Advertisement

Delhi Government: ಕೇಜ್ರಿ ಯೋಜನೆಗಳಿಗೆ ನೋಂದಣಿ ಶುರು ಮಾಡಿಲ್ಲ

12:14 AM Dec 26, 2024 | Team Udayavani |

ಹೊಸದಿಲ್ಲಿ: ದಿಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಆಪ್‌ ಮತದಾರರನ್ನು ಸೆಳೆಯಲು ಘೋಷಣೆ ಮಾಡಿದ್ದ ಮಹಿಳಾ ಸಮ್ಮಾನ್‌ ಯೋಜನೆ ಮತ್ತು ಸಂಜೀವಿನಿ ಯೋಜನೆಗಳಿಗೆ ನೋಂದಣಿ ಶುರು ಮಾಡಿಲ್ಲ ಎಂದು ದಿಲ್ಲಿಯ ಆರೋಗ್ಯ, ಮಹಿಳಾ ಅಭಿವೃದ್ಧಿ ಇಲಾಖೆಗಳು ಸ್ಪಷ್ಟನೆ ನೀಡಿವೆ.

Advertisement

ಆ 2 ಯೋಜನೆಗಳನ್ನು ಸರಕಾರ ಹೊಂದಿಲ್ಲ. ಅದಕ್ಕೆ ನೋಂದಣಿ ಶುರು ಮಾಡಲಾಗಿಲ್ಲ. ಹೀಗಾಗಿ, ಯಾರೂ ವೈಯಕ್ತಿಕ ಮಾಹಿತಿ ನೀಡಬೇ­ಕಾಗಿಲ್ಲ ಎಂದು 2 ಇಲಾಖೆಗಳು ಮಾಧ್ಯಮ ಪ್ರಕಟನೆ ನೀಡಿವೆ.

ಈ ಬೆಳವಣಿಗೆ ಬಗ್ಗೆ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿ ಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಆತಿಶಿ ಹೇಳಿದ್ದಾರೆ. ಇದರಿಂದಾಗಿ ಆಪ್‌ ಮತ್ತು ದಿಲ್ಲಿ ಸರಕಾರದ ನಡುವೆ ಹೊಂದಾಣಿಕೆ ಕೊರತೆ ಇದೆ ಎಂಬ ವಿಶ್ಲೇಷಣೆಗಳೂ ನಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next