Advertisement

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

12:45 AM Nov 23, 2024 | Team Udayavani |

ಅಮರಾವತಿ: ಜಗನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿ ಸರಕಾರ ಅದಾನಿ ಗ್ರೂಪ್‌ನಿಂದ ಲಂಚ ಪಡೆದಿದೆ ಎಂಬ ಆರೋಪದ ಕುರಿತು ಪರಿಶೀಲಿಸಿದ ಬಳಿಕ, ಕ್ರಮ ಕೈಗೊಳ್ಳಲಾಗುವುದು ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

Advertisement

ಅಮೆರಿಕದಲ್ಲಿ ದಾಖಲಾಗಿರುವ ದೋಷಾರೋಪಟ್ಟಿ ನನ್ನ ಬಳಿ ಇದೆ. ಇದನ್ನು ಪರಿಶೀಲಿಸುತ್ತೇವೆ. ಬಳಿಕ ಸಾಕ್ಷ್ಯಗಳ ಆಧಾ ರದ ಮೇಲೆ ಕ್ರಮ ಕೈಗೊಳ್ಳಲಾಗುವುದು. 2019ರಿಂದ 2024ರ ನಡುವಿನ ಭ್ರಷ್ಟಾಚಾರ ಪ್ರಕರಣಗಳ ಕುರಿತು ತನಿಖೆ ಕೈಗೊಳ್ಳುವ ಬಗ್ಗೆ ಐದಾರು ತಿಂಗಳಿಂದ ಚರ್ಚೆ ನಡೆಯುತ್ತಿದೆ ಎಂದಿದ್ದಾರೆ.

ಭ್ರಷ್ಟಾಚಾರದ ಆರೋಪ ಗಳನ್ನು ವೈಎಸ್‌ಆರ್‌ ಕಾಂಗ್ರೆಸ್‌ ಅಲ್ಲಗಳೆದಿದೆ. ಇನ್ನು, ಪ್ರಕರಣದಲ್ಲಿ ಪಾಲ್ಗೊಂಡ ವ್ಯಕ್ತಿಗಳೆಲ್ಲರೂ ಕಾಂಗ್ರೆಸ್‌ ನೊಂದಿಗೆ ನಂಟು ಹೊಂದಿದವರೇ ಆಗಿದ್ದಾರೆ ಎಂದು ಬಿಜೆಪಿ ಅಧ್ಯಕ್ಷೆ ಡಿ.ಪುರಂದೇಶ್ವರಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next