Advertisement
ತಾಲೂಕಿನ ಗಾವಡಗೆರೆ ಹೋಬಳಿಯ ಮಂಚಬಾಯನಹಳ್ಳಿ ಗ್ರಾಮದ ಶಿವರಾಮೇಗೌಡರ ಪುತ್ರ ರಾಜೇಶ್‌ರವರೇ ಕಲ್ಲಂಗಡಿ ಬೆಳೆ ನಷ್ಟಕ್ಕೊಳಗಾಗಿ ಕಣ್ಣೀರಿಡುತ್ತಿರುವ ರೈತ.
Related Articles
Advertisement
ಆದರೆ ಸಸಿಗಳ ಸಾವಿನಿಂದ ಆತಂಕಗೊಂಡು ಬಾಕಿ ಉಳಿದಿದ್ದ ಒಂದೂವರೆ ಎಕರೆ ಬೆಳೆಗೆ ಕ್ರಿಮಿನಾಶಕ ಸಿಂಪಡಿಸದ್ದರಿಂದ ಬೆಳೆ ಉಳಿದಿದ್ದು, ರಸಗೊಬ್ಬರದ ಅಂಗಡಿ ಮಾಲಿಕನಿಗೆ ವಿಚಾರಿಸಿದಾಗ ನಾನೇನು ಮಾಡಕ್ಕಾಗಲ್ಲ, ನಾವು ಜವಾಬ್ದಾರರಲ್ಲವೆಂದು ಹಾರಿಕೆ ಉತ್ತರ ನೀಡುತ್ತಿದ್ದಾರೆಂದು ಕಣ್ಣೀರು ಹಾಕಿರುವ ರೈತ ರಾಜೇಶ್‌ರಿಗೆ ಲಕ್ಷಾಂತರ ರೂ ನಷ್ಟ ಉಂಟಾಗಿದ್ದು, ಮುಂದೆ ಇನ್ಯಾವ ರೈತರಿಗೂ ಈ ಪರಿಸ್ಥಿತಿ ಬರಬಾರದು, ಅಂಗಡಿಯ ಲೈಸನ್ಸ್ ರದ್ದುಗೊಳಿಸಬೇಕು, ಮಾಲಿಕನ ವಿರುದ್ದ ಕ್ರಮ ಕೈಗೊಳ್ಳಬೇಕು, ನಷ್ಟಕ್ಕೆ ಸೂಕ್ತ ಪರಿಹಾರ ಕೊಡಿಸಿಕೊಡುವಂತೆ ರೈತ ರಾಜೇಶ್ ಈ ಸಂಬಂಧ ರಸಗೊಬ್ಬರದ ಅಂಗಡಿ ಮಾಲಿಕರ ವಿರುದ್ದ ಕ್ರಮಕೈಗೊಂಡು ಸೂಕ್ತ ಪರಿಹಾರ ಕೊಡಿಸುವಂತೆ ತಹಸೀಲ್ದಾರ್, ತೋಟಗಾರಿಕೆ ಇಲಾಖೆ ಹಾಗೂ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ರೈತನ ದೂರಿನ ಮೇರೆಗೆ ಸ್ಥಳಕ್ಕೆ ತೋಟಗಾರಿಕಾ ಅಧಿಕಾರಿ ಶರತ್ ಭೇಟಿ ಇತ್ತು ಪರಿಶೀಲನೆ ನಡೆಸಿದ್ದಾರೆ.
ಪ್ರತಿಭಟನೆ ಎಚ್ಚರಿಕೆ:
“ಕಷ್ಟಪಟ್ಟು ಬೆಳೆದಿದ್ದ ಕಲ್ಲಂಗಡಿ ಬೆಳೆ ಕಾಯಿ ಬಿಡುವ ಹಂತದಲ್ಲಿತ್ತು. ರೋಗ ಬಾರದಂತೆ ಮುನ್ನೆಚ್ಚರಿಕೆಯಾಗಿ ಕ್ರಿಮಿನಾಶಕ ಸಿಂಪಡಣೆಗೆ ಮುಂದಾಗಿದ್ದು, ಮುಗ್ದರೈತನಿಗೆ ತರೆಹವಾರಿ ಕ್ರಿಮಿನಾಶಕ ನೀಡಿ ಸರಿಯಾದ ರೀತಿಯಲ್ಲಿ ಶಿಪಾರಸ್ಸು ಮಾಡದ್ದರಿಂದ ಬೆಳೆ ನಷ್ಟ ಉಂಟಾಗಿದೆ. ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು. ಅಂಗಡಿ ಲೈಸನ್ಸ್ ರದ್ದುಗೊಳಿಸಬೇಕು. ಇಲ್ಲದಿದ್ದಲ್ಲಿ ರೈತ ಸಂಘದವತಿಯಿಂದ ಪ್ರತಿಭಟನೆ ನಡೆಸಲಾಗುವುದು.” – ನಟರಾಜ್, ತಾಲೂಕು ಉಪಾಧ್ಯಕ್ಷ, ರೈತಸಂಘ.
ಅಂಗಡಿ ಮಾಲಿಕನಿಗೆ ನೋಟೀಸ್:
ಕಲ್ಲಂಗಡಿ ಬೆಳೆಗೆ ಅಂಗಡಿಯವರು ಕೀಟನಾಶಕ, ಶಿಲಿಂದ್ರನಾಶಕ ಹಾಗೂ ಸಸಿ ಬೆಳವಣಿಗೆಯ ಟಾನಿಕ್ ನೀಡಿರುವುದು, ಮಾಡಿರುವ ಶಿಪಾರಸ್ಸು ಕೂಡ ಅವೈಜ್ಞಾನಿಕವಾಗಿದೆ. ಇಲಾಖೆಯ ತಜ್ಞರ ಶಿಪಾರಸ್ಸಿಲ್ಲದೆ ಕ್ರಿಮಿನಾಶಕ ನೀಡಿರುವುದು ತಪ್ಪು. ಈ ಸಂಬAಧ ಅಂಗಡಿಯವರಿಗೆ ನೋಟೀಸ್ ನೀಡಲಾಗುವುದು.
ರೈತರು ಸಹ ಸ್ವಯಂ ಅಥವಾ ರಸಗೊಬ್ಬರದ ಅಂಗಡಿಯವರು ನೀಡುವ ಕ್ರಿಮಿನಾಶಕ, ಗೊಬ್ಬರಗಳನ್ನು ಅನಾವಶ್ಯಕವಾಗಿ ಬಳಸದೆ ಕೃಷಿ-ತೋಟಗಾರಿಕೆ ಇಲಾಖೆಯ ಗಮನಕ್ಕೆ ತಂದು ಶಿಪಾರಸ್ಸು ಮಾಡುವ ಔಷಧ ಬಳಸಬೇಕು. –ನೇತ್ರಾವತಿ, ತೋಟಗಾರಿಕೆ ಸಹಾಯಕ ನಿರ್ದೇಶಕರು.