Advertisement

ಕೃಷಿ ಹೊಂಡ ಅವ್ಯವಹಾರದ ಬಗ್ಗೆ ತನಿಖೆಗೆ ಸಿಎಂ ಆದೇಶ

11:00 PM Sep 08, 2019 | Lakshmi GovindaRaju |

ಬೆಂಗಳೂರು: “ಕೃಷಿ ಭಾಗ್ಯ’ ಯೋಜನೆಯಲ್ಲಿ ಅಕ್ರಮ ಆರೋಪಗಳು ಕೇಳಿ ಬಂದಿದ್ದು, ಈ ಬಗ್ಗೆ ತನಿಖೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆದೇಶಿಸಿದ್ದಾರೆ. ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರಿಗೆ ಈ ಕುರಿತು ಸೂಚನೆ ನೀಡಿರುವ ಅವರು, 2014-15 ರ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ. 2014-15 ರಿಂದ 2017-18 ರವರೆಗೆ ರಾಜ್ಯದ 131 ತಾಲೂಕುಗಳಲ್ಲಿ 2,15,130 ಕೃಷಿ ಹೊಂಡ ನಿರ್ಮಿಸಲಾಗಿದೆ. ಇದಕ್ಕಾಗಿ 921.16 ಕೋಟಿ ರೂ.ವೆಚ್ಚ ಮಾಡಲಾಗಿದೆ.

Advertisement

ಮೇಲ್ನೋಟಕ್ಕೆ ಇದರ ಮಾಹಿತಿ ಸರಿ ಇಲ್ಲ. ಅಷ್ಟು ಪ್ರಮಾಣದ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿಲ್ಲ ಎಂಬ ದೂರು ಗಳು ಇವೆ. ಹೀಗಾಗಿ, ಈ ಬಗ್ಗೆ ತನಿಖೆ ನಡೆಸಿ, ಎರಡು ತಿಂಗಳಲ್ಲಿ ವರದಿ ನೀಡುವಂತೆ ತಿಳಿಸಿದ್ದಾರೆ. 2,15,130 ಕೃಷಿ ಹೊಂಡಗಳು ಮತ್ತು ಅವುಗಳಿಗೆ ಪೂರಕವಾಗಿ ಪೂರೈಸಲಾಗಿ ರುವ ಪಾಲಿಥೀನ್‌ ಹೊದಿಕೆ, ನೆರಳು ಪರದೆ, ಡೀಸೆಲ್‌ ಪಂಪ್‌ಗ್ಳ ಅಳವಡಿಕೆ ಕುರಿತು ಖುದ್ದು ತಪಾಸಣೆ/ಪರಿಶೀಲನಾ ವರದಿಗಳನ್ನು ಎಲ್ಲ ಜಿಲ್ಲೆಗಳ ಕೃಷಿ ನಿರ್ದೇಶಕರಿಂದ ಪಡೆದು, ಸಮಗ್ರ ತನಿಖೆ ನಡೆಸಿ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next