ಶನಿವಾರ ಮಣಿಪಾಲದ ಉದಯವಾಣಿ ಪ್ರಧಾನ ಕಚೇರಿಯಲ್ಲಿ ಉದಯವಾಣಿಯು ಮಂಗಳೂರು ಲೇಡಿಹಿಲ್‌ನ ಎಸ್.ಎಲ್. ಶೇಟ್ ಡೈಮಂಡ್ ಹೌಸ್ ಸಹಯೋಗದಲ್ಲಿ ಆಯೋಜಿಸಿದ ದೀಪಾವಳಿ ವಿಶೇಷಾಂಕ ಧಮಾಕಾದ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿ ಅವರು ಮಾತನಾಡಿದರು.
Advertisement
ನಿರಂತರ ಓದುಗನಾನು ಓದಲು ಆರಂಭಿಸಿದ ದಿನದಿಂದ ಇಂದಿನವರೆಗೂ “ಉದಯವಾಣಿ’ಯನ್ನು ಓದುತ್ತಿದ್ದೇನೆ. ಈಗ ದೀಪಾವಳಿ ವಿಶೇ ಷಾಂಕ ಧಮಾಕಾದ ಅದೃಷ್ಟಶಾಲಿ ಓದುಗರನ್ನು ಆಯ್ಕೆ ಮಾಡುವ ಅವಕಾಶ ನನಗೆ ಒದಗಿಬಂದಿರುವುದು ಭಾಗ್ಯ ಎಂದರು.
ಉದಯವಾಣಿಯ ಸುದೀರ್ಘ ಇತಿಹಾಸವನ್ನು ಅವಲೋಕಿಸಿ ದಾಗ ಅದರ ಅಕ್ಷರ ಜೋಡಣೆ, ಮುದ್ರಣ, ವಿನ್ಯಾಸ, ಸುದ್ದಿ ಈ ಎಲ್ಲ ಆಯಾಮಗಳಲ್ಲಿಯೂ ಮುಂದಿರುವುದರಿಂದಲೇ ಸ್ಪರ್ಧಾತ್ಮಕ ಯುಗದಲ್ಲಿಯೂ ಅದರ ನಾಯಕತ್ವ ಮುಂದುವರಿಯುತ್ತಿದೆ. ನಮ್ಮ ಬ್ಯಾಂಕಿಗೂ ಉದಯವಾಣಿಗೂ ಸ್ಥಾಪಕರ ಆಯಾಮದಲ್ಲಿ ಅವಿನಾಭಾವ ಸಂಬಂಧವಿದೆ. ಉದಯವಾಣಿಗೆ ಇನ್ನಷ್ಟು ಉತ್ತಮ ಭವಿಷ್ಯ ದೊರಕಲಿ ಎಂದು ರಾಮ ನಾಯ್ಕ ಹಾರೈಸಿದರು. ಓದುಗರ ವ್ಯಾಪಕತ್ವಕ್ಕೆ ಹರ್ಷ
20 ವರ್ಷಗಳಿಂದ ಉದಯವಾಣಿ ದೀಪಾವಳಿ ವಿಶೇಷಾಂಕ ಧಮಾಕಾವನ್ನು ನಡೆಸಿಕೊಂಡು ಬರುತ್ತಿದೆ. ಓದುಗರು ಮತ್ತು ಸಂಸ್ಥೆಯ ನಡುವಿನ ಸಂಬಂಧ ವೃದ್ಧಿಗಾಗಿ ಈ ಕಾರ್ಯಕ್ರಮವನ್ನು ಆರಂಭಿಸಲಾಗಿತ್ತು. ಈಗ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿದಾಗ ನಾಡಿನ ಮೂಲೆ ಮೂಲೆಗಳಿಂದ ಸ್ಪಂದನ ದೊರಕಿರುವುದು ಕಂಡು ಬಂದಿರುವುದು ಓದುಗರು ನಾಡಿನೆಲ್ಲೆಡೆ ಇರುವುದನ್ನು ಖಚಿತ ಪಡಿಸುತ್ತಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿ. ಆಡಳಿತ ನಿರ್ದೇಶಕ ಮತ್ತು ಸಿಇಒ ವಿನೋದ್ ಕುಮಾರ್ ಹರ್ಷ ವ್ಯಕ್ತಪಡಿಸಿದರು.
Related Articles
Advertisement
ನಿರೀಕ್ಷೆಗೂ ಮೀರಿದ ಓದುಗರ ಸ್ಪಂದನೆದೀಪಾವಳಿ ವಿಶೇಷಾಂಕದಲ್ಲಿ ಐದು ಪ್ರಶ್ನೆಗಳನ್ನು ಕೊಟ್ಟು ಅದಕ್ಕೆ ಉತ್ತರವನ್ನು ಕಳುಹಿಸುವ ಸ್ಪರ್ಧೆ ದೀಪಾವಳಿ ಧಮಾಕಾ ಆಗಿದೆ. ಓದುಗರನ್ನು ಚಿಂತನೆಯಲ್ಲಿ ಸಕ್ರಿಯಗೊಳಿಸುವ ಪ್ರಯತ್ನದ ಅಂಗವಾಗಿ 20 ವರ್ಷಗಳಿಂದ ಧಮಾಕಾವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ 3,600 ಓದುಗರು ಪ್ರತಿಕ್ರಿಯೆ ನೀಡಿದ್ದು ಇದರಲ್ಲಿ 2,300 ಓದುಗರ ಉತ್ತರ ಸರಿಯಾಗಿತ್ತು. ಅವರಲ್ಲಿ ಒಟ್ಟು 27 ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಯಿತು. ಬಂಪರ್ ಬಹುಮಾನ ಹುಬ್ಬಳ್ಳಿಗೆ
ಬಂಪರ್ ಬಹುಮಾನ (ಚಿನ್ನದ ನೆಕ್ಲೆಸ್): ನೇತ್ರಾವತಿ ಅಣ್ಣಪ್ಪ, ಚೈತನ್ಯನಗರ, ಹುಬ್ಬಳ್ಳಿ ಪ್ರಥಮ (ಚಿನ್ನದ ಬ್ರಾಸ್ಲೆಟ್): ಗಾಯತ್ರಿ ನಾಯಕ್, ದೇರೇಬೈಲ್, ಮಂಗಳೂರು ದ್ವಿತೀಯ (ಚಿನ್ನದ ಉಂಗುರ): 1. ವಿದ್ಯಾಲಕ್ಷಿ$¾à ಎಸ್. ರಾವ್, ಪಲಿಮಾರು, ಉಡುಪಿ, 2. ಆರ್.ವಿ. ಕುಲಕರ್ಣಿ, ಅಂಜನೇಯ ನಗರ, ಬೆಳಗಾವಿ ತೃತೀಯ (ಚಿನ್ನದ ಪೆಂಡೆಂಟ್): 1. ಶಾಂತಾ, ಶ್ರೀನಗರ, ಬೆಂಗಳೂರು, 2. ಎನ್.ಕೆ. ಆನಂದ ಬಾಬು, ಕೆ.ಆರ್.ರೋಡ್, ಹೊಸಕೋಟೆ, 3. ಚಿತ್ತಾರ ಯು., ಬೈಲೂರು, ಉಡುಪಿ ಸಮಾಧಾನಕರ (ಜೋಡಿ ಬೆಳ್ಳಿಯ ನಾಣ್ಯ)
– ಪುಷ್ಪಾ ಮಂಜುನಾಥ್ ಆಚಾರ್ಯ, ಮಾರ್ಪಾಡಿ, ಮೂಡುಬಿದಿರೆ
– ಎ. ವಿಜಯಲಕ್ಷಿ$¾à ರಾವ್, 6ನೇ ಕ್ರಾಸ್, ಜೈಲ್‌ರೋಡ್, ಮಂಗಳೂರು
– ವಿ. ಯೋಗೀಶ್ ಪೇರಂದಡ್ಕ, ಕಾಶಿಪಟ್ಣ, ಬೆಳ್ತಂಗಡಿ
– ಎಸ್.ಎಲ್. ಸುಪ್ರಿಯಾ, ಚೆನ್ನಗಿರಿ ಟೌನ್, ದಾವಣಗೆರೆ
– ಸರಸ್ವತಿ ಕಮಲಾಕರ, ವಾಲಗಳ್ಳಿ, ಕುಮಟಾ
– ಪ್ರಶಾಂತ್ ಜಿ. ಪ್ರಭು, ಪೊಳಲಿ, ಬಂಟ್ವಾಳ
– ಕೆ. ಧನ್ಯಾಶ್ರೀ, ರಾಮ್‌ನಗರ, ಕಿನ್ನಿಗೋಳಿ
– ವಾಸುದೇವ್ ರಾಮ, ಕಾವೂರು, ಮಂಗಳೂರು
– ಸುರೇಶ್ ಪೂಜಾರಿ, ನೇರಳಕಟ್ಟೆ, ಕುಂದಾಪುರ
– ಯಶ್ವಿà ಆರ್. ಆಚಾರ್ಯ, ಯರ್ಲಪಾಡಿ, ಕಾರ್ಕಳ
– ಕರುಣಾಕರ ಜಿ., ಕಿನ್ನಿಕಂಬÛ, ಮಂಗಳೂರು
– ವಿದ್ಯಾಲಕ್ಷಿ$¾à ಎಸ್. ಭಟ್, ದುರ್ಗ, ಕಾರ್ಕಳ
– ಡಾ| ಶೈಲೇಶ್, ಜಯನಗರ, ಬೆಂಗಳೂರು
– ಲತಾ ಆರ್., ಸಂತೆಕಟ್ಟೆ, ಚೇರ್ಕಾಡಿ, ಬ್ರಹ್ಮಾವರ
– ಮಹಾಲಿಂಗೇಶ್ವರ ದೇಲಂಪಾಡಿ, ಕಾಸರಗೋಡು
– ಆರ್. ಅನಸೂಯ ಕುಮಾರಿ, ಚಿಕ್ಕಲಸಂದ್ರ, ಬೆಂಗಳೂರು
– ವೈ.ವಿ. ವಿಶ್ವಜ್ಞ ಮೂರ್ತಿ, ಬರ್ಕೆ, ಮಂಗಳೂರು
– ವಿಶ್ವನಾಥ್ ನಾಯಕ್ ಕೆ., ಪರ್ಕಳ, ಉಡುಪಿ
– ಶಿವಾನಂದ, ಹುಕ್ರಟ್ಟೆ, ನಲ್ಲೂರು, ಕಾರ್ಕಳ
– ರಾಜೇಶ್ವರಿ ವಾಸುದೇವ್, ಪಡುಅಲೆವೂರು, ಉಡುಪಿ