Advertisement

ಕ್ವಾರ್ಟರ್‌ಫೈನಲ್‌ಗೆ ಬಾಕ್ಸರ್‌ ಸರಿತಾ ದೇವಿ

07:05 AM Apr 08, 2018 | Team Udayavani |

ಬಾಕ್ಸರ್‌ ಸರಿತಾ ದೇವಿ ಕಾಮನ್‌ವೆಲ್ತ್‌ ಗೇಮ್ಸ್‌ ಮಹಿಳಾ ಬಾಕ್ಸಿಂಗ್‌ ಕೂಟದ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ. 60
ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಅವರು ಬಾರ್ಬಡಾಸ್‌ ಆಟಗಾರ್ತಿ ಕಿಂಬರ್ಲಿ ವಿರುದ್ಧ 5-0 ಅಂತರದ ಸುಲಭ
ಜಯ ಸಾಧಿಸಿದರು. 

Advertisement

36 ವರ್ಷದ ಸರಿತಾ ತನಗಿಂತ ಕಿರಿಯ 26 ವರ್ಷದ ಅನನುಭವಿ ಕಿಂಬರ್ಲಿ ವಿರುದ್ಧ ಅನಾಯಾಸವಾಗಿ ಗೆದ್ದರು. ಪಂದ್ಯ ಪೂರ್ತಿ ಹಿಡಿತಕ್ಕೆ ತೆಗೆದುಕೊಂಡಿದ್ದ ಸರಿತಾ ಎಲ್ಲೂ ಎದುರಾಳಿಗೆ ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಸರಿತಾ 2014ರ ಕಾಮನ್‌ವೆಲ್ತ್‌ ಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು

Advertisement

Udayavani is now on Telegram. Click here to join our channel and stay updated with the latest news.

Next