Advertisement
ಮಲೇಶ್ಯಾದಲ್ಲಂತೂ ಒಂದೇ ದಿನ ಹೊಸ ಪೀಳಿಗೆಯ 55 ಮಕ್ಕಳು ಜನಿಸಿರುವುದಾಗಿ ಅಲ್ಲಿನ ಮಲೆಮೈಲ್ ಮಾಧ್ಯಮ ಹೇಳಿಕೊಂಡಿದೆ.ಹಾಂಕಾಂಗ್ನಲ್ಲಿ 4, ವಿಯೆಟ್ನಾಂನಲ್ಲಿ 15, ಆಸ್ಟ್ರೇಲಿಯಾದಲ್ಲಿ 30, ಯುಎಇಯಲ್ಲಿ 20 ಸೇರಿದಂತೆ ಹಲವು ದೇಶಗಳ ಮಾಧ್ಯಮಗಳು ಹೊಸ ಪೀಳಿಗೆಯ ಮಕ್ಕಳ ಜನನದ ಮಾಹಿತಿ ನೀಡಿವೆ. ಹೊಸ ಪೀಳಿಗೆಯ ಮಕ್ಕಳನ್ನು ಅವರ ಪೋಷಕರು ಹಾಗೂ ಆಸ್ಪತ್ರೆಯ ಸಿಬಂದಿ ಹೊಸ ವರ್ಷವನ್ನು ಸ್ವಾಗತಿಸುವಷ್ಟೇ ಸಂಭ್ರಮದಿಂದ ಸ್ವಾಗತಿಸಿದ್ದಾರೆ.
2025ರ ಜನವರಿ 1ರಿಂದ 2039ರ ಡಿಸೆಂಬರ್ 31ರ ವರೆಗೆ ಜನಿಸುವ ಮಕ್ಕಳನ್ನು ಜೆನ್ ಬೀಟಾ ಎಂದು ಕರೆಯಲಾಗುತ್ತದೆ. 1925ರಿಂದ ಈ ತಲೆಮಾರು ಲೆಕ್ಕಚಾರವನ್ನು ಆರಂಭಿಸಲಾಗಿದ್ದು, 1925-45ರ ವರೆಗೆ ತಲೆಮಾರನ್ನು “ಬಿಲ್ಡರ್’, 1946- 64ರ ವರೆಗಿನ ತಲೆಮಾರನ್ನು “ಬೂಮರ್’, ಬಳಿಕ 1965-80 “ಜೆನ್-ಎಕ್ಸ್’, 1981-1994 “ಜೆನ್-ವೈ’, 1995-2009 “ಜೆನ್-ಝಡ್’, 2010-2024ರ ನಡುವಿನ ತಲೆಮಾರನ್ನು “ಜೆನ್ ಆಲ್ಫಾ’ ಎಂದು ಗುರುತಿಸಲಾಗುತ್ತದೆ.