Advertisement

ಬ್ಯಾಡ್ಮಿಂಟನ್‌ ಸ್ಪರ್ಧೆ: ಭಾರತ ನಾಕೌಟ್‌ ಪ್ರವೇಶ

11:53 PM Jul 30, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಬ್ಯಾಡ್ಮಿಂಟನ್‌ ಸ್ಪರ್ಧೆಯ ಮಿಶ್ರ ತಂಡ ವಿಭಾಗದಲ್ಲಿ ತನ್ನ ಪ್ರಭುತ್ವವನ್ನು ಮುಂದುವರಿಸಿದ ಭಾರತ ನಾಕೌಟ್‌ ಹಂತ ಪ್ರವೇಶಿಸಿತು. “ಎ’ ವಿಭಾಗದ ದ್ವಿತೀಯ ಹಣಾಹಣಿ ಯಲ್ಲಿ ಶ್ರೀಲಂಕಾವನ್ನು 5-0 ಅಂತರ ದಿಂದ ಮಣಿಸಿ ಮುನ್ನಡೆ ಸಾಧಿಸಿತು.

Advertisement

ಪಾಕಿಸ್ಥಾನವನ್ನು 5-0 ಅಂತರದಿಂದ ಮಣಿಸಿದ ಹುಮ್ಮಸ್ಸಿನಲ್ಲಿದ್ದ ಭಾರತ, ನೆರೆಯ ಲಂಕಾ ವಿರುದ್ಧವೂ ಇದೇ ಪರಾಕ್ರಮವನ್ನು ಮುಂದುವರಿಸಿತು. ಮೊದಲ ಮಿಶ್ರ ಡಬಲ್ಸ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಜೋಡಿ ಸಚಿನ್‌ ಡಯಾಸ್‌-ತಿಲಿನಿ ಹೆಂಧಹೇವಾ ವಿರುದ್ಧ 21-14, 21-9 ಅಂತರದ ಗೆಲುವು ಸಾಧಿಸಿತು.

ಭುಜದ ನೋವಿನಿಂದ ಚೇತರಿಸಿ ಕೊಂಡ ಬಳಿಕ ಮೊದಲ ಪಂದ್ಯವಾಡಿದ ಲಕ್ಷ್ಯ ಸೇನ್‌ 21-18, 21-5ರಿಂದ ನಿಲುಕ ಕರುಣಾರತ್ನೆ ಅವರನ್ನು ಮಣಿಸಿದರು. 3ನೇ ಗೆಲುವು ತಂದಿ ತ್ತವರು ಆಕರ್ಷಿ ಕಶ್ಯಪ್‌. ಅವರು 21-3, 21-9ರಿಂದ ಸುಹಾಸಿನಿ ವಿದನಗೆ ಅವರ ನಗೆಗೆ ಮುಸುಕೆಳೆದರು.

ಪುರುಷರ ಡಬಲ್ಸ್‌ನಲ್ಲಿ ಚಿರಾಗ್‌ ಶೆಟ್ಟಿ-ಬಿ. ಸುಮೀತ್‌ ರೆಡ್ಡಿ ಸೇರಿಕೊಂಡು ದುಮಿಂದು ಅಭಯವಿಕ್ರಮ-ಸಚಿನ್‌ ಡಯಾಸ್‌ ಜೋಡಿಗೆ 21-10, 21-13ರಿಂದ; ವನಿತಾ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್‌-ತಿೃಷಾ ಜಾಲಿ ಸೇರಿಕೊಂಡು ತಿಲಿನಿ ಹೆಂಧಹೇವಾ-ಸುಹಾಸಿನಿ ವಿದನಗೆ ಜೋಡಿಗೆ 21-18, 21-6 ಅಂತರದ ಸೋಲುಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next