Advertisement

Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್‌ ನಾಮಿನೇಷನ್‌ ವೋಟಿಂಗ್ ವಿಸ್ತರಣೆ

12:37 PM Jan 09, 2025 | Team Udayavani |

ಲಾಸ್‌ ಏಂಜಲೀಸ್‌: ಅಮೆರಿಕದ ಲಾಸ್‌ ಏಂಜ­ಲೀಸ್‌ನ ಅರಣ್ಯ ಪ್ರದೇಶದಲ್ಲಿ ಹೊತ್ತಿದ್ದ ಕಾಳ್ಗಿಚ್ಚು ಆಸ್ಕರ್‌ ನಾಮಿನೇಷನ್‌ ವೋಟಿಂಗ್‌ ಮೇಲೆ ಪರಿಣಾಮ ಬೀರಿದೆ.

Advertisement

5,000ಕ್ಕೂ ಹೆಚ್ಚು ಎಕರೆ ಪ್ರದೇಶವನ್ನು ಆವರಿಸಿದ ಭೀಕರ ಕಾಳ್ಗಿಚ್ಚಿನಿಂದಾಗಿ ಕನಿಷ್ಠ ಐವರು ಮೃತಪಟ್ಟಿದ್ದಾರೆ. ಲಾಸ್‌ ಏಂಜಲೀಸ್‌ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಇರುವ 49 ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸ­ಲಾಗಿದೆ.  ಬೆಂಕಿಯ ತೀವ್ರತೆಗೆ ಹಲವು ಕಾರುಗಳು ಮತ್ತು ಮನೆಗಳು ಸುಟ್ಟು ಭಸ್ಮವಾಗಿವೆ ಎಂದು ವರದಿಯಾಗಿದೆ.

ಕಾಳ್ಗಿಚ್ಚಿನ ಪರಿಣಾಮ ಪ್ರತಿಷ್ಠಿತ ಆಸ್ಕರ್‌ ನಾಮಿನೇಷನ್‌ ಪ್ರಕ್ರಿಯೆ ವಿಳಂಬವಾಗಿದೆ. ಇದರಿಂದಾಗಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಆಸ್ಕರ್ ನಾಮನಿರ್ದೇಶನದ ಮತದಾನದ ಪ್ರಕ್ರಿಯೆಯನ್ನು ವಿಸ್ತರಿಸಿದೆ.

ಸುಮಾರು 10,000 ಅಕಾಡೆಮಿ ಸದಸ್ಯರಿಗೆ ವೋಟಿಂಗ್‌ ಮಾಡುವ ಅವಕಾಶವಿದೆ. ಜನವರಿ 8 ರಂದು ಪ್ರಾರಂಭವಾಗಿ, ಜನವರಿ 12 ರಂದು ವೋಟಿಂಗ್‌ ಕ್ಲೋಸ್‌ ಆಗುವುದಿತ್ತು. ಆದರೆ ಇದೀಗ ಈ ದಿನಾಂಕವನ್ನು ವಿಸ್ತರಿಸಲಾಗಿದೆ. 12ರ ಬದಲಿಗೆ 14ರ ವರೆಗೆ ವೋಟಿಂಗ್‌ ನಡೆಯಲಿದೆ.  ಈ ಮೊದಲು ಜನವರಿ 17 ರಂದು ಪ್ರಕಟಿಸಬೇಕಿದ್ದ ನಾಮಿನೇಷನ್‌ ಅನೌನ್ಸ್‌ ಮೆಂಟ್ ಜನವರಿ 19ಕ್ಕೆ ವಿಸ್ತರಿಸಲಾಗಿದೆ.

ಸಿಇಒ ಬಿಲ್ ಕ್ರಾಮರ್ ಅವರು ಅಕಾಡೆಮಿ ಸದಸ್ಯರಿಗೆ ದಿನಾಂಕ ಬದಲಾವಣೆಗಳ ಕುರಿತು ಇಮೇಲ್ ಮಾಡಿ ವಿಷಯವನ್ನು ತಿಳಿಸಿದ್ದಾರೆ.

Advertisement

ಮಾರ್ಚ್ 2 ರಂದು ನಡೆಯಲಿರುವ 2025ರ ಆಸ್ಕರ್ ಸಮಾರಂಭವನ್ನು ಕಾನನ್ ಒ’ಬ್ರೇನ್ ಹೋಸ್ಟ್ ಮಾಡಲಿದ್ದಾರೆ.

ಬೆದರಿದ ಹಾಲಿವುಡ್‌ನ‌ ಪ್ರಮುಖರು
ಕ್ಯಾಲಿಫೋರ್ನಿಯಾದ ಬಹುಭಾಗ ಅದರಲ್ಲೂ ಲಾಸ್‌ ಏಂಜಲೀಸ್‌ ಸುತ್ತಲೂ ಇರುವ ಪ್ರದೇಶಗಳು ಐಷಾರಾಮಿ ಮನೆಗಳನ್ನು ಹೊಂದಿದೆ. ಅದರಲ್ಲೂ ಬಹುಭಾಗ ಹಾಲಿವುಡ್‌ ತಾರೆಯರ ನೆಲೆಯಾಗಿದೆ. ಕಾಳ್ಗಿಚ್ಚಿನ ಭೀತಿಯಿಂದ ಹಾಲಿವುಡ್‌ನ‌ ಪ್ರಮುಖರೆಲ್ಲರೂ ತಮ್ಮ ಮನೆಗಳನ್ನು ತೊರೆದಿದ್ದಾರೆ ಎನ್ನಲಾಗಿದೆ. ಅವರಿಗೆ ಸೇರಿದ ವಾಹನಗಳು ಮನೆಗಳು ಬಹುತೇಕ ನಾಶವಾಗಿವೆ. ಅಗ್ನಿಶಾಮಕ ಸಿಬಂದಿ ಬುಲ್ಡೋಜರ್‌ಗಳ ಮೂಲಕ ಸಾವಿರಾರು ಐಷಾರಾಮಿ ವಾಹನ ಗಳನ್ನು ತೆರವುಗೊಳಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next