Advertisement

New Delhi; ಹಿಂದೂ, ಸಿಕ್ಖ್ ಅರ್ಚಕರಿಗೆ 18,000 ರೂ.: ನೋಂದಣಿ ಶುರು

11:31 PM Dec 31, 2024 | Team Udayavani |

ಹೊಸದಿಲ್ಲಿ:  ದೇಗುಲದ ಅರ್ಚಕರು, ಗುರುದ್ವಾರದ ಗ್ರಂಥಿಗಳಿಗೆ ಪ್ರತೀ ತಿಂಗಳಿಗೆ 18,000 ರೂ. ವಿತ್ತೀಯ ನೆರವು ನೀಡುವ ಯೋಜನೆ “ಪೂಜಾರಿ- ಗ್ರಂಥಿ ಸಮ್ಮಾನ್‌ ಯೋಜನೆ’ಗೆ ಮಂಗಳವಾರದಿಂದ ಆಪ್‌ ಸಂಚಾಲಕ ಅರವಿಂದ ಕೇಜ್ರಿವಾಲ್‌ ನೋಂದಣಿ ಆರಂಭಿಸಿದ್ದಾರೆ.

Advertisement

ಹೊಸದಿಲ್ಲಿಯ ಕನ್ಹಾಟ್‌ಪ್ಲೇಸ್‌ನಲ್ಲಿರುವ ಹುನುಮಾನ್‌ ದೇಗುಲಕ್ಕೆ ಭೇಟಿ ನೀಡಿದ ಅವರು, ದೇಗುಲದ ಮಹಾಂತ ಅವರ ಹೆಸರನ್ನು ಯೋಜನೆಗೆ ನೋಂದಣಿ ಮಾಡಿಸಿಕೊಂಡರು.

ಕೇಜ್ರಿವಾಲ್‌ ಕಿಡಿ: ಈ ಯೋಜನೆ ಘೋಷಣೆ ಮಾಡಿದಾಗಿನಿಂದ ಬಿಜೆಪಿ ತಮ್ಮನ್ನು ನಿಂದಿಸುತ್ತಿದೆ ಎಂದು ಕೇಜ್ರಿವಾಲ್‌ ಆರೋಪಿಸಿದ್ದಾರೆ. ಬಿಜೆಪಿಯೇ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಇಂಥ ಯೋಜನೆಗಳನ್ನು ಜಾರಿ ಮಾಡಿಲ್ಲ? ನನ್ನನ್ನು ನಿಂದಿಸುವುದರಿಂದ ದೇಶಕ್ಕೆ ಏನಾದರೂ ಲಾಭವಿದೆಯೇ ಎಂದು ಅರವಿಂದ್‌ ಕೇಜ್ರಿವಾಲ್‌  ಪ್ರಶ್ನಿಸಿದ್ದಾರೆ.

ಕೇಜ್ರಿ ವಿರುದ್ಧ ಬಿಜೆಪಿ ಟೀಕೆ: ಈ ಮಧ್ಯೆ, ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್‌ ಅವರು, ಈ ಯೋಜನೆಗಳನ್ನು ಈಗಾಗಲೇ ಜಾರಿ ಮಾಡಿ. ಚುನಾವಣೆ ವರೆಗೆ ಯಾಕೆ ಕಾಯಬೇಕು? ಇದೆಲ್ಲವೂ ಚುನಾವಣ ಗಿಮಿಕ್‌. ಇದನ್ನು ಅರವಿಂದ್‌ ತುಷ್ಟೀಕರಣ ರಾಜಕಾರಣ ಎಂದು ಕರೆಯಬಹುದು ಎಂದು ವಾಗ್ಧಾಳಿ ನಡೆಸಿದ್ದಾರೆ. ಜತೆಗೆ ದಿಲ್ಲಿ ಸರಕಾರ‌ವು ಇಮಾಮ್‌ ಮತ್ತು ಮೌಲ್ವಿಗಳಿಗೆ 17 ತಿಂಗಳಿಂದ ವೇತನ ನೀಡಿಲ್ಲ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next