Advertisement

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

01:13 AM Nov 22, 2024 | Team Udayavani |

ಶಿಮ್ಲಾ: ಆರ್ಥಿಕ ಬಿಕ್ಕಟ್ಟು ಹಾಗೂ ಸಾಲದಿಂದ ನಲುಗುತ್ತಿರುವ ಹಿಮಾಚಲ ಪ್ರದೇಶ ಸರಕಾರಕ್ಕೆ ಸಾಲದ ಹೊರೆಯಿಂದ ಹೊರಬರುವ ದಾರಿಯೆಂಬಂತೆ, ನಷ್ಟದಲ್ಲಿರುವ 18 ಸರಕಾರಿ ಸ್ವಾಮ್ಯದ ಹೊಟೇಲ್‌ಗಳನ್ನು ಮುಚ್ಚುವಂತೆ ರಾಜ್ಯ ಹೈಕೋರ್ಟ್‌ ಸೂಚಿಸಿದೆ. ದಿಲ್ಲಿಯಲ್ಲಿರುವ ಹಿಮಾಚಲ ಭವನವನ್ನು ಮುಟ್ಟುಗೋಲು ಹಾಕುವ ಆದೇಶ ಹೊರಬಿದ್ದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Advertisement

ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹಣಕಾಸು ಅಸಮರ್ಪಕ ನಿರ್ವಹಣೆ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಜೈ ಕೃಷ್ಣ ಮೆಹ್ತಾ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, “ದಿ ಪ್ಯಾಲೇಸ್‌, ಗೀತಾಂಜಲಿ ಸೇರಿದಂತೆ 18 ಹೊಟೇಲ್‌ಗಳಿಗೆ ಜನರೇ ಬರುತ್ತಿಲ್ಲ. ಇವುಗಳು ಬಿಳಿಯಾನೆಗಳಿದ್ದಂತೆ. ಇವುಗಳ ನಿರ್ವಹಣೆಯಿಂದ ಸರಕಾರದ ಬೊಕ್ಕಸಕ್ಕೆ ಮತ್ತಷ್ಟು ಹೊರೆಯಾಗಲಿದೆ. ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ನಾವು ಕೂಡ ಸರಕಾರಕ್ಕೆ ಹಲವು ಅವಕಾಶಗಳನ್ನು ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಅವುಗಳನ್ನು ಮುಚ್ಚುವುದೇ ಉತ್ತಮ’ ಎಂದು ಅಭಿಪ್ರಾಯಪಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next