Advertisement

ಅರೆನಗ್ನ ಫೋಟೋ ತೆಗೆದು ಸಿಕ್ಕಿಬಿದ್ದ ಡಿ ಗ್ರೂಪ್‌ ನೌಕರ

03:04 PM Dec 02, 2017 | Team Udayavani |

ಕೆ.ಆರ್‌.ಪುರ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬರುತ್ತಿದ್ದ ಮಹಿಳೆಯರ ಅರೆನಗ್ನ ಫೋಟೋ ಕ್ಲಿಕ್ಕಿಸುತ್ತಿದ್ದ ಡಿ-ಗ್ರೂಪ್‌ ನೌಕರನ ಪೇಶಾಚಿಕ ಕೃತ್ಯ ಬಯಲಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆದರೆ, ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಆರೋಪಿಯನ್ನು ಅಮಾನತ್ತುಗೊಳಿಸಲಾಗಿದೆ ಎಂದು ತಾಲೂಕು ಅರೋಗ್ಯಧಿಕಾರಿ ಚಂದ್ರಶೇಖರ್‌ ತಿಳಿಸಿದ್ದಾರೆ.

Advertisement

ಗುರುವಾರ ಕೆಆರ್‌ ಪುರ ಸಾರ್ವಜನಿಕ ಸರ್ಕಾರಿ ಅಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಎದೆನೋವಿಗೆ ಇಸಿಜಿ ಮಾಡಿಸಲು ತೆರಳಿದ್ದಾರೆ. ಇಸಿಜಿ ಪರೀಕ್ಷೆ ವೇಳೆ ಸ್ಕ್ರೀನ್‌ ಹಿಂಬದಿಯಲ್ಲಿ ನಿಂತು ನಿಂತಿದ್ದ ಆಸ್ಪತ್ರೆಯ ನೌಕರ ರಘು ಆಕೆಯ ಅರೆನಗ್ನ ಚಿತ್ರಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿಯುವಾಗ ಪ್ಲಾಶ್‌ ಆಗಿದೆ ಇದರಿಂದ ಎಚ್ಚರಗೊಂಡ ಮಹಿಳೆ ತಕ್ಷಣ ಅತನ ಕೈಯಲ್ಲಿದ ಮೊಬೈಲ್‌ ಕಸಿದುಕೊಂಡು ಪರಿಶೀಲಿಸಿದ್ದಾರೆ. ಮಹಿಳೆಯರ ಅರೆನಗ್ನ ಚಿತ್ರಗಳಿರುವುದು ಬೆಳಕಿಗೆ ಬಂದಿದೆ.

ಆ ವೇಳೆಗಾಗಲೇ ಕೆಲವು ಚಿತ್ರಗಳನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ. ಈ ವೇಳೆ ಮೊಬೈಲ್‌ ತನ್ನದಲ್ಲ ಎಂದು ಪರಾರಿಯಾಗಿದ್ದಾನೆ. ರಘು ಮೊಬೈಲ್‌ನಲ್ಲಿ ಹಲವು ಮಹಿಳೆಯರ ಅರೆನಗ್ನ ಚಿತ್ರಗಳಿರುವುದು ಬಯಲಾಗಿದೆ. ಈ ಕುರಿತು  ಮೇಲಾಧಿಕಾರಿಗಳಿಗೆ ಅತನ ವಿರುದ್ಧ ದೂರು ನೀಡಿದ್ದಾರೆ. ಈ ಕುರಿತು ರಘು ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮಹಿಳೆಗೆ ಭರವಸೆ ನೀಡಿದ್ದಾರೆ.

ಅಷ್ಟೇ ಅಲ್ಲದೇ, ಆಸ್ಪತ್ರೆಯ ಕ್ಯಾಶ್‌ ಕೌಂಟರ್‌ ಹಾಗೂ ಔಷಧಿ ಕೌಂಟರ್‌ ಎದುರು ನಿಂತಿದ್ದ ಮಹಿಳೆಯರ ಫೋಟೋಗಳನ್ನು ತೆಗೆದಿರುವ ಆರೋಪಿ ಅವುಗಳನ್ನು ಸಾಮಾಜಿಕ ಜಾಲತಾಣಗಳು ಹಾಗೂ ಸ್ನೇಹಿತರಿಗೂ ಕಳುಹಿಸುತ್ತಿದ್ದ. ಜತೆಗೆ ಆತ ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಜತೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ಫೋಟೋವನ್ನು ಹರಿಬಿಟ್ಟಿದ್ದಾನೆ. ಈತನ ವಿರುದ್ಧ ಆಸ್ಪತ್ರೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ದೂರು ನೀಡಿದರೆ ಕಾನೂನು ಕ್ರಮಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next