ಮೈಸೂರು: ಎಲ್ಲೆಡೆ ವೀಕೆಂಡ್ ಕರ್ಫ್ಯೂ, ನೈಟ್‌ಕರ್ಫ್ಯೂ ಜಾರಿಯಲ್ಲಿದ್ದು, ಇಡೀ ನಗರವೇಸ್ತಬ್ಧವಾಗಿದ್ದರೆ, ಇತ್ತ ಅನ್ನ, ನೀರಿಲ್ಲದೇ ನಿರಾಶ್ರಿತರು,ಬುದ್ಧಿ ಮಾಂದ್ಯರು ದಿಕ್ಕೆಟ್ಟು ರಸ್ತೆ, ಅಂಗಡಿಮುಂಗಟ್ಟಿನಲ್ಲಿ ಬಿದ್ದಿರುವ ದೃಶ್ಯಗಳು ಸಾಂಸ್ಕೃತಿಕನಗರಿ ಮೈಸೂರಿನ ಮತ್ತೂಂದು ಮುಖವನ್ನುಅನಾವರಣಗೊಳಿಸಿದೆ.
ಮೈಸೂರಿನಲ್ಲಿ ಕಳೆದೆರೆಡು ವರ್ಷಗಳಿಂದೀಚೆಗೆಮಾನಸಿಕ ಅಸ್ವಸ್ಥರು, ನಿರ್ಗತಿಕರು ಹಾಗೂನಿರಾಶ್ರಿತರ ಸಂಖ್ಯೆ ಸಾವಿರದ ಗಡಿ ದಾಟಿದ್ದು,ನಗರದ ವಿವಿಧ ಬಡಾವಣೆ, ಅಂಗಡಿ ಮುಂಗಟ್ಟು,ಮಾರುಕಟ್ಟೆ, ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಬದುಕುನಡೆಸುತ್ತಿದ್ದಾರೆ. ನಿತ್ಯ ವ್ಯಾಪಾರಿಗಳು, ಜನರುನೀಡುತ್ತಿದ್ದ ಆಹಾರ, ನೀರನ್ನೇ ಅವಲಂಬಿಸಿದ್ದಇವರಿಗೆ ಈಗ ವೀಕೆಂಡ್ ಕರ್ಫ್ಯೂನಿಂದ ಅನ್ನ,ನೀರಿಲ್ಲದೆ ಪರದಾಡುವಂತಾಗಿದೆ.
ಕಳೆದ ಬಾರಿ ಲಾಕ್‌ಡೌನ್ ಸಮಯದಲ್ಲಿಸಾರ್ವಜನಿಕರು ಸಂಘ ಸಂಸ್ಥೆಗಳುಬೀದಿಬದಿಯಲ್ಲಿದ್ದ ನಿರಾಶ್ರಿತರು, ಬುದ್ಧಿಮಾಂದ್ಯರಿಗೆಹಾಗೂ ಪ್ರಾಣಿಗಳಿಗೆ ನಿರಂತರವಾಗಿ ಆಹಾರ,ನೀರು ನೀಡುವ ಮೂಲಕ ಆಸರೆಯಾದ್ದರು. ಆದರೆಈ ಬಾರಿ ಆಹಾರ ನೀಡುವವರು ಇಲ್ಲದ್ದರಿಂದನೂರಾರು ಮಂದಿ ನಿತ್ರಾಣಗೊಂಡು ರಸ್ತೆ ಬದಿಯಮರದ ಬುಡುದಲ್ಲಿ, ಅಂಗಡಿ ಮುಂಗಟ್ಟಿನಲ್ಲಿ ಬಿದ್ದಿದ್ದರೆ, ಇನ್ನೂ ಹಲವರು ಆಹಾರಕ್ಕಾಗಿ ಬೀದಿಬೀದಿ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.
ಲಾಕ್‌ಡೌನ್, ವೀಕೆಂಡ್ ಕರ್ಫ್ಯೂ, ನೈಟ್‌ಕರ್ಫ್ಯೂನಿಂದ ಮಾನಸಿಕ ಅಸ್ವಸ್ಥರು, ನಿರ್ಗತಿಕರುಹಾಗೂ ನಿರಾಶ್ರಿತರ ಹಸಿವು, ನರಳಾಟ ಅರಣ್ಯರೋದನದಂತಾಗಿದ್ದು, ಇವರ ಅಭ್ಯುದಯಕ್ಕಾಗಿಸ್ಥಾಪನೆಯಾದ ಪುನರ್ವಸತಿ ಕೇಂದ್ರ ಇವರ ಪಾಲಿಗೆಇದ್ದು ಇಲ್ಲದಂತಾಗಿರುವುದು ಇಡೀ ವ್ಯವಸ್ಥೆಯನ್ನೇಅಣಕಿಸುವಂತಿದೆ.ಮೈಸೂರಿನ ಜ್ಯೋತಿನಗರದಲ್ಲಿ ಮಾನಸಿಕ ಅಸ್ವಸ್ಥರು, ನಿರ್ಗತಿಕರು ಹಾಗೂ ನಿರಾಶ್ರಿತರಪುನರ್ವಸತಿಗಾಗಿ ನಿರಾಶ್ರಿತರ ಪರಿಹಾರ ಕೇಂದ್ರಸ್ಥಾಪನೆಯಾಗಿದೆ. ಹೀಗಿದ್ದರೂ, ನಗರದಲ್ಲಿ 600ಕ್ಕುಹೆಚ್ಚು ಮಂದಿ ನಿರಾಶ್ರಿತರು, ಬುದ್ಧಿ ಮಾಂದ್ಯರುಬೀದಿಯಲ್ಲಿ ಬಿದ್ದಿರುವುದು ಅಧಿಕಾರಿಗಳಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.
ಜವಾಬ್ದಾರಿ ಮರೆತ ಅಧಿಕಾರಿಗಳು: ಬುದ್ಧಿಮಾಂದ್ಯರು, ನಿರಾಶ್ರಿತರು ಇತರರಂತೆ ಘನತೆಯಜೀವನ ನಡೆಸುವ ಎಲ್ಲ ಹಕ್ಕುಗಳಿದ್ದರೂ, ಅದನ್ನುಕಾರ್ಯರೂಪಕ್ಕೆ ತರಬೇಕಿರುವ ಜಿಲ್ಲಾಡಳಿತ, ನಗರಪಾಲಿಕೆ ತಮ್ಮ ಕರ್ತವ್ಯವನ್ನು ಮರೆತಿವೆ. ನಗರವ್ಯಾಪ್ತಿಯಲ್ಲಿರುವ ನಿರ್ಗತಿಕರು, ನಿರಾಶ್ರಿತರಿಗೆಗಂಜಿ ಕೇಂದ್ರ ತೆರೆದು ಅವರನ್ನು ಪೋಷಣೆಮಾಡುವ ಜವಾಬ್ದಾರಿ ಪಾಲಿಕೆಗೆ ಸೇರಿದೆ. ಆದರೆಈವರಗೆಗೂ ನಿರಾಶ್ರಿತರ ಪುನರ್ವಸತಿ ಕೇಂದ್ರ,ಗಂಜಿ ಕೇಂದ್ರ ತೆರೆದ ಉದಾಹರಣೆಗಳಿಲ್ಲ ಎಂದುನಿವೃತ್ತ ಅಧಿಕಾರಿಯೊಬ್ಬರು ಹೇಳುತ್ತಾರೆ.
ಸತೀಶ್ ದೇಪುರ