Advertisement

Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ

03:48 PM Nov 19, 2024 | Team Udayavani |

ಉಡುಪಿ: ಈಶ್ವರನಗರದಿಂದ ಪರ್ಕಳಕ್ಕೆ ಹೋಗುವ ರಸ್ತೆಯಲ್ಲಿದ್ದ ಹೊಂಡ-ಗುಂಡಿಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಸೋಮವಾರ ಬೆಳಗ್ಗಿನಿಂದಲೇ ರೆಡಿಮಿಕ್ಸ್‌ ಹಾಕುವ ಕಾಮಗಾರಿ ಭರದಿಂದ ನಡೆಯಿತು.

Advertisement

ಟ್ರಾಫಿಕ್‌ ದಟ್ಟಣೆಯ ನಡುವೆಯೂ ರಸ್ತೆಯ ಒಂದು ಬದಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಯಿತು.

ಸುದಿನ ವರದಿ
ದ್ವಿಪಥ ರಸ್ತೆಯ ಮತ್ತೂಂದು ಬದಿಯಲ್ಲಿದ್ದ ಸಣ್ಣಪುಟ್ಟ ಹೊಂಡಗಳಿಗೂ ತೇಪೆ ಹಾಕಲಾಗಿದ್ದು, ಈಗ ವಾಹನ ಸವಾರರು ಸರಾಗವಾಗಿ ಸಂಚಾರ ಮಾಡಬಹುದು. ಈ ಹಿಂದೆ ಕೆಳಪರ್ಕಳದಿಂದ ಪರ್ಕಳದತ್ತ ಹೋಗುವ ದಾರಿಯ ಎಡಬದಿಯ ರಸ್ತೆಯಲ್ಲಿ ಹೊಂಡಗಳಿದ್ದ ಕಾರಣ ವಾಹನಗಳು ಬಲಬದಿಗೆ ಬಂದು ಸಂಚಾರ ಮಾಡುತ್ತಿದ್ದವು. ಈ ಕಾರಣಕ್ಕೆ ಈಗಾಗಲೇ ಇಲ್ಲಿ ಹಲವಾರು ಅಪಘಾತಗಳು ನಡೆದಿದ್ದವು. ಈ ಬಗ್ಗೆ ಉದಯವಾಣಿ ಪತ್ರಿಕೆಯೂ ವರದಿ ಪ್ರಕಟಿಸಿದ್ದು, ಇದರಲ್ಲಿ ರಸ್ತೆಯ ಅವ್ಯವಸ್ಥೆ ಬಗ್ಗೆ ಉಲ್ಲೇಖೀಸಲಾಗಿತ್ತು.

ವರದಿ ಪ್ರಕಟಗೊಂಡ ಕೆಲವೇ ದಿನಗಳಲ್ಲಿ ತೇಪೆ ಕಾರ್ಯ ನಡೆದಿದೆ. ಇದು ಆರಂಭಿಕ ಹಂತದ ಕಾಮಗಾರಿಯಾಗಿದ್ದು, ಟ್ರಾಫಿಕ್‌ ದಟ್ಟಣೆಯಿಂದ ತಕ್ಕಮಟ್ಟಿಗೆ ನಿರ್ವಹಣೆ ಮಾಡಲಾಗಿದೆ. ಮುಂದೆ ಮತ್ತಷ್ಟು ಉತ್ತಮ ಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಹೆದ್ದಾರಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next