು ಬಳಸುವ ನೀರಿನ ಪೂರ್ತಿ ಪ್ರಮಾಣಕ್ಕೆ ಅನ್ವಯವಾಗುವ ಹೊಸ ಶುಲ್ಕವನ್ನು ಪಾವತಿಸಬೇಕಾಗುವುದು ಎಂದು ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next