Advertisement

ಇಂಟಕ್‌ ಬಲವರ್ಧನೆಗೆ ಕಾಂಗ್ರೆಸ್‌ ಸಹಕಾರ: ಆಸ್ಕರ್‌ ಫೆರ್ನಾಂಡಿಸ್‌

03:20 AM Jul 16, 2017 | Team Udayavani |

ಪಣಂಬೂರು: ಇಂಟಕ್‌ ರಾಷ್ಟ್ರೀಯ ಅಧ್ಯಕ್ಷ ಸಂಜೀವ ರೆಡ್ಡಿ ಅವರು ಕಾರ್ಮಿಕ ಸಂಘಟನೆಯನ್ನು ಬೆಳೆಸಲು ಶಕ್ತಿಶಾಲಿಯನ್ನಾಗಿ ಮಾಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದು, ಇದನ್ನು  ಮತ್ತಷ್ಟು ಬಲವರ್ಧನೆ ಮಾಡಲು ಕಾಂಗ್ರೆಸ್‌ ಪಕ್ಷ  ಕೈ ಜೋಡಿಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂಸದ ಆಸ್ಕರ್‌ ಫೆರ್ನಾಂಡಿಸ್‌ ಅವರು ಹೇಳಿದರು.   

Advertisement

ಇಲ್ಲಿನ ಜವಾಹರಲಾಲ್‌ ನೆಹರೂ ಸಭಾಂಗಣದಲ್ಲಿ ಶನಿವಾರ ಜರಗಿದ ಅಖೀಲ ಭಾರತ ರಾಷ್ಟ್ರೀಯ ಮಜ್ದೂರ್‌ ಸಂಘದ  ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಅವರು  ಮಾತನಾಡಿದರು.ಮಾಜಿ ಶಾಸಕ ಮತ್ತು ಮಾಜಿ ಇಂಟಕ್‌ ರಾಜ್ಯಾಧ್ಯಕ್ಷ ಎಂ. ಎನ್‌. ಅಡ್ಯಂತಾಯ ಮಾತನಾಡಿದರು.

ಇಂಟಕ್‌ಗೆ 5 ವಿಧಾನಸಭಾ 
ಸ್ಥಾನ ನೀಡಲು ಮನವಿ 

ನವಮಂಗಳೂರು ಬಂದರಿನಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುವ ಅನೇಕ ಜನ ಕಾರ್ಮಿಕರನ್ನು ನಿಗದಿತ ಸಮಯದ ತನಕ ದುಡಿಸಿ ನಂತರ ಕೆಲಸದಿಂದ ತೆಗೆಯಲಾಗುತ್ತದೆ. ಅದರ ಬದಲು ಸಾಕಷ್ಟು ವರ್ಷ ದುಡಿದ ಕಾರ್ಮಿಕರಿಗೆ ಕೆಲಸದ ಭದ್ರತೆಯನ್ನು ಕೊಡಬೇಕು ಎಂದು ಇಂಟಕ್‌ ರಾಜ್ಯಾಧ್ಯಕ್ಷ ರಾಕೇಶ್‌ ಮಲ್ಲಿ ಆಗ್ರಹಿಸಿದರು. 

ಇಂಟಕ್‌ ಯಾವತ್ತೂ  ಕಾಂಗ್ರೆಸ್‌ ಪಕ್ಷಕ್ಕಾಗಿ ಕೆಲಸ ಮಾಡುತ್ತಾ ಬಂದಿದೆ. ಆದರೆ ಎಂ.ಎನ್‌. ಅಡ್ಯಂತಾಯರು ಶಾಸಕರಾದ ಅನಂತರ ಇಂಟಕ್‌ನಿಂದ ಯಾರಿಗೂ ಅವಕಾಶ ಸಿಕ್ಕಿಲ್ಲ. ಆದ್ದರಿಂದ ಈ ಬಾರಿ ರಾಜ್ಯದಲ್ಲಿ ಕನಿಷ್ಠ 5 ಸೀಟುಗ ಳನ್ನಾದರೂ ಇಂಟಕ್‌ಗೆ ಕೊಟ್ಟು ರಾಜ್ಯದಲ್ಲಿ ಇಂಟಕ್‌ ಕಾರ್ಯಕರ್ತರು ಶಾಸಕರಾಗಬೇಕು. ಅದಕ್ಕೆ ಕಾಂಗ್ರೆಸ್‌ ನಾಯಕರು ಸಹಕರಿಸಬೇಕು ಎಂದು ಹೇಳಿದರು.  

ನವಮಂಗಳೂರು ಜವಾಹರಲಾಲ್‌ ನೆಹರೂ ಸಭಾಂಗಣದಲ್ಲಿ  ಜರ ಗಿದ ಕಾರ್ಯಕ್ರಮವನ್ನು ಇಂಟಕ್‌ ರಾಷ್ಟ್ರೀಯ ಅಧ್ಯಕ್ಷ ಸಂಜೀವ ರೆಡ್ಡಿ ಉದ್ಘಾಟಿಸಿದರು. 

Advertisement

ಕೆಪಿ ಸಿಸಿ ಕಾರ್ಯಾ ಧ್ಯಕ್ಷ ದಿನೇಶ್‌ ಗುಂಡೂ ರಾವ್‌, ಆಹಾರ ಮತ್ತು ನಾಗ ರಿಕ ಪೂರೈಕೆ  ಸಚಿವ ಯು.ಟಿ. ಖಾದರ್‌, ಬ್ಲೋಸಮ್‌ ಫೆರ್ನಾಂಡಿಸ್‌, ಶಾಸಕರಾದ ವಿನಯ ಕುಮಾರ್‌ ಸೊರಕೆ, ಅಭಯಚಂದ್ರ  ಜೈನ್‌, ಮೊದಿನ್‌ ಬಾವಾ, ಮೇಯರ್‌ ಕವಿತಾ ಸನಿಲ್‌, ಮಾಜಿ ಶಾಸಕ ವಿಜಯ ಕುಮಾರ್‌ ಶೆಟ್ಟಿ, ಗೇರು ಅಭಿವೃದ್ಧಿ ನಿಗಮದ ಬಿ.ಎಸ್‌. ಖಾದರ್‌, ರಾಜ್ಯ ಅಲ್ಪಸಂಖ್ಯಾಕ ನಿಗಮದ ಅಧ್ಯಕ್ಷ ಎಂ. ಎ. ಗಫ‌ೂರ್‌, ರಾಜ್ಯ ಇಂಟಕ್‌ ಉಪಪ್ರಧಾನ ಕಾರ್ಯದರ್ಶಿ ಶಶಿರಾಜ್‌ ಅಂಬಟ್‌, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಪ್ರತಿಭಾ ಕುಳಾಯಿ, ಪುಟ್ಟಸ್ವಾಮಿ, ವಿಶ್ವಾಸ್‌ ದಾಸ್‌, ಮಹಿಳಾ ಘಟಕದ ತಾರಾಚಂದ್ರ, ಮಾಜಿ ಉಪಮೇಯರ್‌ ಪುರುಷೋತ್ತಮ್‌ ಚಿತ್ರಾಪುರ, ಕಾಂಗ್ರೆಸ್‌ ಮುಖಂಡರಾದ ಜಿ. ಎ. ಬಾವಾ, ಬಿ. ಎ. ಸುರೇಶ್‌, ಕೋಡಿಜಾಲ್‌ ಇಬ್ರಾಹಿಂ, ಕಳ್ಳಿಗೆ ತಾರಾನಾಥ ಶೆಟ್ಟಿ, ಲುಕ  ಾ¾ನ್‌, ವಿಶ್ವಾಸ್‌ ದಾಸ್‌ ಅಮೀನ್‌, ದೀಕ್ಷಿತ್‌ ಶೆಟ್ಟಿ, ಪದಾ ಧಿಕಾರಿಗಳಾದ  ಶ್ರುತಿ  ಶ್ರೀನಾಥ ,ರಾಜ್ಯ,ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿ ಕಾರಿಗಳು ಉಪಸ್ಥಿತರಿದ್ದರು.  ಜಿಲ್ಲಾಧ್ಯಕ್ಷ  ಮನೋಹರ್‌ ಶೆಟ್ಟಿ ಸ್ವಾಗತಿಸಿದರು. ದಿನೇಶ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಚಿತ್ತರಂಜನ್‌ ವಂದಿಸಿದರು.

ಕಾರ್ಮಿಕ ಸಂಘಟನೆ ಒಡೆಯುವ ಯತ್ನ
ದೇಶದ ಪ್ರಧಾನಿ ನರೇಂದ್ರ ಮೋದಿಯವರು  ಕಾರ್ಮಿಕ ಸಂಘಟನೆಯನ್ನು ಡಿವೈಡ್‌ ಆ್ಯಂಡ್‌ ರೂಲ್‌ ಪಾಲಿಸಿ ಮೂಲಕ ಒಡೆಯಲು ಯತ್ನಿಸುತ್ತಿದ್ದಾರೆ. ಇಂಟಕ್‌ ಅನ್ನು  ದುರ್ಬಲಗೊಳಿಸುವ ಪ್ರಯತ್ನ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ, ಇಂಟಕ್‌ ಕಾರ್ಯಕರ್ತರು ಎಂದೆಗುಂದದೆ 3.50 ಲಕ್ಷ ಕಾರ್ಮಿಕ ಸದಸ್ಯರಿರುವ ಸಂಘಟನೆಯನ್ನು ಬಲಿಷ್ಠಗೊಳಿಸಲು ಶ್ರಮಿಸಬೇಕು ಎಂದರು. ಕಳೆದ 15 ವರ್ಷಗಳಿಂದ ಇಂಟಕ್‌ನಲ್ಲಿ ವಿವಿಧ ಜವಾಬ್ದಾರಿ ಹೊತ್ತಿರುವ ತನಗೆ ಅನೇಕ ಸವಾಲುಗಳು ಎದುರಾಗಿದ್ದರೂ  ಎದೆಗುಂದದೆ ಇಂಟಕ್‌ ಅನ್ನು ಬೆಳೆಸಿದ್ದೇನೆ
-ಎಂ. ಎನ್‌. ಅಡ್ಯಂತಾಯ, ರಾಜ್ಯಾಧ್ಯಕ್ಷ, ಇಂಟಕ್‌

Advertisement

Udayavani is now on Telegram. Click here to join our channel and stay updated with the latest news.

Next