ಬೆಂಗಳೂರು: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಕೋವಿಡ್ 19 ಸೋಂಕು ತಾಗಿರವುದು ದೃಢಾಗಿದೆ. ಈ ಬಗ್ಗೆ ದೀಪಿಕಾ ಯಾವುದೇ ಮಾಹಿತಿ ನೀಡಿಲ್ಲವಾದರೂ, ವರದಿಗಳ ಪ್ರಕಾರ ಮಂಗಳವಾರ ದೀಪಿಕಾಗೆ ಕೋವಿಡ್ ಪಾಸಿಟಿವ್ ಆಗಿದೆ.
ನಟಿ ದೀಪಿಕಾ ಈಗ ತನ್ನ ಕುಟುಂಬದ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ದೀಪಿಕಾ ತಂದೆ, ಮಾಜಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಜ್ವರದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೀಪಿಕಾ ತಾಯಿ ಮತ್ತು ಸಹೋದರಿಗೆ ಕೂಡಾ ಕೋವಿಡ್ ಪಾಸಿಟಿವ್ ದೃಢವಾಗಿದೆ.
ಇದನ್ನೂ ಓದಿ:ಡ್ಯಾಡಿ, ಮನೆಗೆ ಬನ್ನಿ: ವಾರ್ನರ್ ಪುತ್ರಿಯರ ಸಂದೇಶ
ಮುಂಬೈನಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಕಾರಣ ದೀಪಿಕಾ ಬೆಂಗಳೂರಿಗೆ ಬಂದು ತನ್ನ ಕುಟುಂಬಿಕರ ಜೊತೆ ನೆಲೆಸಿದ್ದರು.
ದೀಪಿಕಾ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಪತಿ ರಣವೀರ್ ಸಿಂಗ್ ಅಭಿನಯದ 83, ಶಾರುಖ್ ಖಾನ್ ರ ‘ಪಠಾಣ್’, ಹೃತಿಕ್ ರೋಶನ್ ಮತ್ತು ಅಮಿತಾಭ್ ಬಚ್ಚನ್ ಜೊತೆಗೆ ಇನ್ನೂ ಹೆಸರಿಡದ ಚಿತ್ರಗಳಲ್ಲಿ ದೀಪಿಕಾ ನಟಿಸುತ್ತಿದ್ದಾರೆ.