Advertisement

ಬೇರ್ ಸ್ಟೋ ಫಿಪ್ಟೀ ; ವಿಲಿಯಮ್ಸನ್ ಭರ್ಜರಿ ಬ್ಯಾಟಿಂಗ್ ; ಡೆಲ್ಲಿಗೆ 163 ರನ್ ಟಾರ್ಗೆಟ್

11:47 PM Sep 29, 2020 | Hari Prasad |

ಅಬುದಾಭಿ: ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ನಡುವಿನ ಐಪಿಎಲ್ ಟಿ20 ಲೀಗ್ ಪಂದ್ಯಾಟದಲ್ಲಿ ಡೆಲ್ಲಿ ಗೆಲುವಿಗೆ 163 ರನ್ ಗುರಿ ಲಭಿಸಿದೆ.

Advertisement

ಕಪ್ತಾನ ಜೋನಿ ಬೇರ್ ಸ್ಟೋ ಸೊಗಸಾದ ಅರ್ಧಶತಕ ಹಾಗೂ ವಾರ್ನರ್ ಮತ್ತು ವಿಲಿಯಮ್ಸ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಸನ್ ರೈಸರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಗಳನ್ನು ಕಳೆದುಕೊಂಡು 162 ರನ್ ಗಳಿಸಿತು.

ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಕಪ್ತಾನ ಶ್ರೇಯಸ್ ಅಯ್ಯರ್ ಹೈದ್ರಾಬಾದ್ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿದರು.

ಡೇವಿಡ್ ವಾರ್ನರ್ (45) ಹಾಗೂ ಜೋನಿ ಬೇರ್ ಸ್ಟೋ (53) ಸನ್ ರೈಸರ್ಸ್ ಗೆ ಉತ್ತಮ ಆರಂಭವನ್ನು ಒದಗಿಸಿದರು.


ಇದನ್ನೂ ಓದಿ: ಚೇಸಿಂಗ್ ನಲ್ಲಿ ಮುಗ್ಗರಿಸಿದ ಡೆಲ್ಲಿ ; ಸನ್ ರೈಸರ್ಸ್ ಗೆ 15 ರನ್ ಜಯ

Advertisement

ಬಳಿಕ ಬಂದ ಮನೀಶ್ ಪಾಂಡೆ (03) ಮಿಂಚಲಿಲ್ಲ. ಸನ್ ರೈಸರ್ಸ್ ಇನ್ನಿಂಗ್ಸ್ ಗೆ ಚುರುಕು ಮುಟ್ಟಿಸಿದ್ದು ಮಾತ್ರ ಕೇನ್ ವಿಲಿಯಮ್ಸನ್. ಕೇವಲ 26 ಎಸೆತಗಳಲ್ಲಿ 41 ರನ್ ಬಾರಿಸಿದ ಕೇನ್ ಓವರ್ ಮುಕ್ತಾಯಕ್ಕೆ 2 ಎಸೆತಗಳು ಬಾಕಿಯಿದ್ದಾಗ ಔಟಾದರು.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಕೊನೆಯಲ್ಲಿ, ಕೇನ್ ಮತ್ತು ಅಬ್ದುಲ್ ಸಮದ್ (7 ಎಸೆತಗಳಲ್ಲಿ 12 ರನ್) ಸಾಹಸದಿಂದ ಸನ್ ರೈಸರ್ಸ್ ಹೈದ್ರಾಬಾದ್ 20 ಓವರ್ ಗಳಲ್ಲಿ 162 ರನ್ ಗಳಿಸಿತು.

ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 163 ರನ್ ಗಳ ಗುರಿಯನ್ನು ನೀಡಿತು.


Advertisement

Udayavani is now on Telegram. Click here to join our channel and stay updated with the latest news.

Next