ಹೈದರಾಬಾದ್: ಕಳೆದ ವರ್ಷ ಪ್ಯಾನ್ ಇಂಡಿಯಾದಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದ್ದ ಸೂರ್ಯ (Suriya) ಅವರ ʼಕಂಗುವʼ ಮತ್ತೊಮ್ಮೆ ಸುದ್ದಿಯಾಗಿದೆ.
ಸೂರ್ಯ – ಬಾಬಿ ಡಿಯೋಲ್ ( Bobby Deol) ಮುಖಾಮುಖಿಯಾಗಿ ಕಾಣಿಸಿಕೊಂಡಿದ್ದ ʼಕಂಗುವʼ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ ರಿಲೀಸ್ ಆದ ಬಳಿಕ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಾಕ್ಸಾಫೀಸ್‌ನಲ್ಲೂ ಸಿನಿಮಾಕ್ಕೆ ಅಂದುಕೊಂಡ ಮಟ್ಟಿಗೆ ಲಾಭ ಸಿಗಲಿಲ್ಲ.
ʼಕಂಗುವʼ ಸೋಲಿನಿಂದ ನಿರಾಶರಾಗಿದ್ದ ಸೂರ್ಯ ಫ್ಯಾನ್ಸ್‌ಗಳಿಗೆ ʼಕಂಗುವʼ ಚಿತ್ರದ ಕಾರಣದಿಂದಲೇ ಖುಷಿಯಾಗುವ ವಿಚಾರವೊಂದು ಬಹಿರಂಗವಾಗಿದೆ.
ಅಕಾಡೆಮಿ ಅವಾರ್ಡ್ಸ್ (Oscars 2025) ಅರ್ಹತಾ ವಿಭಾಗದ 323 ಚಿತ್ರಗಳ ಪಟ್ಟಿಯನ್ನು ರಿವೀಲ್ ಮಾಡಿದೆ. ಈ ಪಟ್ಟಿಯಲ್ಲಿ ಸೂರ್ಯ ಅವರ ʼಕಂಗುವʼ ಚಿತ್ರ ಕೂಡ ಕಾಣಿಸಿಕೊಂಡಿದೆ.
ಆಸ್ಕರ್‌ನ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ʼಕಂಗುವʼ ಕಾಣಿಸಿಕೊಂಡಿದೆ. ಈ ಪಟ್ಟಿಯಲ್ಲಿ ಸುಮಾರು 323 ಚಿತ್ರಗಳು ಕಾಣಿಸಿಕೊಂಡಿದೆ. ಭಾರತದ ಪೃಥ್ವಿರಾಜ್ ಸುಕುಮಾರನ್ ಆಡುಜೀವಿತಂ (ಹಿಂದಿ ವರ್ಷನ್), ಸ್ವಾತಂತ್ರ್ಯ ವೀರ್ ಸಾವರ್ಕರ್, ಸಂತೋಷ್ , ಮಲಯಾಳಂ ಚಿತ್ರ ʼಆಲ್ ವಿ ಇಮ್ಯಾಜಿನ್ ಆಸ್ ಲೈಟ್ʼ ಚಿತ್ರ ಕೂಡ ಅರ್ಹತಾ ವಿಭಾಗದಲ್ಲಿ ಸ್ಥಾನ ಪಡೆದಿದೆ.
323 ಚಿತ್ರಗಳು ನಾಮಿನೇಷನ್ ವಿಭಾಗಕ್ಕೆ ಹೋಗಲು ವೋಟ್ ಮಾಡಲಾಗುತ್ತದೆ. ನಾಳೆಯಿಂದ (ಜ.8ರಿಂದ) ವೋಟಿಂಗ್ ಆರಂಭಗೊಳ್ಳಲಿದೆ. ಜನವರಿ 12ಕ್ಕೆ ವೋಟಿಂಗ್ ಮುಕ್ತಾಯವಾಗಲಿದೆ.
ಸಾಮಾನ್ಯ ಜನರಿಂದ ಮತ್ತು ಜ್ಯೂರಿಗಳಿಂದ ವೋಟಿಂಗ್ ಆರಂಭವಾಗುತ್ತದೆ, ವೋಟಿಂಗ್ ಯಾವುದಕ್ಕೆ ಹೆಚ್ಚು ಬಂದಿರುತ್ತದೋ, ಆ ಸಿನಿಮಾಗಳನ್ನು ಪ್ರಶಸ್ತಿ ಸುತ್ತಿಗೆ ನಾಮಿನೇಟ್ ಮಾಡಲಾಗುತ್ತದೆ.