Advertisement

ಏಡ್ಸ್‌ ರೀತಿ ಕೋವಿಡ್‌ ವಿರುದ್ಧ ಹೋರಾಟ ಅಗತ್ಯ

04:06 PM Jul 12, 2020 | sudhir |

ಜಿನೇವಾ: ವಿಶ್ವದಲ್ಲಿ ಏಡ್ಸ್‌ ನಿಯಂತ್ರಣಕ್ಕೆ ನಿರಂತರ ಹೋರಾಟ, ಜಾಗೃತಿ ಕಾರ್ಯಕ್ರಮಗಳು, ನಿಯಂತ್ರಣ ಕಾರ್ಯಗಳು ನಡೆಯುತ್ತಿರುವಂತೆಯೇ, ಕೋವಿಡ್‌ ಸೋಂಕಿನ ವಿರುದ್ಧವೂ ಇಂತಹ ಕ್ರಮಗಳು ಅಗತ್ಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.

Advertisement

ದೊಡ್ಡ ಮಟ್ಟದಲ್ಲಿ ಸೋಂಕು ನಿಯಂತ್ರಣ ಕ್ರಮಗಳು ಮತ್ತು ರೋಗಿಗಳಿಗೆ ಚಿಕಿತ್ಸೆ ನೀಡುವ ಬಗ್ಗೆ ಸಿದ್ಧರಾಗಬೇಕಿದೆ ಎಂದು ಅದು ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯ ತುರ್ತುಪರಿಸ್ಥಿತಿ ಕಾರ್ಯಕ್ರಮಗಳ ಮುಖ್ಯಸ್ಥರಾದ ಡಾ| ಮೈಕೆಲ್‌ ರೇಯಾನ್‌ ಅವರು ಅಂತಾರಾಷ್ಟ್ರೀಯ ಏಡ್ಸ್‌ ಸೊಸೈಟಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಏಡ್ಸ್‌/ಎಚ್‌ಐವಿ ಕಾರ್ಯಕರ್ತರ ಕಾರ್ಯಕ್ರಮಗಳ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ಕೋವಿಡ್‌ ವಿರುದ್ಧದ ಕಾರ್ಯಕ್ರಮಗಳಿಗೆ ಮುಂದಾಗಬೇಕು.

ವಿಶ್ವದಲ್ಲಿ ಇನ್ನೂ ತೀವ್ರ ಸ್ವರೂಪ ಪಡೆದುಕೊಂಡಿಲ್ಲ. ಆದರೆ ಇಷ್ಟರಲ್ಲೇ ನಮ್ಮ ವೈದ್ಯಕೀಯ ವ್ಯವಸ್ಥೆಯ ಹುಳುಕುಗಳು ಬಯಲಾಗಿವೆ. ಕೋಟ್ಯಂತರ ಮಂದಿಗೆ ಸರಿಯಾದ, ಕೈಗೆಟಕುವ ದರದ ವೈದ್ಯಕೀಯ ವ್ಯವಸ್ಥೆಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.

1980ರಲ್ಲಿ ಹರಡಿದ ಏಡ್ಸ್‌ ಸೋಂಕಿನಿಂದ ಅಂದು ವಿಶ್ವಕ್ಕೇ ಗಾಬರಿಯಾಗಿತ್ತು. ಆದರೆ ಇಂದು ಅದಕ್ಕೆ ಪ್ರತಿರೋಧ ಒಡ್ಡುವ ವೈರಸ್‌ ನಿರೋಧಕಗಳಿಂದ ನಿಭಾಯಿಸಬಹುದು ಎಂಬುದು ಶ್ರುತಪಟ್ಟಿದೆ. ಎರಡೂ ವೈರಸ್‌ಗಳ ವಿಧ, ಹರಡುವ ಕ್ರಮ ಇತ್ಯಾದಿ ಸಾಕಷ್ಟು ವ್ಯತ್ಯಾಸಗಳಿದ್ದರೂ ಅವುಗಳ ವಿರುದ್ಧ ಜಾಗೃತಿ ಸ್ವರೂಪ, ಕಾರ್ಯಕ್ರಮಗಳು ಒಂದೇ ಆಗಿದ್ದು ಅದೇ ರೀತಿ ಹೋರಾಟ ಬೇಕು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next