Advertisement

ತಿಂಗಳೊಳಗಾಗಿ ನಗರದ ರಸ್ತೆ ಗುಂಡಿಗಳನ್ನು ಮುಚ್ಚಿ

08:45 AM Aug 08, 2020 | Suhan S |

ಬೆಂಗಳೂರು: ನಗರದಲ್ಲಿನ ಎಲ್ಲ ರಸ್ತೆಗುಂಡಿಗಳನ್ನು ಇನ್ನು ಒಂದು ತಿಂಗಳ ಒಳಗಾಗಿ ಮುಚ್ಚುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಮಳೆಯಿಂದ ಉಂಟಾಗುವ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಪಾಲಿಕೆಯಿಂದ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಆಯುಕ್ತರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

Advertisement

ಬಳಿಕ ಸುದ್ದಿಗಾರರ ಜತೆ ಮಾತನಾಡಿ, ನಗರದ ಮುಖ್ಯ ರಸ್ತೆಗಳ ಜವಾಬ್ದಾರಿಯನ್ನು ಪಾಲಿಕೆ ರಸ್ತೆ ಮೂಲಭೂತ ಸೌಕರ್ಯದ ವಿಭಾಗಕ್ಕೇ ನೀಡಲಾಗಿದೆ. ಮಳೆಗಾಲದಲ್ಲಿ ರಸ್ತೆ ಗುಂಡಿಗಳು ಸೃಷ್ಟಿಯಾಗುತ್ತಿವೆ. ಪಾಲಿಕೆ ವತಿಯಿಂದ ಸ್ಥಾಪಿಸಿರುವ ಹಾಟ್‌ ಮಿಕ್ಸ್‌ ಪ್ಲಾಂಟ್‌(ಡಾಂಬರು ಮಿಶ್ರಣ ಘಟಕ)ನಿಂದ ಪ್ರಮುಖ ರಸ್ತೆಗಳಲ್ಲಿ ರಸ್ತೆಗುಂಡಿಗಳನ್ನು ಮುಚ್ಚಬೇಕು. ಈ ಕೆಲಸ ಇನ್ನೊಂದು ತಿಂಗಳಲ್ಲಿ ಮುಗಿಸುವಂತೆ ನಿರ್ದೇಶನ ನೀಡಲಾಗಿದೆ ಎಂದರು.

ಹೊಸ ರಸ್ತೆಗಳ ನಿರ್ವಹಣೆಯನ್ನು ದೋಷ ಮುಕ್ತ ಅವಧಿ(ಡಿಎಲ್‌ಪಿ)ಅಡಿ ಗುತ್ತಿಗೆದಾರರೇ ಮುಚ್ಚಲಿದ್ದಾರೆ. ಪಾಲಿಕೆ 198 ವಾರ್ಡ್‌ಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಈಗಾಗಲೇ ಗುತ್ತಿಗೆದಾರರನ್ನು ನಿಯೋಜನೆ ಮಾಡಲಾಗಿದ್ದು, ಎಲ್ಲಾದರೂ ಗುಂಡಿಗಳು ಬಿದ್ದಿದ್ದರೆ ಅವರೇ ಗುಂಡಿಗಳನ್ನು ಮುಚ್ಚಲಿದ್ದಾರೆ. ಆದರೆ, 110 ಹಳ್ಳಿಯ ವ್ಯಾಪ್ತಿಯಲ್ಲಿ ಜಲಮಂಡಳಿ ಕೆಲಸ ನಡೆಯುತ್ತಿದ್ದು, ಈ ಭಾಗದಲ್ಲಿ ಕಾಮಗಾರಿ ಮುಗಿದ ಕೂಡಲೇ ರಸ್ತೆ ಮರು ನಿರ್ಮಾಣ ಕಾರ್ಯ ಅಥವಾ ರಸ್ತೆ ಗುಂಡಿ ಮುಚ್ಚುವ ಕೆಲಸವಾಗಲಿದೆ ಎಂದರು.

ನಗರದಲ್ಲಿ ಮಳೆ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಪಾಲಿಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಮಳೆಯಿಂದ ಪ್ರವಾಹ ಉಂಟಾಗುವ 56 ಅತಿಸೂಕ್ಷ್ಮ ಹಾಗೂ 153 ಸೂಕ್ಷ್ಮ ಸೇರಿ 209 ಪ್ರವಾಹ ಪೀಡಿತ ಪ್ರದೇಶಗಳನ್ನು ಈಗಾಗಲೇ ಗುರುತಿಸಲಾಗಿದೆ. ಇದರಲ್ಲಿ 28 ಕಡೆರಾಜಕಾಲುವೆ ಉಕ್ಕಿಹರಿಯುವುದನ್ನು ತಡೆಯುವ ನಿಟ್ಟಿನಲ್ಲಿ ಸೆನ್ಸಾರ್‌ ಅಳವಡಿಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಉಳಿದ ಭಾಗದಲ್ಲೂ ಸೆನ್ಸಾರ್‌ ಅಳವಡಿಸಲಾಗುವುದಯ ಎಂದು ತಿಳಿಸಿದರು.

ನಗರದಲ್ಲಿ ರಾಡರ್‌ ಅಳವಡಿಕೆಗೆ ಸೂಚನೆ: ನಗರದ ಆಯ್ದ ಸ್ಥಳಗಳಲ್ಲಿ ರಾಡರ್‌ ಅಳವಡಿಸಲಾಗುವುದು. ಪ್ರತಿ ನಿಮಿಷಕ್ಕೆ ಮಳೆ ಸುರಿಯುವ ಪ್ರಮಾಣ ಹಾಗೂ ಯಾವ ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ ಎನ್ನುವುದು ಇದರಿಂದ ತಿಳಿಯಲಿದೆ. ಅಂದಾಜು 15 ಕೋಟಿ ರೂ. ವೆಚ್ಚದಲ್ಲಿ ರೆಡಾರ್‌ ಅಳವಡಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

Advertisement

ಬಿಬಿಎಂಪಿ ವಿಶೇಷ ಆಯುಕ್ತರಾದ ಜಿ.ಮಂಜುನಾಥ್‌, ರಾಜೇಂದ್ರ ಚೋಳನ್‌, ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಎಂ.ಆರ್‌.ವೆಂಕಟೇಶ್‌,  ಮುಖ್ಯ ಎಂಜಿನಿಯರ್‌ಗಳಾದ ಪ್ರಹ್ಲಾದ್‌ ಹಾಗೂ ರಮೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next