Advertisement
ಮಂಗಳೂರು ವಿ.ವಿ. ಕಾಲೇಜು ಅಧ್ಯಾಪಕರ ಸಂಘ “ಅಮುಕ್¤’ ನಗರದ ಕೆನರಾ ಪ.ಪೂ. ಕಾಲೇಜಿನಲ್ಲಿ ರವಿವಾರ ಆಯೋಜಿಸಿದ್ದ ವಾರ್ಷಿಕ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯದ ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜುಗಳ ಶಿಕ್ಷಕರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ, ಸರಕಾರದ ನಡೆ ನೋಡಿದರೆ ಬೇಸರವಾಗುತ್ತದೆ ಎಂದರು.
Related Articles
Advertisement
ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಗೌರವ ಕಾರ್ಯ ದರ್ಶಿ ಎಂ. ರಂಗನಾಥ್ ಭಟ್, ಕಾಲೇಜಿನ ಪ್ರಾಂಶುಪಾಲೆ ಡಾ| ಮಾಲಿನಿ ಕೆ.ವಿ., ಅಮುಕ್¤ ಅಧ್ಯಕ್ಷ ಡಾ| ಉಮ್ಮಪ್ಪ ಪೂಜಾರಿ ಪಿ., ಪ್ರಧಾನ ಕಾರ್ಯ ದರ್ಶಿ ಡಾ| ಬಿ.ಎ. ಕುಮಾರ್ ಹೆಗ್ಡೆ, ಖಜಾಂಚಿ ದೇಜಮ್ಮ, ಉಪನ್ಯಾಸಕರು ಉಪಸ್ಥಿತರಿದ್ದರು.
ನಿರ್ಣಯ ಅಂಗೀಕಾರಅಮುಕ್¤ ಸಭೆಯಲ್ಲಿ ನಿರ್ಣಯಗಳನ್ನು ಅಂಗೀ ಕರಿಸಲಾಯಿತು. ಮುಖ್ಯವಾಗಿ, ಅನುದಾನಿತ ಕಾಲೇಜು ನೌಕರರಿಗೆ ವೇತನ ವಿಳಂಬ ಮಾಡ ಬಾರದು, ಅನುದಾನ ರಹಿತ ಶಿಕ್ಷಕರಿಗೆ ಕನಿಷ್ಠ ವೇತನ ನಿಗದಿಪಡಿಸಲು ಯುಜಿಸಿಗೆ ಮತ್ತು ಸರಕಾರವನ್ನು ಆಗ್ರಹಿಸುವುದು, ಶಿಕ್ಷಕರು-ಶಿಕ್ಷಕೇತರ ನೌಕರ ಖಾಲಿ ಹುದ್ದೆಗಳ ಭರ್ತಿ, ಅನುದಾನಿತ ಕಾಲೇಜುಗಳಲ್ಲಿ ಖಾಯಂ ನೇಮಕಾತಿ ವೇಳೆ ಈಗಾಗಲೇ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಪರಿಗಣನೆ, ಅನುದಾನಿತ ಕಾಲೇಜುಗಳಲ್ಲಿ ಖಾಯಂ ಪ್ರಾಂಶುಪಾಲರ ನೇಮಕ, ಅನುದಾನಿತ ಕೋರ್ಸ್‌ಗಳ ಪ್ರವೇಶ ಸ್ಥಗಿತಕ್ಕೆ ವಿರೋಧ, 2006ರಲ್ಲಿ ಜಾರಿಗೊಳಿಸಿದ 6ನೇ ವೇತನ ಶ್ರೇಣಿಯಲ್ಲಿ ಇರುವ ತಾರತಮ್ಯ ನಿವಾರಣೆ, 7ನೇ ಯುಜಿಸಿ ವೇತನ ಪರಿಶೀಲನ ಸಮಿತಿಯ ವರದಿ ಕೂಡಲೇ ಜಾರಿಗೆ ರಾಜ್ಯ ಸರಕಾರಕ್ಕೆ ಆಗ್ರಹ, ಪರೀಕ್ಷೆಗೆ ಸಂಬಂಧಿಸಿದ ಸಂಭಾವನೆ ಮತ್ತು ತುಟ್ಟಿಭತ್ತೆ ಸಹಿತ ಇತರ ಪಾವತಿಗಳ ಪರಿಷ್ಕರಣೆ. ಬದುಕು ಬದಲಿಸಿದ್ದು ವಿವೇಕಾನಂದ ವಿದ್ಯಾಸಂಸ್ಥೆ
ಚಿಕ್ಕಮಗಳೂರಿನ ಕಾಲೇಜೊಂದರಲ್ಲಿ ಪಿಯುಸಿ ಕಲಿಯುತ್ತಿದ್ದ ವೇಳೆ ಕೆಲವು ಕಾರಣಕ್ಕಾಗಿ ವರ್ಗಾ ವಣೆ ಪತ್ರ ನೀಡಿದರು. ಇದರಿಂದ ನನ್ನ ಉನ್ನತ ಕಲಿಕೆಗೆ ತೊಡಕಾಯಿತು. ಈ ವೇಳೆಯಲ್ಲಿ ಮಂಗಳೂರಿಗೆ ಬಂದು ಕೆಲವು ಕಾಲೇಜುಗಳಲ್ಲಿ ಪ್ರವೇಶ ಬಯಸಿದರೂ ಯಾರೂ ನೀಡಲಿಲ್ಲ. ಆಗ ಪುತ್ತೂರಿನಲ್ಲಿ ಮಾಜಿ ಶಾಸಕ ರಾಮ ಭಟ್ ಅವರ ಬಳಿ ತೆರಳಿದೆ. ಅವರೇ ಕಾಲೇಜಿನ ಶುಲ್ಕ ಕಟ್ಟಿ, ಕಾಲೇಜಿಗೆ ಸೇರಿಸಿದರು. ಬಳಿಕ ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ಪೂರ್ಣ ಗೊಳಿಸಿದೆ. ಅದು ನನಗೆ ಪುನರ್ಜನ್ಮ ನೀಡಿದ ಕಾಲೇಜು ಎಂದು ಎಸ್.ಎಲ್. ಭೋಜೇ ಗೌಡ ಹೇಳಿದರು.