Advertisement

ಸದನಕ್ಕೆ ಚಕ್ಕರ್‌: ಕಡ್ಡಾಯ ಹಾಜರಾತಿಗೆ ಸೂಚನೆ

02:40 PM Jun 12, 2017 | |

ಬೆಂಗಳೂರು: ಕಳೆದ ವಾರವಿಡೀ ಶಾಸಕರು ವಿಧಾನಸಭೆ ಕಲಾಪಕ್ಕೆ ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಇರಸುಮುರಸಿಗೆ ಒಳಗಾಗಿದ್ದ ಆಡಳಿತಾರೂಢ ಕಾಂಗ್ರೆಸ್‌ ಹಾಗೂ ಪ್ರತಿಪಕ್ಷ ಬಿಜೆಪಿ ಈ ವಾರವಾದರೂ ತನ್ನ ಸದಸ್ಯರಿಗೆ ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಸೂಚನೆ ನೀಡಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಶಾಸಕಾಂಗ ಪಕ್ಷದ ಸಭೆಗಳಲ್ಲೂ ಸದಸ್ಯರ ಗೈರು ಹಾಜರಿ ಚರ್ಚೆಯಾಗಿ ಕಲಾಪದಲ್ಲಿ ಎಲ್ಲಾ ಸದಸ್ಯರು ಪಾಲ್ಗೊಳ್ಳಬೇಕು ಎಂದು ಸೂಚನೆ ಹೊರಡಿಸಲಾಗಿದೆ. 

Advertisement

ಕಳೆದ ಸೋಮವಾರ ಆರಂಭವಾದ ಅಧಿವೇಶನದಲ್ಲಿ ಮೊದಲ ದಿನವೇ ಕಾಣಿಸಿಕೊಂಡ ಶಾಸಕರ ಗೈರು ಹಾಜರಿ ವಾರಾಂತ್ಯದವರೆಗೂ ಮುಂದುವರಿದಿತ್ತು. ಶಾಸಕರ ಹಾಜರಾತಿ ಪುಸ್ತಕದಲ್ಲಿ ಪ್ರತಿನಿತ್ಯ ಸರಾಸರಿ 119ರಿಂದ 171 ಶಾಸಕರು ಸಹಿ ಹಾಕಿದ್ದರಾದರೂ ಕಲಾಪದಲ್ಲಿ ಅದರ ಅರ್ಧದಷ್ಟು ಸದಸ್ಯರೂ ಕಾಣಿಸಿಕೊಳ್ಳುತ್ತಿರಲಿಲ್ಲ. ಈ ಮಧ್ಯೆ, ಕಲಾಪದಲ್ಲಿ ಸಚಿವರು ಪಾಲ್ಗೊಳ್ಳದೇ ಇರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಇಲಾಖಾ ಅನುದಾನಗಳ nಬೇಡಿಕೆ ಮೇಲೆ ಚರ್ಚೆ ನಡೆಯುತ್ತಿರುವಾಗ ಸದನದಲ್ಲಿ ಒಬ್ಬಿಬ್ಬರು ಸಚಿವರು ಮಾತ್ರ ಇರುತ್ತಾರೆ. ಕಳೆದ ಗುರುವಾರ ಸಚಿವರು ಇಲ್ಲ ಎಂಬ ಕಾರಣಕ್ಕೇ ಕಲಾಪ ಮುಂದೂಡಿದ ಪ್ರಸಂಗವೂ ನಡೆದಿದೆ. ಹೀಗಾಗಿ ಸಚಿವರ ಹಾಜರಿ ಬಗ್ಗೆಯೂ ಗಮನಹರಿಸುವಂತೆ ಸರ್ಕಾರದ ಮುಖ್ಯ ಸಚೇತಕರಿಗೆ ಸ್ಪೀಕರ್‌ ಸೂಚನೆ ನೀಡಿದ್ದಾರೆ. ಅದು ಎಷ್ಟರ ಮಟ್ಟಿಗೆ ಪಾಲನೆಯಾಗುತ್ತದೆ ಎಂಬುದನ್ನು ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next