ಹೊಸದಿಲ್ಲಿ: ಕರ್ನಾಟಕದ ಕೆಲವು ಸಹಕಾರಿ ಬ್ಯಾಂಕ್‌ಗಳಲ್ಲಿ 1 ಸಾವಿರ ಕೋಟಿ ರೂ. ಮೌಲ್ಯದ ಹಣಕಾಸು ಅಕ್ರಮ ಪತ್ತೆಯಾಗಿದೆ. ಜತೆಗೆ ಖೊಟ್ಟಿ ದಾಖಲೆ ಪತ್ರಗಳೂ ಇರುವುದು ದೃಢಪಟ್ಟಿದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ. ಬ್ಯಾಂಕ್‌ಗಳಿಗೆ ಸಂಬಂಧಿಸಿದ 16 ಸ್ಥಳಗಳ ಮೇಲೆ ಮಾ. 31ರಂದು ದಾಳಿ ನಡೆಸಿದ ವೇಳೆ ಈ ಅಕ್ರಮ ಬೆಳಕಿಗೆ ಬಂದಿದೆ ಎಂದು ಮಂಡಳಿ ತಿಳಿಸಿದೆ. ಕೆಲವು ಸಹಕಾರಿ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ತೆರಿಗೆ ವಂಚನೆ ತಪ್ಪಿಸುವ ಉದ್ದೇಶದಿಂದ ಹಣವನ್ನು ವ್ಯಾಪಾರ ಉದ್ದೇಶಕ್ಕಾಗಿ ನೀಡಿರುವ ಅಂಶ ದೃಢಪಟ್ಟಿದೆ ಎಂದು ಅದು ಅಭಿಪ್ರಾಯಪಟ್ಟಿದೆ.
ದಾಳಿ ಮತ್ತು ಶೋಧ ಕಾರ್ಯ ನಡೆಸಿದ ಸಂದರ್ಭದಲ್ಲಿ 3.3 ಕೋಟಿ ರೂ ನಗದು, 2 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶ ಪಡಿಸಿಕೊಳ್ಳಲಾಗಿತ್ತು ಎಂದು ಸಿಬಿಡಿಟಿ ತಿಳಿಸಿದೆ.
ಬ್ಯಾಂಕ್‌ಗಳಲ್ಲಿ ಠೇವಣಿ: ಸಹಕಾರ ಬ್ಯಾಂಕ್‌ಗಳ ಮೂಲಕ ಪಾವತಿ ಮಾಡಲಾಗಿರುವ ಮೊತ್ತವನ್ನು ಅವುಗಳು ವ್ಯವಹಾರ ಮಾಡುವ ಬ್ಯಾಂಕ್‌ಗಳ ಶಾಖೆಗಳಲ್ಲಿ ಇರುವ ಖಾತೆಗಳಿಗೆ ಜಮೆ ಮಾಡಲಾಗಿದೆ.
15 ಕೋಟಿ ರೂ.: 15 ಕೋಟಿ ರೂ. ಮೊತ್ತವನ್ನು ಕೆಲವರು ಗ್ರಾಹಕರಿಗೆ ಮತ್ತು ವ್ಯಕ್ತಿಗಳಿಗೆ ಸಾಲವಾಗಿ ನೀಡಲಾಗಿದೆ. ಈ ಎಲ್ಲ ಅಕ್ರಮಗಳಲ್ಲಿ ಸಹಕಾರ ಬ್ಯಾಂಕ್‌ನ ಆಡಳಿತ ಮಂಡ ಳಿಯೇ ನೆರವಾಗಿದೆ. ಜತೆಗೆ ರಿಯಲ್ ಎಸ್ಟೇಟ್ ಮತ್ತು ಇತರ ವ್ಯವಹಾರದ ಮೂಲಕ ಹಣಸಂಗ್ರಹ ಮಾಡುವಲ್ಲಿ ತೊಡಗಿಸಿಕೊಂಡಿದ್ದವು ಎಂದು ಸಿಬಿಡಿಟಿ ಆರೋಪಿಸಿದೆ.