ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಯಲ್ಲಿಕೊರೊನಾ ಪ್ರಕರಣಗಳು ತೀವ್ರಗೊಳ್ಳುತ್ತಿರುವುದರಿಂದ ಜಿಲ್ಲಾಡಳಿತ ಅನೇಕ ಕ್ರಮಗಳನ್ನುಕೈಗೊಂಡರೂ ಸಹ ಒಂದು ಕಡೆ ಬೆಡ್‌ಗಳಿಗೆ ರೋಗಿಗಳ ಅಲೆದಾಟ ತಪ್ಪಿಲ್ಲ.
ಗ್ರಾಮಾಂತರ ಜನರಿಗೆಅಗತ್ಯಕ್ಕೂ ಮೀರಿ ಬೆಡ್‌ಗಳನ್ನು ಒದಗಿಸಬೇಕು.ಪ್ರತಿನಿತ್ಯ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಸೋಂಕುಪ್ರಕರಣ ದಾಖಲಾಗಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆ ಗಳಿಗೆಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊಸ ಪ್ರಕರಣಗಳಿಗೆ ಕೊರತೆ: ಜಿಲ್ಲೆಗೆಂದು 174ಹಾಸಿಗೆಗಳಲ್ಲಿ ಬಿಬಿಎಂಪಿ ಪಾಲು ಕೇಳುತ್ತಿದ್ದು,ಬೆಂಗಳೂರಿನ ಸೋಂಕಿತರಿಗೆ ದೇವನಹಳ್ಳಿಯಆಕಾಶ್ ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ಮೀಸಲಿಡಲಾಗಿದೆ. ಹೀಗಾಗಿ ಗ್ರಾಮಾಂತರ ಜಿಲ್ಲೆಯ ಸೋಂಕಿತರಿಗೆ ಹಾಸಿಗೆಗಳು ಸಿಗುತ್ತಿಲ್ಲ. ಜಿಲ್ಲೆಯ ಖಾಸಗಿಆಸ್ಪತ್ರೆಗಳಲ್ಲಿ ಸೋಂಕಿತರು ದಾಖಲಾಗುತ್ತಿದ್ದು,ಜಿಲ್ಲೆಯ ಆಸ್ಪತ್ರೆಗಳಲ್ಲಿ ಈಗಾಗಲೇ ಹಾಸಿಗೆಗಳುತುಂಬಿದ್ದು, ಹೊಸ ಪ್ರಕರಣಗಳಿಗೆ ಹಾಸಿಕೆಗಳ ಕೊರತೆಇದೆ ಎನ್ನಲಾಗುತ್ತಿದೆ.
ಜಿಲ್ಲೆಯ ಸೋಂಕಿತರನ್ನುಬೆಂಗಳೂರಿನ ಆಸ್ಪತ್ರೆ ಗಳಿಗೆ ಕಳುಹಿಸಿಕೊಟ್ಟರೂ ಸಹಅಲ್ಲಿಯೂ ಹಾಸಿಗೆ ಗಳು ಸಿಗದೆ ಪರದಾಡುವಪರಿಸ್ಥಿತಿ ನಿರ್ಮಾಣ ವಾಗುತ್ತಿದೆ. ನಾಲ್ಕು ತಾಲೂಕುಗಳಲ್ಲಿ ನಿತ್ಯ ಐಸಿಯು, ಹಾಸಿಗೆಗಳಿಗೆ ಅಲೆದಾಡುತ್ತಿರುವುದು ಸಾಮಾನ್ಯವಾ ಗಿದೆ. ಉಸಿರಾಟ ತೊಂದರೆಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಗೆಸೋಂಕಿತರ ಚಿಕಿತ್ಸೆ ಸಂಕಷ್ಟ ಎದುರಾಗಿದೆ.
ಸೌಲಭ್ಯ ಕಲ್ಪಿಸಲಿ: ಕಳೆದ ವರ್ಷ ಸೋಂಕಿತರನ್ನುಆಸ್ಪತ್ರೆಗೆ ರವಾನಿಸಲು ಜಿಲ್ಲಾಡಳಿತ ಪ್ರತ್ಯೇಕವಾಗಿ 10ಆಂಬ್ಯುಲೆನ್ಸ್ ಸಿದ್ಧತೆ ಮಾಡಿಕೊಂಡಿತ್ತು. ಆದರೆ,ಜಿಲ್ಲಾಡಳಿತ ಪ್ರತ್ಯೇಕ ಆಂಬ್ಯುಲೆನ್ಸ್ ಸೇವೆಕಲ್ಪಿಸುವುದರಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆಎಂಬ ದೂರು ಕೇಳಿಬರುತ್ತಿದೆ.
ಇನ್ನಾದರೂಜಿಲ್ಲಾಡಳಿತ ಎಚ್ಚೆತ್ತುಕೊಂಡು ಹೆಚ್ಚಿನ ಸೌಲಭ್ಯಗಳನ್ನುಒದಗಿಸಬೇಕು ಎಂದು ಜಿಲ್ಲಾ ಜನರಹಕ್ಕೋತ್ತಾಯವಾಗಿದೆ. ದೇವನಹಳ್ಳಿ ತಾಲೂಕಲ್ಲಿದಿನೇ ದಿನೆ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತರಾಗಿ ಕೋವಿಡ್-19ಪರೀಕ್ಷೆ ಮಾಡಿಸಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ.ಬೆಳಗ್ಗೆಯಿಂದಲೇ ನೂರಾರು ಜನರು ಟೋಕನ್‌ಪಡೆದುಕೊಂಡು ಕಾಯುತ್ತಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಸಂಖ್ಯೆ ಹೆಚ್ಚಾಗುತ್ತಿರುವುದರಿಂದನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಅಗತ್ಯಕ್ರಮ ಕೈಗೊಳ್ಳಲಾಗಿದೆ.
ಕೆ.ಶ್ರೀನಿವಾಸ್, ಜಿಲ್ಲಾ ಧಿಕಾರಿ