ಕೆರೂರ: ಸುಮಾರು ಒಂದೂವರೆ ವರ್ಷದಿಂದ ಖಾಲಿ ಉಳಿದಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಕೊನೆಗೂ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಇದರೊಂದಿಗೆ ಗದ್ದುಗೇರಲು ಪೈಪೋಟಿ ಶುರುವಾಗಿದೆ.
Advertisement
ಪಪಂಗೆ ಈ ಹಿಂದಿನ ಅವಧಿಗೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆಮೀಸಲಾಗಿತ್ತು. ಕಾಂಗ್ರೆಸ್‌ನ ಮಂಜುಳಾ ತಿಮ್ಮಾಪುರ ಅಧ್ಯಕ್ಷರಾಗಿ, ಪಕ್ಷೇತರಾಗಿ ಜಯಗಳಿಸಿ ಬಿಜೆಪಿ ಬೆಂಬಲಿಸಿದ
ಸದಸ್ಯರಾದ ಕುಮಾರ ಐಹೊಳ್ಳಿ, ಸಿದ್ದಣ್ಣ ಕೊಣ್ಣೂರ, ಪ್ರಮೋದ ಪೂಜಾರ ಸೇರಿ ಮೂರು ಜನ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಕಾರ್ಯನಿರ್ವಹಿಸಿದರು. 2ನೇ ಅವಧಿಯಲ್ಲೂ 16 ತಿಂಗಳು ತಡವಾಗಿ ಮೀಸಲಾತಿ ಪ್ರಕಟಗೊಂಡಿದೆ.
Related Articles
Advertisement
ಬಿಜೆಪಿಯಲ್ಲಿ 5 ಜನರ ಪೈಪೋಟಿ: ಬಿಜೆಪಿಯಿಂದ ನಿರ್ಮಲಾ ಮದಿ, ಪರಶುರಾಮ ಮಲ್ಲಾಡದ ಅವರ ಹೆಸರುಗಳು ಅಧ್ಯಕ್ಷ ಸ್ಥಾನಕ್ಕೆ ಪ್ರಬಲವಾಗಿ ಕೇಳಿಬರುತ್ತಿವೆ. ಕುಮಾರ ಐಹೊಳ್ಳಿ, ಶೋಭಾ ಛತ್ರಬಾಣ, ಅಕ್ಕಮಾದೇವಿ ಶೆಟ್ಟರ ಕೂಡ ಆಕಾಂಕ್ಷಿಗಳಾಗಿದ್ದಾರೆ.ಅವರ ಹೊರತಾಗಿಯೂ ಇನ್ನೂ ಇಬ್ಬರು ಸದಸ್ಯರ ಹೆಸರು ಕೇಳಿ ಬಂದಿದೆ. ಬಿಜೆಪಿ ಸುಲಭವಾಗಿ ಆಡಳಿತ ಚುಕ್ಕಾಣಿ ಹಿಡಿಯುವ ಸಾಧ್ಯತೆ ದಟ್ಟವಾಗಿದೆ.
ಕಾಂಗ್ರೆಸ್‌ನಲ್ಲಿ ಸಂಖ್ಯಾಬಲವಿಲ್ಲದಿದ್ದರೂ ಸದಸ್ಯ ಮಲ್ಲಪ್ಪ ಹಡಪದ ಹಾಗೂ ಯಾಸಿನ್ ಖಾಜಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಹಿಡಿತದಲಿಲ್ಲ ಸದಸ್ಯರು: ಚುನಾವಣೆಯಲ್ಲಿ ಪಕ್ಷೇತರಾಗಿ ಜಯಗಳಿಸಿದ ಕುಮಾರ ಐಹೊಳ್ಳಿ, ಸಿದ್ದಣ್ಣ ಕೊಣ್ಣೂರ, ಪ್ರಮೋದ ಪೂಜಾರ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ಬಿಜೆಪಿಯಿಂದ ಜಯ ಗಳಿಸಿದ ಇಬ್ಬರು ಸದಸ್ಯರು ಕಳೆದ ಅವಧಿಯಲ್ಲಿ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದು, ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಗಣಿಸಿದೆ.
ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು ಪಕ್ಷದ ನಾಯಕರ ಆಶೀರ್ವಾದ ಮತ್ತು ಸದಸ್ಯರು ಬೆಂಬಲಿಸುವ ವಿಶ್ವಾಸ ನಮಗಿದೆ. ಪತಿ ಸದಾನಂದ ಮದಿ ಪಪಂ ಅಧ್ಯಕ್ಷರಾಗಿ ಅಧಿಕಾರ ನಡೆಸಿದ ಅನುಭವವಿದೆ.ನಿರ್ಮಲಾ ಮದಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಿಡಿಯಲು ಬೇಕಾದ ಸಂಖ್ಯಾ ಬಲ ಇಲ್ಲ. ಶಾಸಕರು ಪಕ್ಷದ ನಾಯಕರ ಹಾಗೂ ಸ್ಥಳೀಯ ಮುಖಂಡರ ನಿರ್ಧಾರಕ್ಕೆ ಎಲ್ಲ ಸದಸ್ಯರು ಬದ್ಧರಾಗಿದ್ದೇವೆ.
ಮಲ್ಲಪ್ಪ ಹಡಪದ ಕಾಂಗ್ರೆಸ್ ಸದಸ್ಯ ■ ಶ್ರೀಧರ ಚಂದರಗಿ