Advertisement

ಅಪಾಯಕಾರಿ ತ್ಯಾಜ್ಯ ವಿಲೇವಾರಿ ಮಾಹಿತಿ ಕಡ್ಡಾಯ

12:22 PM Dec 24, 2020 | Suhan S |

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ಅಪಾಯಕಾರಿ ತ್ಯಾಜ್ಯ ಸಾಗಿಸುವ ಎಲ್ಲ ವಾಹನಗಳಿಗೆ ಜಿಪಿಎಸ್‌ ಕಡ್ಡಾಯವಾಗಿ ಅಳವಡಿಸಬೇಕು ಹಾಗೂ ಇದರ ನಿರ್ವಹಣೆ ಸಂಪರ್ಕ ನೇರವಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಂಟ್ರೋಲ್‌ ರೂಮ್‌ಗೆ ಸಂಪರ್ಕ ಕಲ್ಪಿಸಬೇಕು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಎಸ್‌. ಶ್ರೀನಿವಾಸಲು ಆದೇಶ ನೀಡಿದ್ದಾರೆ.

Advertisement

ಇದರಿಂದ ಮುಂದಿನ ದಿನಗಳಲ್ಲಿ ಕೈಗಾರಿಕೆಗಳತ್ಯಾಜ್ಯ ಯಾವ ನಿರ್ದಿಷ್ಟ ಭಾಗದಲ್ಲಿ ವಿಲೇವಾರಿಆಗಲಿದೆ ಎನ್ನುವ ಬಗ್ಗೆ ಸ್ಪಷ್ಟನೆ ಸಿಗುವಸಾಧ್ಯತೆ ಇದೆ. ಅಲ್ಲದೆ, ಎಲ್ಲೆಂದರಲ್ಲಿ ಅಪಾಯಕಾರಿ ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಕಡಿವಾಣ ಬೀಳುವನಿರೀಕ್ಷೆ ಮೂಡಿದೆ. ಕೈಗಾರಿಕೆಗಳಿಂದಉತ್ಪತ್ತಿಯಾಗುವ ಅಪಾಯಕರಿ ತ್ಯಾಜ್ಯ ಸಂಸ್ಕರಣೆ ಮಾಡುವ (ಇನ್ಸಿನರೇಟರ್‌)ಘಟಕಗಳ ನಿರ್ವಹಣೆ ಹಾಗೂ ಇದಕ್ಕೆ ತ್ಯಾಜ್ಯಸಾಗಾಣಿಕೆ ಮಾಡುವ ವಾಹನಗಳಲ್ಲಿ ಕೆಲವು ನಿರ್ದಿಷ್ಟ ನಿಯಮಗಳನ್ನು ಸೂಚಿಸಲಾಗಿದ್ದು ಉಲ್ಲಂ ಸಿದರೆ, ಪರಿಸರ (ಸಂರಕ್ಷಣೆ)-1986ರ ಅಡಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನಗಳು :

  • ಕೈಗಾರಿಕಾ ತ್ಯಾಜ್ಯ ಹಾಗೂ ಅಪಾಯಕಾರಿ ತ್ಯಾಜ್ಯ ಪ್ರತ್ಯೇಕ ವಾಹನ ಮೀಸಲಿರಿಸಬೇಕು ಹಾಗೂ ವಾಹನ ನೋಂದಣೆ ಕಡ್ಡಾಯವಾಗಿ ಮಾಡಬೇಕು.
  • ಸಮೀಪದಲ್ಲಿರುವ ಇನ್ಸಿನರೇಟರ್‌ನಲ್ಲೇ ಅಪಾಯಕಾರಿ ತ್ಯಾಜ್ಯ ವಿಲೇವಾರಿ ಮಾಡಬೇಕು. ಒಂದೊಮ್ಮೆ ಕಾರ್ಖಾನೆಯ ಸಮೀಪದಲ್ಲಿರುವ ಘಟಕದಲ್ಲಿ ವಿಲೇವಾರಿ ಮಾಡಲು ಸಾಧ್ಯವಿಲ್ಲದೆ ಇದ್ದರೆ, ಇದಕ್ಕೆ ತಾಂತ್ರಿಕ ಕಾರಣ ನೀಡಬೇಕು.
  • ಕೈಗಾರಿಕೆಗಳು ಹಾಗೂ ಸಂಸ್ಕರಣಾ ಘಟಕಗಳ ನಡುವೆ ಕಡ್ಡಾಯವಾಗಿ ಒಪ್ಪಂದ ಮಾಡಿಕೊಳ್ಳಬೇಕು. ಇದರ ಪ್ರತಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಬೇಕು. ಕಾರ್ಖಾನೆ ಅಥವಾ ಘಟಕದ ಮಾಲೀಕರು ಮಾರ್ಗಸೂಚನೆ ಪಾಲಿಸದಿದ್ದರೆ ಕಠಿಣ ಕ್ರಮ
  • ವಾಹನಗಳಿಗೆ ಅಳವಡಿಸಲಾಗಿರುವ ಜಿಪಿಎಸ್‌ ಮಾಹಿತಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಂಟ್ರೋಲ್‌ ರೂಮ್‌ಗೆ ಕನೆಕ್ಟ್ ಮಾಡಬೇಕು. ಇದರ ಮಾಹಿತಿ ಸದಾ ಲಭ್ಯವಿರಬೇಕು.ಉಲ್ಲಂಘನೆಯಾದರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ.
  • ಪ್ರತ್ಯೇಕ ಸಂಸ್ಕರಣಾ ಘಟಕಗಳಿಗೆ ನೀಡಲಾಗಿದ್ದ ಬಯೋ- ಮೆಡಿಕಲ್‌ ತ್ಯಾಜ್ಯ ಸಂಸ್ಕರಣೆ ಅವಕಾಶ ರದ್ದು. ಇನ್ಸಿನರೇಟರ್‌ ಘಟಕಗಳಲ್ಲಿ ಬಯೋ- ಮೆಡಿಕಲ್‌ ತ್ಯಾಜ್ಯ ಸಂಸ್ಕರಣೆ ಮಾಡುವಂತಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next