Advertisement

Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!

03:05 PM Nov 17, 2024 | Team Udayavani |

ಬೆಂಗಳೂರು: ಕೃಷಿ ಮೇಳಕ್ಕೆ ಶನಿವಾರ ಜನಸಾಗರ ಹರಿದು ಬಂತು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 10.25 ಲಕ್ಷ ಜನರು ಕೃಷಿ ಮೇಳವನ್ನು ವೀಕ್ಷಿಸಿದ್ದಾರೆ.

Advertisement

15,500 ಮಂದಿ ಕೃಷಿ ವಿವಿಯ ರಿಯಾಯಿತಿ ದರದ ಭೋಜನಾಲಯದಲ್ಲಿ ಊಟ ಸವಿದಿದ್ದಾರೆ. ಹಾಗೆಯೇ ಸುಮಾರು 1.75 ಕೋಟಿ ರೂ. ವಹಿವಾಟು ನಡೆದಿದೆ ಎಂದು ಬೆಂಗಳೂರು ಕೃಷಿ ವಿವಿಯ ಮಾಧ್ಯಮ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮಳಿಗೆಗಳಲ್ಲಿ ಹೆಚ್ಚಿನ ರೀತಿಯ ಜನ ಕಂಡು ಬಂತು. ಇದರ ಪರಿಣಾಮ ಕೆಲವೆಡೆ ನೂಕುನೂಗ್ಗಲು ಉಂಟಾ ಯಿತು. ಕೃಷಿ ವಿಭಾಗ, ಹವಾಮಾನ ಆಧಾರಿತ ಬೀಜ ಬಿತ್ತನೆ, ನೀರು ನಿರ್ವಹಣಾ ತಂತ್ರಜ್ಞಾನ ಕೇಂದ್ರ, ಜೋಳ, ಮಣ್ಣು, ಜಲಾಶಯನ, ಭತ್ತ, ಸಸ್ಯಸಂರಕ್ಷಣೆ, ರೇಷ್ಮೆ, ಎಣ್ಣೆಕಾಳು, ದ್ವಿದಳ ಧಾನ್ಯ, ಕೀಟಶಾಸ್ತ್ರ, ವಾಣಿಜ್ಯ ಬೆಳೆ, ಕಳೆ ನಿರ್ವಹಣೆ, ಜೈವಿಕ ಗೊಬ್ಬರ, ಜೀಜ ತಾಂತ್ರಿಕತೆ, ಜೈವಿಕ ಇಂಧನ, ಕಬ್ಬು ಪ್ರಾತ್ಯಕ್ಷಿಕ ಕೇಂದ್ರಗಳಿಗೆ ಸಾಕಷ್ಟು ಮಂದಿ ಭೇಟಿ ನೀಡಿದರು.

ಆಯಾ ಪ್ರಾತ್ಯಕ್ಷಿಕ ಕೇಂದ್ರಗಳಲ್ಲಿ ಬೆಳೆಗಳ ಕುರಿತು ಮಾಹಿತಿ ಫಲಕ ಹಾಕಲಾಯಿತು. ತಳಿಯ ಹೆಸರು, ಬೆಳೆಯುವ ದಿನಗಳ ಅವಧಿ, ಇಳುವರಿ, ಯಾವ ತಿಂಗಳಲ್ಲಿ ಬೀಜ ಬಿತ್ತನೆ ಮಾಡಬೇಕು, ಹಿಂಗಾರು, ಮುಂಗಾರು ಸಂದರ್ಭದಲ್ಲಿ ಯಾವ್ಯಾವ ಬೆಳೆ ಬೆಳೆಯಬೇಕು, ಹವಾಮಾನ ವೈಪರಿತ್ಯ ಸಮಸ್ಯೆಯಿಂದ ಬೆಳೆ ರಕ್ಷಿಸಿಕೊಳ್ಳುವುದು ಹೇಗೆ, ಕಳೆಯಿಂದ ಬೆಳೆ ರಕ್ಷಿಸಿಕೊಳ್ಳಲು ಏನು ಮಾಡಬೇಕು ಎಂಬಿತ್ಯಾದಿ ಮಾಹಿತಿಗಳನ್ನು ಕೃಷಿ ವಿಜ್ಞಾನಿಗಳಿಂದ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next