Advertisement

Bajpe: ಗುರುಪುರ ಪೇಟೆಯ ಹಲವೆಡೆ ಕಳವು

08:48 PM Jan 05, 2025 | Team Udayavani |

ಬಜಪೆ: ಗುರುಪುರ ಪೇಟೆಯಲ್ಲಿನ ಎಲೆಕ್ಟ್ರಾನಿಕ್‌ ಅಂಗಡಿ, ಬೇಕರಿ, ತರಕಾರಿ ಅಂಗಡಿ ಹಾಗೂ ಬಂಡ ಶಾಲೆಯ ಒಂದು ಗೂಡಂಗಡಿಗೆ ಶುಕ್ರವಾರದ ರಾತ್ರಿ ವೇಳೆಯಲ್ಲಿ ಕಳ್ಳರು ನುಗ್ಗಿ, ಮೊಬೈಲ್‌, ಎಲೆಕ್ಟ್ರಾನಿಕ್‌ ಸಾಮಾಗ್ರಿ, ಚಿನ್ನದ ಉಂಗುರ, ನಗದು, ಬೇಕರಿಯಿಂದ ತಿಂಡಿ, ನಗದು, ತರಕಾರಿ ಅಂಗಡಿಯಿಂದ ನಗದು ನಾಣ್ಯ, ಸಿಗರೇಟ್‌, ಗೂಡಂಗಡಿಯಿಂದ ಬಿಸ್ಕತ್‌ನ್ನು ಕಳವು ಮಾಡಿದ್ದಾರೆ.

Advertisement

ಗುರುಪುರ ಪೇಟೆಯಲ್ಲಿ ಉಮೇಶ್‌ ಭಟ್‌ ಅವರ ಎಲೆಕ್ಟ್ರಾನಿಕ್‌ ಅಂಗಡಿಗೆ ನುಗ್ಗಿ, ಅವರ ವೈಯಕ್ತಿಕ ಮೂರು ಮತ್ತು 9 ಮೊಬೈಲ್‌ ಫೋನ್‌, 20 ಸಾವಿರ ರೂಪಾಯಿ ಮೊತ್ತದ ಇಲೆಕ್ಟ್ರಾನಿಕ್‌ ಸಾಮಾಗ್ರಿಗಳು, 60 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಉಂಗುರ, ಸುಮಾರು 25 ಸಾವಿರ ರೂಪಾಯಿ ನಗದು ಕಳವು ಮಾಡಲಾಗಿದೆ.ಅವರ ಸಹೋದರ ರಮೇಶ್‌ ಭಟ್‌ ಅವರ ಬೇಕರಿ ಅಂಗಡಿಗೆ ನುಗ್ಗಿದ ಕಳ್ಳರು ಬೇಕರಿ ತಿಂಡಿಗಳನ್ನು ಹಾಗೂ ನಗದುಗಳನ್ನು ಶಟರ್‌ ಬೀಗ ಒಡೆದು ಕಳವು ಮಾಡಿದ್ದಾರೆ.

ಸಂಶುದ್ದೀನ್‌ ಅವರ ತರಕಾರಿ ಅಂಗಡಿಯ ಮರದ ಬಾಗಿಲಿನ ಬೀಗವನ್ನು ಒಡೆದು ನುಗ್ಗಿದ ಕಳ್ಳರು, ಡಬ್ಬಿಯಲ್ಲಿದ್ದ ಹತ್ತು ರೂಪಾಯಿಯ ನ್ಯಾಣ ಸುಮಾರು 10 ಸಾವಿರ ರೂಪಾಯಿ ನಗದು, ಸುಮಾರು 10ಸಾವಿರ ರೂಪಾಯಿ ಮೌಲ್ಯದ ಸಿಗರೇಟ್‌ ಸಹಿತ 20 ಸಾವಿರ ರೂಪಾಯಿ ಮೌಲ್ಯದ ಸೊತ್ತು ಕಳವು ಮಾಡಿದ ಕಳ್ಳರು ಅಂಗಡಿಯಲ್ಲಿನ ಫ್ರೀಜ್‌ನಲ್ಲಿದ್ದ ಮೊಸರನ್ನು ಕುಡಿದಿದ್ದಾರೆ ಹಾಗೂ ಚೆಲ್ಲಿದ್ದಾರೆ. ಅಂಗಡಿಯಲ್ಲಿದ್ದ ಅನಾನಸನ್ನು ತುಂಡು ಮಾಡಿ,ತಿಂದಿದ್ದಾರೆ. ಇಲ್ಲಿ ಕಳ್ಳರು ಹಲವು ಹೊತ್ತು ಕಾಲ ಕಳೆದಿರುವುದು ಕಂಡು ಬಂದಿದೆ.

ಬಂಡಸಾಲೆಯಲ್ಲಿ ಧರ್ಮಣ ಪೂಜಾರಿ ಗೂಡಂಗಡಿಯ ಶಟರ್‌ನ ಬೀಗ ಮುರಿದು ಬಿಸ್ಕತ್‌ನ್ನು ಕಳವು ಮಾಡಿದ್ದಾರೆ. ಸುಮಾರು ರಾತ್ರಿ 2 ರಿಂದ 3 ಗಂಟೆಯೊಳಗೆ ಈ ಕಳವು ನಡೆದಿರುವ ಬಗ್ಗೆ, ಇದು ಒಂದು ಕಳ್ಳರ ತಂಡವಾಗಿದ್ದು, ಗುರುಪುರ ಪೇಟೆಯಲ್ಲಿ ಸಿಸಿ ಕ್ಯಾಮಾರ್‌ದಲ್ಲಿ ಕಳ್ಳರ ಸುಳಿವು ಬಗ್ಗೆ ಸಿಗುವ ಬಗ್ಗೆ ಸಾರ್ವಜನಿಕರು ಪತ್ರಿಕೆಗೆ ತಿಳಿಸಿದ್ದಾರೆ.ಬಜಪೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಕಳವಿನ ಬಗ್ಗೆ ಮಾಹಿತಿ ಪಡೆದು ಹೇಳಿಕೆ ತೆಗೆದುಕೊಂಡು ಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next